More

    ಜಿಟಿಟಿಸಿಯಲ್ಲಿ ಪ್ರವೇಶ 27ವರೆಗೆ

    ಕೊಪ್ಪಳ: ತಾಲೂಕಿನ ದದೇಗಲ್​ನ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿಪ್ಲೋಮಾ ಕೋರ್ಸ್​ಗಳಿಗೆ ಪ್ರವೇಶ ಆರಂಭವಾಗಿದ್ದು, ಮೇ 27ವರೆಗೆ ಅವಕಾಶವಿದೆ ಎಂದು ಕೇಂದ್ರದ ವ್ಯವಸ್ಥಾಪಕ ಮೌನೇಶ ಠಾಠೋಡ್​ ತಿಳಿಸಿದರು.

    ಎಸ್ಸೆಸ್ಸೆಲ್ಸಿ ನಂತರ ಮುಂದೇನು ಎಂಬ ಪ್ರಶ್ನೆಗೆ ಜಿಟಿಟಿಸಿ ಉತ್ತರವಾಗಿದೆ. ಡಿಪ್ಲೋಮಾ ಇನ್​ ಟೂಲ್​ ಆ್ಯಂಡ್​ ಡೈ ಮೆಕಿಂಗ್​ ಇಂಜಿನಿಯರಿಂಗ್​ ಹಾಗೂ ಡಿಪ್ಲೋಮಾ ಇನ್​ ಮೆಕಾಟ್ರಾನಿಕ್ಸ್​ ಇಂಜಿನಿಯರಿಂಗ್​, ಡಿಪ್ಲಾಮೋ ಇನ್​ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯೂನಿಕೇಷನ್​ ಇಂಜಿನಿಯರಿಂಗ್​ ಕೋರ್ಸ್​ಗಳನ್ನು ಕೊಪ್ಪಳದಲ್ಲಿ ಆರಂಭಿಸಲಾಗಿದೆ. 2021ರಲ್ಲಿ ಕಾಲೇಜು ಆರಂಭವಾಗಿದ್ದು, ಈ ವರ್ಷ 40 ವಿದ್ಯಾರ್ಥಿಗಳು ಹೊರ ಬಂದು ಉದ್ಯೋಗ ಪಡೆದಿದ್ದಾರೆ.

    ಕಾರ್ಖಾನೆಗಲ್ಲಿ ಕೆಲಸ ಮಾಡಲು ಬೇಕಾದ ಕೌಶಲಗಳನ್ನು ವೃತ್ತಿಪರವಾಗಿ ಕಲಿಸಲಾಗುತ್ತದೆ. ಶೇ.100ರಷ್ಟು ಉದ್ಯೋಗ ಭರವಸೆಯನ್ನು ನೀಡುತ್ತಿದ್ದೇವೆ. ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದ್ದು, ಸ್ಥಳಿಯ ಹಾಗೂ ಪ್ರಸಿದ್ಧ ಕಾರ್ಖಾನೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಅವರಿಗೆ ಅಗತ್ಯವಿರುವ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಎಸ್ಸೆಸ್ಸೆಲ್ಸಿ ಉತ್ತೀರ್ಣ, ಪಿಯುಸಿ ಅನುತ್ತೀರ್ಣರಾದವರು ಕೋರ್ಸ್​ ಸೇರಬಹುದು. ಐಟಿಐ ಮತ್ತು ವಿಜ್ಞಾನ ವಿಭಾಗದಲ್ಲಿ ದ್ವೀತಿಯ ಪಿಯುಸಿ ಪಾಸಾದವರಿಗೆ ನೇರವಾಗಿ ಎರಡನೇ ವರ್ಷಕ್ಕೆ ಪ್ರವೇಶ ನೀಡಲಾಗುವುದು. ವರ್ಷಕ್ಕೆ 31 ಸಾವಿರ ರೂ. ಶುಲ್ಕವಿದ್ದು, ಸರ್ಕಾರ ಶಿಷ್ಯವೇತನ ನೀಡಲಿದೆ. ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್​ ಸೌಲಭ್ಯವಿದೆ. ಆಧುನಿಕ ಯಂತ್ರಗಳನ್ನು ಬಳಸಿ ತರಬೇತಿ ನೀಡಲಾಗುವುದು. ರಾಜ್ಯ, ದೇಶ ಅಷ್ಟೇ ಅಲ್ಲದೇ ಅಂತರಾಷ್ಟ್ರೀಯ ಮಟ್ಟದ ಕಂಪನಿಗಳಲ್ಲೂ ಕೆಲಸ ಮಾಡಲು ಬೇಕಾದ ತರಬೇತಿ ನಮ್ಮ ಕಾಲೇಜಿನಲ್ಲಿ ನೀಡಲಾಗುವುದು. ಮಾಹಿತಿಗಾಗಿ 7507094445, 9902397658, 9986088894, 8792919763ಸಂಖ್ಯೆಗೆ ಸಂಪರ್ಕಿಸಬಹುದೆಂದು ತಿಳಿಸಿದರು. ಇಂಜಿನಿಯರ್​ ಅಂಜಿನಪ್ಪ, ಉಪನ್ಯಾಸಕರಾದ ಮುತ್ತಣ್ಣ, ಷಕ್ಷಾವಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts