More

    ಭಕ್ತರಿಗೆ ಅನಾನೂಕುವಾಗದಂತೆ ಕ್ರಮವಹಿಸಿ, ಡಿಸಿ ನಲಿನ್​ ಅತುಲ್​ ಸೂಚನೆ

    ಕೊಪ್ಪಳ: ನಾಡಿನ ಶಕ್ತಿ ದೇವತೆ ಹುಲಿಗಿಯ ಹುಲಿಗೆಮ್ಮ ದೇವಿ ಜಾತ್ರೋತ್ಸವ ಮೇ 30ರಿಂದ ಜೂನ್​ 3ವರೆಗೆ ನಡೆಯಲಿದೆ. ಜಾತ್ರೆಗೆ ಆಗಮಿಸುವ ಭಕ್ತರಿಗೆ ಅಗತ್ಯ ಸೌಕರ್ಯ ಕಲ್ಪಿಸಿ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಸೂಚಿಸಿದರು.

    ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

    ಶುದ್ಧ ಕುಡಿವ ನೀರು, ಸ್ವಚ್ಛತೆ ಕಾಪಾಡಿ. ನೀರಿನ ಟ್ಯಾಂಕರ್​, ಶುದ್ಧ ಕುಡಿವ ನೀರಿನ ಟಕ, ಅರವಟಿಕೆ ವ್ಯವಸ್ಥೆ ಮಾಡಿ. ದೇವಸ್ಥಾನ ಸುತ್ತಮುತ್ತ ಸ್ವಚ್ಛತೆ ಇರಲಿ. ಗ್ರಾಮ ಸಂಪರ್ಕಿಸುವ ರಸ್ತೆಗಳನ್ನು ಸ್ವಚ್ಛಗೊಳಿಸಿ. ನಿರಂತರ ವಿದ್ಯುತ್​ ಪೂರೈಸಿ. ವಿಶೇಷ ತಂಡ ರಚಿಸಿ ಸಮಸ್ಯೆ ಆಗದಂತೆ ನೋಡಿಕೊಳ್ಳಿ. ಹೆಚ್ಚುವರಿ ವಿದ್ಯುತ್​ ಪರಿವರ್ತಕ ಕಾಯ್ದಿರಿಸಿಕೊಳ್ಳಿ. ರಾತ್ರಿ ವೇಳೆ ಯಾವುದೇ ಕಾರಣಕ್ಕೂ ವಿದ್ಯುತ್​ ಸ್ಥಗಿತಗೊಳಿಸಬೇಡಿ ಎಂದು ತಾಕೀತು ಮಾಡಿದರು.

    ಅಸಂಖ್ಯ ಭಕ್ತರು ಆಗಮಿಸಲಿದ್ದು, ಜಾತ್ರಾ ಆವರಣದಲ್ಲಿ ಎರಡು ತಾತ್ಕಾಲಿಕ ಆರೋಗ್ಯ ಕೇಂದ್ರ ಆರಂಭಿಸಿ. ಅಗತ್ಯ ಔಷಧ, ಆ್ಯಂಬುಲೆನ್ಸ್​ ಕಾಯ್ದರಿಸಿ. ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ನಿಯೋಜಿಸಿ. ವಾಹನ ನಿಲುಗಡೆಗೆ ದ್ವಿಚಕ್ರ, ನಾಲ್ಕು ಚಕ್ರ ವಾಹನ ಪಾರ್ಕಿಂಗ್​ ಪ್ರತ್ಯೇಕವಾಗಿ ನಿರ್ಮಿಸಿ. ಭಾರಿ ವಾಹನಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ. ನೀತಿ ಸಂಹಿತೆ ಜಾರಿ ಕಾರಣ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಕರ್ತವ್ಯಕ್ಕೆ ತೆರಳಿದ್ದಾರೆ. ಹೀಗಾಗಿ ಇರುವ ಪೊಲೀಸರೊಂದಿಗೆ ಗೃಹ ರಕ್ಷಕ ದಳ ಸಿಬ್ಬಂದಿ ನಿಯೋಜಿಸಿ ಭದ್ರತೆ ಕಲ್ಪಿಸಿ. ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಲು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ಕ್ರಮವಹಿಸುವಂತೆ ನಿರ್ದೇಶಿಸಿದರು.

    ಸುಗಮ ಸಾರಿಗೆಗಾಗಿ ಹೆಚ್ಚುವರಿ ಬಸ್​ ಮಾರ್ಗ ರಚಿಸಿ. ಪ್ರಾಣಿ ಬಲಿ ನಿಷೇಧವಿದ್ದು, ಪೊಲೀಸರು, ತಹಸೀಲ್ದಾರ್​, ಪಶು ಸಂಗೋಪನೆ ಹಾಗೂ ದೇವಸ್ಥಾನ ಅಧಿಕಾರಿಗಳು ಈ ಬಗ್ಗೆ ಎಚ್ಚರಿಕೆವಹಿಸಬೇಕು. ಜಾತ್ರಾ ಸಮಯದಲ್ಲಿ ಹುಲಿಗಿ ಗ್ರಾಮದಲ್ಲಿ ಮದ್ಯಪಾನ, ಮದ್ಯ ಮಾರಾಟ ನಿಷೇಧವಿದ್ದು, ಅಬಕಾರಿ ಅಧಿಕಾರಿಗಳು ಆದೇಶ ಉಲ್ಲಂನೆ ಆಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.

    ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಸಹಾಯಕ ಆಯುಕ್ತ ಕ್ಯಾ.ಮಹೇಶ ಮಾಲಗಿತ್ತಿ, ತಹಸೀಲ್ದಾರ್​ ವಿಠ್ಠಲ್​ ಚೌಗಲಾ, ದೇವಸ್ಥಾನ ಇಒ ಅರವಿಂದ ಸುತಗುಂಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts