More

  ಕೃಷಿ ಚಟುವಟಿಕೆಗಳಿಗೆ ಸಿದ್ಧತೆ ಮಾಡಿಕೊಳ್ಳಿ, ಡಿಸಿ ನಲಿನ್​ ಅತುಲ್​ ಸೂಚನೆ

  ಕೊಪ್ಪಳ: ಮಳೆಗಾಲ ಆರಂಭವಾಗಲಿದ್ದು, ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ನಿಗಾವಹಿಸಿ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಅಧಿಕಾರಿಗಳಿಗೆ ಸೂಚಿಸಿದರು.

  ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬರ ಹಾಗೂ ಪೂರ್ವ ಮುಂಗಾರು ಸಿದ್ಧತೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು.

  ಕಳೆದ ಮುಂಗಾರಿನಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ತಹಸೀಲ್ದಾರ್​ಗಳು ಖುದ್ದಾಗಿ ತೆರಳಿ ಪರಿಶೀಲಿಸಿ. ಹಿಂದೆ ಆದ ಹಾನಿ ಮರುಕಳಿಸದಂತೆ ಎಚ್ಚರವಹಿಸಿ. ಕುಡಿವ ನೀರು, ಚರಂಡಿ ನಿರ್ವಹಣೆ ಸೇರಿ ಮಳೆಯಿಂದ ಸಂಭವಿಸಬಹುದಾದ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿಕೊಳ್ಳಿ. ಅಗತ್ಯ ಪರಿಹಾರ ಕ್ರಮಗಳನ್ನು ಕಲ್ಪಿಸಲು ಸಿದ್ಧವಾಗಿರಿ. ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ದೇಶನ ನೀಡಿ. ಈವರೆಗೆ ಸಂಭವಿಸಿದ ಹಾನಿಗೆ ಪರಿಹಾರ ವಿತರಿಸಿದ ಬಗ್ಗೆ ಪರಿಶೀಲಿಸಿ. ಬಾಕಿ ಇದ್ದಲ್ಲಿ ಶುಕ್ರವಾರದೊಳಗೆ ಸಲ್ಲಿಸಿ ಪಾವತಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

  ಬರ ಹಾಗೂ ಅತಿವೃಷ್ಠಿಯಿಂದ ಉಂಟಾದ ಬೆಳೆ ಹಾನಿಗಳಲ್ಲಿ ಅಗತ್ಯ ದಾಖಲೆ ಇದ್ದವರಿಗೆ ಪರಿಹಾರ ವಿತರಿಸಲಾಗಿದೆ. ಕೆಲವು ರೈತರು ್ರೂಟ್ಸ್​ಐಡಿ, ಸರ್ವೇ ಸಂಖ್ಯೆ, ಬ್ಯಾಂಕ್​ ಖಾತೆಗೆ ಸಂಬಂಧಿಸಿದ ಸಮಸ್ಯೆಗಳಿರುವುದರಿಂದ ಪರಿಹಾರದಿಂದ ವಂಚಿತರಾಗಿದ್ದಾರೆ. ಪರಿಹಾರ ಮೊತ್ತ ಪಡೆಯಲು ಇರುವ ಸಮಸ್ಯೆಗಳ ಕುರಿತು ದೂರು/ಅಹವಾಲು ಸಲ್ಲಿಸಲು ತಾಲೂಕು, ಜಿಲ್ಲಾ ಹಂತದಲ್ಲಿ ಕಾಲ್​ ಸೆಂಟರ್​ ತೆರೆಯಿರಿ. ಬರ ನಿರ್ವಹಣೆಗೆ ಆರಂಭವಾದ ಸಹಾಯವಾಣಿ ಸಂಖ್ಯೆಗಳನ್ನು ಪರಿಹಾರ ಕಾರ್ಯಕ್ಕೂ ಬಳಸಿಕೊಳ್ಳಿ. ಎಲ್ಲ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ರೈತರಿಗೆ ಅಗತ್ಯ ಮಾಹಿತಿ ನೀಡಿ. ದಾಖಲೆ ಕೊರತೆ ಇದ್ದರೆ, ಪಡೆಯುವ ಸ್ಥಳ ಹಾಗೂ ವಿಧಾನದ ಬಗ್ಗೆಯೂ ಮಾಹಿತಿ ಒದಗಿಸಿ ಎಂದರು.

  ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ಸಹಾಯಕ ಆಯುಕ್ತ ಕ್ಯಾ.ಮಹೇಶ್​ ಮಾಲಗಿತ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್​, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ, ತಹಸೀಲ್ದಾರ ವಿಠ್ಠಲ್​ ಚೌಗಲಾ ಇತರರಿದ್ದರು.

  ಬರ ನಿರ್ವಹಣೆ ಸುಗಮ
  ಕೊಪ್ಪಳ ತಾಲೂಕಿನ ಟಣಕನಕಲ್​, ನಾಗೇಶನಹಳ್ಳಿ ಹಾಗೂ ಜಬ್ಬಲಗುಡ್ಡ ಗ್ರಾಮಗಳಿಗೆ ನಿತ್ಯ 13 ಟ್ಯಾಂಕರ್​ ನೀರು ಪೂರೈಸಲಾಗುತ್ತಿದೆ. ಮೇ 10ರ ಅಂತ್ಯಕ್ಕೆ ಜಿಲ್ಲಾದ್ಯಂತ 5,28,994.91 ಟನ್​ ಮೇವು ಲಭ್ಯವಿದೆ. 26,659 ಮಿನಿ ಮೇವಿನ ಕಿಟ್​ಗಳಲ್ಲಿ 9,167 ರೈತರಿಗೆ 21,887 ಕಿಟ್​ ವಿತರಿಸಲಾಗಿದೆ. ಏಪ್ರಿಲ್​ನಿಂದ ಮೇ ವರೆಗೆ ಸುರಿದ ಮಳೆಯಿಂದ 3 ಮಾನವ ಜೀವ ಹಾನಿಯಾಗಿದ್ದು, ತಲಾ ರೂ.5 ಲಕ್ಷದಂತೆ 15 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. 20 ಜಾನುವಾರು ಸತ್ತಿದ್ದು, 3,59,500ರೂ. ಪರಿಹಾರ ವಿತರಿಸಲಾಗಿದೆ. ಜಿಲ್ಲೆಯ ಏಳು ತಾಲೂಕುಗಳ ತಹಸೀಲ್ದಾರ್​ ಖಾತೆಯಲ್ಲಿ 3.20 ಕೋಟಿ ರೂ. ಅನುದಾನವಿದೆ ಎಂದು ಡಿಸಿ ಮಾಹಿತಿ ನೀಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts