More

    ಕೋಳಿ ಫಾರ್ಮ್​ನಲ್ಲಿ ನಾಯಿಗಾಯ್ತು ಕ್ವಾರಂಟೈನ್​- ಎ.ಸಿ ಬದಲು ತಣ್ಣೀರು!

    ಖಾನಾಪುರ (ಮಹಾರಾಷ್ಟ್ರ): ಕರೊನಾ ವೈರಸ್​ ವ್ಯಾಪಿಸಿದಂದಿನಿಂದಲೂ ಕ್ವಾರಂಟೈನ್​ ಎನ್ನುವುದು ಮಾಮೂಲಿ ಆಗಿಬಿಟ್ಟಿದೆ. ಸೋಂಕು ಬಂದಿಲ್ಲದಿದ್ದರೂ ಸೋಂಕು ತಗುಲಿರುವ ಸಂದೇಹದಿಂದ ಕ್ವಾರಂಟೈನ್​ ಆಗುವುದು ಒಂದೆಡೆಯಾದರೆ, ಸೋಂಕು ತಗುಲಿರುವುದು ಪತ್ತೆಯಾದರೆ, ಉಳಿದವರ ಸಂಪರ್ಕಕ್ಕೆ ಬರದೇ ಕ್ವಾರಂಟೈನ್​ ಆಗುವುದು ಇನ್ನೊಂದೆಡೆ.

    ಅಂತೆಯೇ, ಮನುಷ್ಯರು ಮಾತ್ರವಲ್ಲದೇ ನಾಯಿ, ಬೆಕ್ಕುಗಳಿಗೂ ಕರೊನಾ ಸೋಂಕು ಹರಡಿರುವುದು ಇದಾಗಲೇ ಕೆಲವು ಕಡೆಗಳಲ್ಲಿ ಬೆಳಕಿಗೆ ಬಂದಿವೆ. ಮನುಷ್ಯರಿಂದ ಸೋಂಕು ಪ್ರಾಣಿಗಳಿಗೂ ಅಂಟುವ ಸಾಧ್ಯತೆಗಳ ಬಗ್ಗೆ ಈಗಾಗಲೇ ಕೆಲವು ಕಡೆಗಳಲ್ಲಿ ವರದಿಯಾಗಿದೆ.

    ಇದನ್ನೂ ಓದಿ: 5 ಸಾವಿರಕ್ಕೆ ಕಂದನ ಮಾರಿದ ತಾಯಿ! ಕೊಂಡರು ಆಸ್ಪತ್ರೆ ಸಿಬ್ಬಂದಿ! ಮುಂದೇನಾಯ್ತು?

    ಈ ಹಿನ್ನೆಲೆಯಲ್ಲಿ ಇದೀಗ ಮನುಷ್ಯರಂತೆಯೇ ಪ್ರಾಣಿಗಳಿಗೂ ಕ್ವಾರಂಟೈನ್​ ಮಾಡುವ ಅಗತ್ಯತೆ ಇದೆ. ತಮ್ಮ ಮುದ್ದಿನ ಸಾಕುಪ್ರಾಣಿಗೆ ಸೋಂಕು ತಗುಲಬಾರದು ಎನ್ನುವ ಕಾರಣಕ್ಕೆ ದೂರದಿಂದ ಪ್ರವಾಸ ಮಾಡಿಬಂದವರೆಲ್ಲಾ ತಮ್ಮ ಜತೆ, ನಾಯಿ-ಬೆಕ್ಕನ್ನೂ ಕ್ವಾರಂಟೈನ್​ಗೆ ಒಳಪಡಿಸುವುದು ಅನಿವಾರ್ಯವಾಗಿದೆ.

    ಅಂಥದ್ದೇ ಒಂದು ಘಟನೆ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಖಾನಾಪೂರ ತಾಲೂಕಿನ ಬೇನಾಪೂರ ಗ್ರಾಮದ ನಡೆದಿದೆ. ಕೋಲ್ಕತಾದಲ್ಲಿ ಚಿನ್ನದ ವ್ಯಾಪಾರ ಮಾಡುತ್ತಿದ್ದ ಶಿಂಧೆಯವರು ಲಾಕ್​ಡೌನ್​ ಹಿನ್ನೆಲೆಯಲ್ಲಿ ತಮ್ಮೂರು ಬೇನಾಪುರಕ್ಕೆ ಆಗಮಿಸಿದ್ದಾರೆ. ಕೋಲ್ಕತಾದಿಂದ ಇವರ ಗ್ರಾಮ ಸುಮಾರು 2 ಸಾವಿರ ಕಿಲೋ ಮೀಟರ್​ ದೂರ ಇದೆ. ಇಷ್ಟು ದೂರದವರೆಗೆ ಪ್ರಯಾಣ ಬೆಳೆಸಿರುವ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

    ಇದನ್ನೂ ಓದಿ: ಮಾವಿನ ತೋಟದಲ್ಲಿ ಬಾವಲಿಗಳ ಹೆಣದ ರಾಶಿ: ಇನ್ನೇನು ಕಾದಿದೆಯೋ ಆಪತ್ತು!

    ಪ್ರಾಣಿಗಳಿಗೂ ಕರೊನಾ ಸೋಂಕು ತಗುಲಬಹುದು ಎಂಬ ಸಂದೇಹ ಇರುವ ಕಾರಣ, ತಮ್ಮದೇ ಕೋಳಿ ಫಾರಂನಲ್ಲಿ ಅವರು ತಮ್ಮ ಮುದ್ದು ನಾಯಿಯನ್ನೂ ಕ್ವಾರಂಟೈನ್​ನಲ್ಲಿ ಇಟ್ಟಿದ್ದಾರೆ. ಹೇಳಿ-ಕೇಳಿ ಇದು ಅತ್ಯುತ್ತಮ ಜಾತಿಯ ದುಬಾರಿ ನಾಯಿ. ಆದ್ದರಿಂದ ಅದಕ್ಕೆ ಯಾವುದೇ ರೀತಿಯ ಸೋಂಕು ತಗುಲಬಾರದು ಎಂಬುದು ನಮ್ಮ ಉದ್ದೇಶ ಎಂದಿದೆ ಶಿಂಧೆ ಕುಟುಂಬ.

    ಸಾಲದು ಎಂಬುದಕ್ಕೆ ಈ ನಾಯಿಗೆ ಈಗ ದಿನಕ್ಕೆರಡು ಬಾರಿ ತಣ್ಣೀರಿನ ಸ್ನಾನ. ಕಾರಣ ಇಷ್ಟೇ. ಕೋಲ್ಕತದಲ್ಲಿ ಇರುವಾಗ ನಾಯಿಗೆ ನಿತ್ಯವೂ ಏರ್​ ಕಂಡೀಷನ್​ ಸೇವೆ ಇರುತ್ತಿತ್ತು. ಆದರೆ ಕೋಳಿ ಫಾರಂನಲ್ಲಿ ಈ ವ್ಯವಸ್ಥೆ ಇಲ್ಲ. ಅಷ್ಟೇ ಅಲ್ಲದೆ ಎ.ಸಿ ಹಾಕುವುದರಿಂದ ಕರೊನಾ ಸೋಂಕು ತಗುಲಬಹುದು ಎಂಬ ಆತಂಕ. ಆದ್ದರಿಂದ ಅದಕ್ಕೆ ಸೆಖೆ ಆಗಬಾರದು ಎನ್ನುವ ಕಾರಣದಿಂದ ತಣ್ಣೀರಿನ ಸ್ನಾನ ಮಾಡಿಸುತ್ತಿದ್ದೇವೆ. ಸ್ನಾನ ಮಾಡಿಸುವಾಗಲೂ ಎಲ್ಲಾ ರೀತಿಯ ಜಾಗೃತೆ ವಹಿಸುತ್ತಿದ್ದೇವೆ ಎಂದಿದೆ ಈ ಕುಟುಂಬ. (ಏಜೆನ್ಸೀಸ್​)

    ಭಾವಿ ಪತಿಗೆ ಕಳಿಸಿದಳೊಂದು ಜೋಕ್​- ಆತನ ರಿಪ್ಲೈ ನೋಡಿ ಮದುವೆ ಮುರಿದೇ ಬಿಟ್ಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts