ಅಪ್ಪು ಹೋದ ಜಾಗಕ್ಕೆ ನಾನೂ ಹೋಗುತ್ತೇನೆ ಎಂದು ಆತ್ಮಹತ್ಯೆ ಮಾಡಿಕೊಂಡ ಪುನೀತ್ ರಾಜಕುಮಾರ್​ ಅಭಿಮಾನಿ

death
ಸಾಂದರ್ಭಿಕ ಚಿತ್ರ
Published on

ತುಮಕೂರು: ಪುನೀತ್ ರಾಜಕುಮಾರ್ ಅವರ ಅಗಲಿಕೆಯಿಂದ ನೊಂದುಕೊಂಡಿರುವ ಅಭಿಮಾನಿಗಳು ಮತ್ತದೇ ತಪ್ಪು ಕೆಲಸಕ್ಕೆ ಮುಂದಾಗುತ್ತಿದ್ದು, ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಅಪ್ಪು ಹೋದ ಜಾಗಕ್ಕೆ ನಾನೂ ಹೋಗುತ್ತೇನೆ ಎಂಬುದಾಗಿ ಪುನೀತ್​ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತುಮಕೂರಿನ ಭರತ್ (30) ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ. ಇಲ್ಲಿನ ಹೆಬ್ಬೂರಿನ ಕೋಡಿಪಾಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಾನು ಅಪ್ಪು ಅವರ ಅಭಿಮಾನಿಯಾಗಿದ್ದು, ಅವರ ಸಾವನ್ನು ಸಹಿಸಲಾಗುತ್ತಿಲ್ಲ ಎಂದು ಡೆತ್​ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ.

ಗಾರೆ ಕೆಲಸ ಮಾಡಿಕೊಂಡಿದ್ದ ಭರತ್​, ಅಪ್ಪು ಹೋದ ಜಾಗಕ್ಕೆ ನಾನೂ ಹೋಗುತ್ತೇನೆ, ಪುನೀತ್ ಅವರಂತೆ ನನ್ನ ಕಣ್ಣುಗಳನ್ನೂ ದಾನ ಮಾಡಿ ಎಂದು ಬರೆದಿಟ್ಟು ಕೋಡಿಪಾಳ್ಯದ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾನೆ. ಈ ಆತ್ಮಹತ್ಯೆ ನಿನ್ನೆ ನಡೆದಿದ್ದು, ಮನೆಯವರು ಕಣ್ಣನ್ನು ದಾನ ಮಾಡಿದ್ದಾರೆ. ಈ ಪ್ರಕರಣ ಇಂದು ಬೆಳಕಿಗೆ ಬಂದಿದೆ. ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net