ಹಾವೇರಿಯಲ್ಲಿ ಬೈಕ್​ನಲ್ಲಿ ಕಾಣಿಸಿದ ನಾಗರಹಾವು; ಬಿಡಿಭಾಗ ಬಿಚ್ಚಿ ಹೊಡೆದು ಸಾಯಿಸಿದ ಜನರು..

Snake
Published on

ಹಾವೇರಿ: ಬೈಕ್​ವೊಂದರಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ಅದನ್ನು ಓಡಿಸುವ ಬದಲು ಜನರು ಬೈಕ್​ನ ಬಿಡಿಭಾಗ ಬಿಚ್ಚಿ ಆ ಹಾವನ್ನು ಹೊಡೆದು ಸಾಯಿಸಿದ ಪ್ರಕರಣ ವರದಿಯಾಗಿದೆ. ಹಾವೇರಿ ತಾಲೂಕಿನ ಹಿರೇಲಿಂಗದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕೃಷಿಕ ರಮೇಶ್ ಚಿನಕಾಳಿ ಎಂಬುವವರ ಬೈಕ್​ನಲ್ಲಿ ಸೇರಿಕೊಂಡಿದ್ದ ನಾಗರಹಾವು ಜನರ ಕ್ರೌರ್ಯಕ್ಕೆ ಬಲಿಯಾಗಿದೆ. ಅವರು ಕೆಲಸಕ್ಕೆಂದು ಜಮೀನಿಗೆ ಬೈಕ್ ತೆಗೆದುಕೊಂಡು ಹೋಗಿದ್ದರು. ಮನೆಗೆ ಮರಳುವಾಗ ಬೈಕ್​ ಸೀಟ್​ ಅಡಿಯಲ್ಲಿ ಹಾವು ಸೇರಿಕೊಂಡಿತ್ತು.

ಅಲ್ಲಿ ಹಾವು ಇರುವುದನ್ನು ಕಂಡು ಅಜ್ಜಿಯೊಬ್ಬರು ಬೆಚ್ಚಿಬಿದ್ದಿದ್ದರು. ಎಷ್ಟು ಹೊತ್ತಾದರೂ ಹಾವು ಪೂರ್ಣವಾಗಿ ಹೊರಗೆ ಬರದ್ದರಿಂದ ಆ ಜಾಗದಲ್ಲಿ ಸೀಮೆಎಣ್ಣೆ ಹಾಕಿ ಹಾವು ಅಲ್ಲಿಂದ ಹೊರಬರುವಂತೆ ಮಾಡಿ ಕೆಳಕ್ಕೆ ಬೀಳಿಸಿದ ಜನರು ಅದನ್ನು ಹೊಡೆದು ಸಾಯಿಸಿದ್ದಾರೆ. ಈ ಬಗ್ಗೆ ಉರಗಪ್ರಿಯರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಹಾವನ್ನು ಹೊಡೆದು ಸಾಯಿಸುವ ಬದಲು ಉರಗಪರಿಣತರನ್ನು ಕರೆಸಿ ಹಿಡಿಸಿ ಕಾಡಿಗೆ ಬಿಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net