

ಯಾದಗಿರಿ: ಎಂಟು ತಿಂಗಳಿನಿಂದ ಸಂಪರ್ಕದಲ್ಲಿದ್ದ ಮಾವನ ಮಗನಿಂದ ಮತ್ತೆ ಮತ್ತೆ ಅತ್ಯಾಚಾರಕ್ಕೆ ಒಳಗಾಗಿರುವ ಯುವತಿ ಇದೀಗ ಎರಡು ದಿನಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದಾಳೆ. ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರಸಣಗಿ ಗ್ರಾಮದ ಹನುಮಂತ ಎಂಬ ಯುವಕನ ವಿರುದ್ಧ ಅತ್ಯಾಚಾರ ದೂರು ನೀಡಲಾಗಿದೆ.
ದೂರು ನೀಡಿರುವ ಯುವತಿ ಪಾಲಕರ ಜೊತೆ ಮಹಾರಾಷ್ಟ್ರದ ಪುಣೆಯಲ್ಲಿ ವಾಸವಿದ್ದು, ಎಂಟು ತಿಂಗಳ ಹಿಂದೆ ಅಜ್ಜಿ ತೀರಿ ಹೋಗಿದ್ದಾಗ ಊರಿಗೆ ಬಂದಿದ್ದಳು. ಆಗ ಸಂಪರ್ಕಕ್ಕೆ ಬಂದಿದ್ದ ಯುವಕ, ವರಸೆಯಲ್ಲಿ ಮಾವನ ಮಗನಾಗಬೇಕಿದ್ದವ ಆಕೆಯನ್ನು ಮದುವೆ ಆಗುವುದಾಗಿ ಆಮಿಷ ತೋರಿದ್ದಾನೆ.
ನಂತರ ಯುವತಿ ಇದ್ದ ಜಾಗಕ್ಕೆ ಆಗಾಗ ಹೋಗಿ ಅತ್ಯಾಚಾರ ಎಸಗಿದ್ದ ಎನ್ನಲಾಗಿದ್ದು, ಎರಡು ದಿನಗಳ ಹಿಂದೆ ಈತನ ವಿರುದ್ಧ ಯಾದಗಿರಿ ಮಹಿಳಾ ಠಾಣೆಯಲ್ಲಿ ದೂರು ನೀಡಲಾಗಿದೆ. ಮದುವೆ ಆಗುವುದಾಗಿ ಹೇಳಿದ್ದ ಹನುಮಂತ, ಬಳಿಕ ಬೇರೆ ಯುವತಿ ಜೊತೆ ಮದುವೆಯಾಗಲು ಮುಂದಾದಾಗ ವಂಚನೆ ಬೆಳಕಿಗೆ ಬಂದಿದ್ದು, ದೂರು ನೀಡಲಾಗಿದೆ.