ಡಾ.ವಿಷ್ಣುಗೆ ಪೂಜೆ ಮಾಡ್ಬೇಕು ಪ್ಲೀಸ್​ ಬಿಟ್ಬಿಡಿ... ಎಂದು ಅಧಿಕಾರಿಗಳ ಕಾಲಿಗೆ ಬಿದ್ರೂ ಪ್ರತಿಮೆ ತೆರವು ಮಾಡ್ಬಿಟ್ರು

1167169
Published on

ಮೈಸೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಹಿನ್ನೆಲೆ ನಗರದಲ್ಲಿ ರಾತ್ರೋರಾತ್ರಿ ಅಭಿಮಾನಿಗಳು ವಿಷ್ಣು ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದಾರೆ.

ಪಾಲಿಕೆಯ ಅನುಮತಿ ಪಡೆಯದೆ ಅಭಿಮಾನಿಗಳು ರಾತ್ರೋರಾತ್ರಿ ಡಾ.ವಿಷ್ಣುವರ್ಧನ್ ಅವರ ಪ್ರತಿಮೆ ಪ್ರತಿಷ್ಠಾಪಿಸಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಧಿಕಾರಿಗಳು ಮತ್ತು ಎಸಿಪಿ‌ ಶಿವಶಂಕರ್ ಪರಿಶೀಲನೆ ನಡೆಸಿದರು. ಪ್ರತಿಮೆಯನ್ನು ಕಳಚಿ, ಬಿಡಿ ಭಾಗಗಳಾಗಿ ಮಾಡಿ ಪ್ರತಿಮೆಯನ್ನು ತೆರವು ಮಾಡಿ ಗೂಡ್ಸ್ ವಾಹನದಲ್ಲಿ ಹಾಕಿಕೊಂಡು ಪೊಲೀಸರು ಹೊರಟರು.

ಪೂಜೆ ನೆರವೇರಿಸುವವರೆಗಾದರೂ ಉಳಿಸುವಂತೆ ಪಾಲಿಕೆ ಅಧಿಕಾರಿಗಳ ಕಾಲಿಗೆ ಬಿದ್ದು ಅಭಿಮಾನಿಗಳು ಕೇಳಿಕೊಂಡರು. ಅಭಿಮಾನಿಗಳ ಮನವಿಗೂ ಕಿವಿಗೊಡದೆ ವಿಷ್ಣು ಪ್ರತಿಮೆಯನ್ನು ತೆರವು ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net