ತುಂಬೆ ತಿರುವಿನಲ್ಲಿ ಪಿಕಪ್ ಪಲ್ಟಿ: ಚಾಲಕನಿಗೆ ಗಾಯ

web - thumbhe vahana
ರಾಷ್ಟ್ರೀಯ ಹೆದ್ದಾರಿ 75ರ ತುಂಬೆ ತಿರುವಿನಲ್ಲಿ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿರುವುದು.
Published on

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ತುಂಬೆ ತಿರುವಿನಲ್ಲಿ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾಗೂ ರಸ್ತೆಗೆ ತಾಗಿಕೊಂಡು ಉರುಳಿ ಬಿದ್ದಿದೆ. ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ವಾಹನವೊಂದರ ಇಂಜಿನ್ ತೆಗೆದುಕೊಂಡು ಹೋಗುತ್ತಿದ್ದ ಪಿಕಪ್ ಅಪಘಾತಕ್ಕೀಡಾಗಿದ್ದು ಚಾಲಕ ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕಳೆದ ವಾರ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್ ಇಲ್ಲಿ ಉರುಳಿ ಬಿದ್ದಿತ್ತು.

ಅಪಾಯಕಾರಿ ರಸ್ತೆ

ಕಡೆಗೋಳಿಯಿಂದ ತುಂಬೆ ಕಡೆಗೆ ಬರುವ ರಸ್ತೆ ಇಳಿಜಾರು ತಿರುವು ಹೊಂದಿದ್ದು, ಅತಿ ವೇಗದಿಂದ ಹೋಗುವ ವಾಹನಗಳಿಗೆ ನಿಯಂತ್ರಣ ಸಿಗದೆ ಅಪಘಾತಗಳು ಸಂಭವಿಸುತ್ತವೆ. ಮೇಲ್ಭಾಗದಲ್ಲಿ ಗುಡ್ಡ ಪ್ರದೇಶವಿದ್ದು ಮಳೆ ಬಂದಾಗ ಗುಡ್ಡದ ನೀರು ರಸ್ತೆಯಲ್ಲಿಯೇ ಹರಿಯುವುದರಿಂದ ರಸ್ತೆಯಲ್ಲಿ ಹೋಗುವ ವಾಹನಗಳಿಗೆ ನಿಯಂತ್ರಣ ಸಿಗುವುದು ಕಷ್ಟ. ಇದರಿಂದಾಗಿ ಈ ರಸ್ತೆಯಲ್ಲಿ ಪದೇಪದೆ ವಾಹನಗಳು ಉರುಳಿ ಬೀಳುತ್ತಿರುತ್ತವೆ. ಅತಿ ವೇಗದಲ್ಲಿ ವಾಹನಗಳು ಹೋಗುವುದರಿಂದ ಸ್ಕಿಡ್ ಆಗುತ್ತಿದ್ದು, ಇಲ್ಲಿ ಫೈಬರ್ ಹಂಪ್‌ಗಳನ್ನು ಹಾಕುವುದರಿಂದ ವೇಗಕ್ಕೆ ಕಡಿವಾಣ ಬೀಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net