ಶಿರಾಡಿಯಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆ: ಅಪಾರ ಕೃಷಿ ನಾಶ

0 Min Read
ಶಿರಾಡಿಯಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆ: ಅಪಾರ ಕೃಷಿ ನಾಶ
ಶಿರಾಡಿಯ ದಿವಾಕರ್ ಗೌಡ ಅವರ ತೋಟದಲ್ಲಿ ಆನೆಯ ದಾಳಿಗೆ ತುತ್ತಾದ ಅಡಕೆ ಗಿಡ.

ನೆಲ್ಯಾಡಿ: ಇಲ್ಲಿಗೆ ಸಮೀಪದ ಶಿರಾಡಿ ನಿವಾಸಿ ದಿವಾಕರ ಗೌಡ ಎಂಬುವರ ಕೃಷಿ ತೋಟಕ್ಕೆ ಆನೆಗಳ ಹಿಂಡು ಲಗ್ಗೆ ಇಟ್ಟು ಕೃಷಿ ನಾಶಗೊಳಿಸಿದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ.

ದಿವಾಕರ್ ಗೌಡ ಅವರ ಕೃಷಿ ತೋಟದಲ್ಲಿದ್ದ 15ಕ್ಕೂ ಹೆಚ್ಚು ಬಾಳೆಗಿಡ, 25ಕ್ಕೂ ಹೆಚ್ಚು ಅಡಕೆ ಗಿಡಗಳನ್ನು ಆನೆ ನಾಶ ಮಾಡಿದೆ. ಕಳೆದ ನಾಲ್ಕೈದು ವರ್ಷಗಳಿಂದ ಇವರ ತೋಟಕ್ಕೆ ಆನೆ ದಾಳಿ ಮಾಡುತ್ತಿದ್ದು, ಶಾಶ್ವತ ಪರಿಹಾರ ದೊರೆತಿಲ್ಲ. ಘಟನೆಯ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಪರಿಹಾರದ ಭರವಸೆ ನೀಡಿದ್ದಾರೆ.

See also  ಧೃತಿಗೆಡದೆ ಗುರಿ ಬೆನ್ನತ್ತಿದರೆ ಯಶಸ್ಸು ಸಾಧ್ಯ
Share This Article