ಇದು 'ಎಣ್ಣೆ-ಏಟು': ಪಾನಮತ್ತ ಚಾಲಕ, ಕೋಪೋದ್ರಿಕ್ತ ಮಾಲೀಕ; ಮುಂದಾಗಿದ್ದೆಲ್ಲ ವೈರಲ್!

1202277
Published on

ಉತ್ತರಕನ್ನಡ: 'ಎಣ್ಣೆ-ಏಟು' ಎಂದರೇನು ಎಂದರೆ ಈ ಪ್ರಕರಣವನ್ನು ಉದಾಹರಿಸಬಹುದು. ಮದ್ಯಪಾನ‌ ಮಾಡಿ ಅಪಘಾತ ಮಾಡಿದ ಚಾಲಕನಿಗೆ ಸಾರ್ವಜನಿಕರೆಲ್ಲರ ಮಧ್ಯವೇ ಮಾಲೀಕ ಹಿಗ್ಗಾಮುಗ್ಗಾ ಥಳಿಸಿದ ಪ್ರಕರಣ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಅರಬೈಲ್ ಘಾಟ್‌ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಅಂಕೋಲಾ-ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಲ್ಲಾಪುರ ಸಮೀಪ ಸೋಮವಾರ ಟ್ಯಾಂಕರ್‌ವೊಂದು ಅಪಘಾತಕ್ಕೆ ಈಡಾಗಿತ್ತು. ಪಾನಮತ್ತನಾಗಿದ್ದ ಚಾಲಕನ ನಿರ್ಲಕ್ಷ್ಯದಿಂದಲೇ ಅಪಘಾತವಾಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿತ್ತು.

ಈ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಟ್ಯಾಂಕರ್‌ನ ಮಾಲೀಕ ಚಾಲಕನಿಗೆ ಸಾರ್ವಜನಿಕರ ಎದುರೇ ಮನಬಂದಂತೆ ಹೊಡೆದಿದ್ದಾನೆ. ಈ ದೃಶ್ಯವನ್ನು ಅಲ್ಲಿದ್ದ ಜನರು ಮೊಬೈಲ್‌ಫೋನ್‌ನಲ್ಲಿ ಸೆರೆಹಿಡಿದಿದ್ದು, ಈ ದೃಶ್ಯಾವಳಿ ಸಾಕಷ್ಟು ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net