ಟಿಕೆಟ್ ವ್ಯವಸ್ಥೆ ಜಾರಿ ಬಳಿಕ ಬಿಎಂಟಿಸಿ ಫುಲ್

bmtc
Published on

ಬೆಂಗಳೂರು: ಟಿಕೆಟ್ ವ್ಯವಸ್ಥೆ ಜಾರಿ ನಂತರ ಬಿಎಂಟಿಸಿ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಖಾಲಿ ಸಂಚರಿಸುತ್ತಿದ್ದ ಬಸ್​ಗಳು ಪ್ರಯಾಣಿಕರಿಂದ ಮತ್ತೆ ತುಂಬುವಂತಾಗಿದೆ. ಮಂಗಳವಾರ 56 ಸಾವಿರಕ್ಕೂ ಹೆಚ್ಚಿನ ಜನರು ಬಿಎಂಟಿಸಿ ಬಸ್​ಗಳಲ್ಲಿ ಪ್ರಯಾಣಿಸಿದ್ದು, ನಿಗಮಕ್ಕೆ 70 ಲಕ್ಷ ರೂ. ಆದಾಯ ಬಂದಿದೆ. ಬುಧವಾರ ಪ್ರಯಾಣಿಕರ ಸಂಖ್ಯೆ 60 ಸಾವಿರ ಮುಟ್ಟಿರುವ ಕುರಿತು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

4 ಸಾವಿರ ಬಸ್: ಮಂಗಳವಾರ ಮತ್ತು ಬುಧವಾರ 3,500 ಬಸ್​ಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಬುಧವಾರ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಾಗಿರುವ ಕಾರಣ ಗುರುವಾರದಿಂದ 4 ಸಾವಿರ ಬಸ್​ಗಳನ್ನು ರಸ್ತೆಗಿಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಹಲವೆಡೆ ಪಾಸ್: ಪ್ರಯಾಣಿಕರು ಮೇ 29ರಿಂದ ಎಲ್ಲ ಟಿಟಿಎಂಸಿ, ಪ್ರಮುಖ ಬಸ್ ನಿಲ್ದಾಣ ಸೇರಿ 65 ಕಡೆ ಹಾಗೂ 200 ಬೆಂಗಳೂರು ಒನ್ ಕೇಂದ್ರಗಳಲ್ಲಿ ಜೂನ್ ತಿಂಗಳ ಪಾಸ್ ಖರೀದಿಸಬಹುದು ಎಂದು ಬಿಎಂಟಿಸಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net