More

    ಸರ್ಕಾರದ ಮುಂದೆ ಚಿತ್ರರಂಗದ ಸಮಸ್ಯೆ ಪಟ್ಟಿ

    ಬೆಂಗಳೂರು: ಲಾಕ್​ಡೌನ್​ನಿಂದ ಸಂಕಷ್ಟಕ್ಕೊಳಗಾಗಿರುವ ಕನ್ನಡ ಚಿತ್ರರಂಗಕ್ಕೆ ಸಹಾಯಹಸ್ತ ಚಾಚುವಂತೆ ಕೋರಿ, ಶೀಘ್ರದಲ್ಲೇ ಸಿಎಂ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ತಿಳಿಸಿದ್ದಾರೆ.
    ವಿಜಯವಾಣಿ ಜತೆ ಮಾತನಾಡಿ, ಸರ್ಕಾರ ಕನ್ನಡ ಚಿತ್ರರಂಗಕ್ಕೆ ಸದಾ ಸಹಾಯ ಮಾಡುತ್ತಲೇ ಬಂದಿದೆ. ಇದೀಗ ಕನ್ನಡ ಚಿತ್ರ ರಂಗವು ದೊಡ್ಡ ಸಂಕಷ್ಟದಲ್ಲಿದೆ. ಲಾಕ್​ಡೌನ್​ನಿಂದ ಸಾವಿರಾರು ಜನ ಸಮಸ್ಯೆಯಲ್ಲಿದ್ದಾರೆ. ಅದರಲ್ಲೂ ನಿರ್ವಪಕರ ಕಷ್ಟ ಹೇಳತೀರದಂತಾಗಿದೆ. ಈಗಾಗಲೇ ಹಲವು ಉದ್ಯಮಗಳನ್ನು ಪ್ರಾರಂಭಿಸುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ಈ ನಿಟ್ಟಿನಲ್ಲಿ ಚಿತ್ರೀಕರಣ ಚಟುವಟಿಕೆಗಳನ್ನು ಮತ್ತು ಚಿತ್ರ ಪ್ರದರ್ಶನವನ್ನು ಪ್ರಾರಂಭಿಸುವುದಕ್ಕೆ ಅನುಮತಿ ಕೊಡಬೇಕು ಎಂದು ಮನವಿ ಸಲ್ಲಿಸಲಿದ್ದೇವೆ ಎಂದರು.

    ಇದನ್ನೂ ಓದಿ:  ಸಾವರ್ಕರ್ ಹೆಸರಿನ ವಿವಾದ: ಮೇಲ್ಸೇತುವೆ ಉದ್ಘಾಟನೆಯೇ ಮುಂದೂಡಿಕೆ!

    ಕೇಂದ್ರದ ಪ್ಯಾಕೇಜ್​ನಲ್ಲಿ ಮೀಸಲು: ಕೇಂದ್ರ ಸರ್ಕಾರವು 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದೆ. ಅದರಿಂದ ಕಷ್ಟದಲ್ಲಿರುವ ಬಹಳಷ್ಟು ಜನರಿಗೆ ಅನುಕೂಲವಾಗಿದೆ. ಚಿತ್ರರಂಗಕ್ಕೂ ಸ್ವಲ್ಪ ಹಣ ಮೀಸಲಿಟ್ಟರೆ ಬಹಳ ಅನುಕೂಲವಾಗುತ್ತದೆ. ಅದರಲ್ಲೂ ಚಿತ್ರಮಂದಿರಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರದರ್ಶನ ರದ್ದಾದರೂ ಕೆಲಸ ಮಾಡುವವರಿಗೆ ಸಂಬಳ ಕೊಡ ಬೇಕು. ವಿದ್ಯುತ್ ಬಿಲ್, ತೆರಿಗೆ ಪಾವತಿಸಬೇಕು. ಚಿತ್ರ ಮಂದಿರದವರು ಇಲ್ಲಿಯವರೆಗೂ ಹೇಗೋ ನಿರ್ವಹಣೆ ಮಾಡಿದ್ದಾರೆ. ಚಿತ್ರ ಪ್ರದರ್ಶನವಿಲ್ಲದಿದ್ದರೆ ನಿರ್ವಹಣೆ ಕಷ್ಟವಾಗುತ್ತದೆ. ಈ ವಿಷಯವಾಗಿ ಸರ್ಕಾರದ ನೆರವು ಅತ್ಯಗತ್ಯ ಎಂದು ಜೈರಾಜ್ ಹೇಳಿದರು.

    ಚಿತ್ರರಂಗ ಎದುರಿಸುತ್ತಿರುವ ಕೆಲವು ಸಮಸ್ಯೆಗಳನ್ನು ಮಲ್ಟಿಪ್ಲೆಕ್ಸ್, ಯೂಎಫ್​ಓ (ಡಿಜಿಟಲ್ ಸಿನಿಮಾ ವಿತರಣಾ ಜಾಲ) ಮುಂತಾದವರಿಗೂ ಮನವರಿಕೆ ಮಾಡಿಕೊಟ್ಟು, ಅವರಿಂದಲೂ ಸೂಕ್ತ ನೆರವು ಪಡೆಯುವ ಯೋಚನೆ ಇದೆ. ಪ್ರಮುಖವಾಗಿ ಮಲ್ಟಿಪ್ಲೆಕ್ಸ್​ಗಳಲ್ಲಿ ಕನ್ನಡ ಚಿತ್ರಗಳಿಗೆ ಇನ್ನೂ ಹೆಚ್ಚಿನ ಆದ್ಯತೆ ಕೊಡುವ ಅವಶ್ಯಕತೆ ಇದೆ. ಹಾಗೆಯೇ, ಚಿತ್ರ ಪ್ರದರ್ಶನ ಮಾಡುವುದಕ್ಕೆ ರಿಯಾಯಿತಿ ನೀಡುವ ವಿಚಾರದಲ್ಲಿ ಯೂಎಫ್​ಒ ಜತೆಗೂ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.

    ಇದನ್ನೂ ಓದಿ: ಲಗ್ನ ನೆಚ್ಚಿಕೊಂಡವರ ಬದುಕಿಗೆ ವಿಘ್ನ: ಬಾಣಸಿಗರು, ಡೆಕೋರೇಟರ್ಸ್, ಜವಳಿ ವ್ಯಾಪಾರಿಗಳು ಕಕ್ಕಾಬಿಕ್ಕಿ

    ಸ್ಟಾರ್​ಗಳು ಜಾಸ್ತಿ ಸಿನಿಮಾ ಮಾಡಲಿ: ಇನ್ನು ಸಂಕಷ್ಟದಲ್ಲಿರುವ ಕನ್ನಡ ಚಿತ್ರರಂಗಕ್ಕೆ ಚೈತನ್ಯ ತುಂಬುವ ನಿಟ್ಟಿನಲ್ಲಿ ಮತ್ತು ನಿರ್ವಪಕರನ್ನು ಉಳಿಸುವಲ್ಲಿ ಪ್ರಮುಖ ನಾಯಕ ನಟರ ಪಾತ್ರ ಮಹತ್ವವಾಗಿದೆ ಎಂದು ಜೈರಾಜ್ ಹೇಳಿದರು. ಚಿತ್ರಮಂದಿರಗಳಿಗೆ ಜನ ಬರಬೇಕಾದರೆ, ದೊಡ್ಡ ಹೀರೋಗಳಿಂದ ಮಾತ್ರ ಸಾಧ್ಯ. ಹಾಗಾಗಿ ಅವರು ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಚಿತ್ರಗಳಲ್ಲಿ ನಟಿಸಬೇಕು ಎಂದು ಅಭಿಪ್ರಾಯಪಟ್ಟರು.

    ಜೂ.1ಕ್ಕೆ ಮೆಟ್ರೋ ಆರಂಭ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts