ವಿ.ಶ್ರೀನಿವಾಸ್ ಪ್ರಸಾದ್ ಹುಟ್ಟುಹಬ್ಬ ಆಚರಣೆ

ನಗರದ ಬಾಲಕಿಯರ ವಸತಿ ಶಾಲೆಯಲ್ಲಿ ಮಾಜಿ ಸಂಸದ ದಿವಂಗತ ವಿ. ನಿವಾಸ ಪ್ರಸಾದ್ ಅವರ 79ನೇ ವರ್ಷದ ಹುಟ್ಟುಹಬ್ಬ ಅಂಗವಾಗಿ ಶಾಲಾ ಮಕ್ಕಳಿಗೆ ಸಿಹಿ, ಉಪಹಾರ ವಿತರಿಸಲಾಯಿತು.
ನಗರದ ಬಾಲಕಿಯರ ವಸತಿ ಶಾಲೆಯಲ್ಲಿ ಮಾಜಿ ಸಂಸದ ದಿವಂಗತ ವಿ. ನಿವಾಸ ಪ್ರಸಾದ್ ಅವರ 79ನೇ ವರ್ಷದ ಹುಟ್ಟುಹಬ್ಬ ಅಂಗವಾಗಿ ಶಾಲಾ ಮಕ್ಕಳಿಗೆ ಸಿಹಿ, ಉಪಹಾರ ವಿತರಿಸಲಾಯಿತು.
Published on

ನಗರದ ಪ್ರತಿಭಾನ್ವಿತ ಬಾಲಕಿಯರ ವಸತಿ ಶಾಲೆಯಲ್ಲಿ ಗುರುವಾರ ಮಾಜಿ ಸಂಸದ ದಿವಂಗತ ವಿ. ನಿವಾಸ ಪ್ರಸಾದ್ ಅವರ 79ನೇ ವರ್ಷದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ವಿ.ಶ್ರೀನಿವಾಸ್ ಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಶಾಲಾ ಮಕ್ಕಳಿಗೆ ಸಿಹಿ, ಉಪಹಾರ ನೀಡಲಾಯಿತು.
ಬಳಿಕ ಮೈಸೂರು ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ ಮಾತನಾಡಿ, ರಾಜಕೀಯ ಮುತ್ಸದ್ಧಿ, ಸ್ವಾಭಿಮಾನಿ ಚಕ್ರವರ್ತಿ ಎಂಬ ಹೆಸರು ಪಡೆದಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅವರ ಜನ್ಮದಿನವನ್ನು ಪ್ರತಿ ವರ್ಷವೂ ಆಚರಿಸುತ್ತಿದ್ದೇವೆ. ಅವರು ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಅದಕ್ಕಾಗಿಯೇ ನಂಜನಗೂಡಿನಲ್ಲಿ ಬಾಲಕಿಯರ ವಸತಿ ಶಾಲೆಯನ್ನು ತೆರೆದಿದ್ದರು. ಹಾಗಾಗಿ ಈ ಶಾಲೆಯಲ್ಲಿಯೇ ಅವರನ್ನು ಸ್ಮರಿಸುತ್ತಿದ್ದೇವೆ. ಅವರ ಆದರ್ಶಗಳು ಜೀವಂತವಾಗಿವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ತಾಪಂ ಅಧ್ಯಕ್ಷ ಮಹದೇವಪ್ಪ, ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನಾಗೇಂದ್ರ, ವಕೀಲರಾದ ಬೊಮ್ಮಾಯಿ, ಮುಖಂಡ ಮಲ್ಕುಂಡಿ ಪುಟ್ಟಸ್ವಾಮಿ, ಪ್ರಾಂಶುಪಾಲೆ ಶಿಲ್ಪಾ, ಸೇರಿದಂತೆ ಶ್ರೀನಿವಾಸ್ ಪ್ರಸಾದ್ ಅಭಿಮಾನಿಗಳು ಮತ್ತು ಶಾಲಾ ಮಕ್ಕಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net