ರಾಜಣ್ಣ
ನಾನು ಮೈಸೂರು ವಿವಿಯಲ್ಲಿ ಎಂ.ಎ.ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದು, ೨೫ ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ವಿವಿಧ ಪತ್ರಿಕೆಗಳಲ್ಲಿ ಉಪ ಸಂಪಾದಕ ವೃತ್ತಿಯ ಜತೆ ಜತೆಗೆ ವ್ಯಂಗ್ಯಚಿತ್ರ ರಚನೆ, ಪದಬಂಧ ರಚನೆಯನ್ನು ಮಾಡಿದ್ದೇನೆ. ಮೈಸೂರು ಸ್ಥಳೀಯ ಪತ್ರಿಕೆಯೊಂದರಲ್ಲಿ ಸಾಪ್ತಾಹಿಕ ಪುರವಣಿಯ ಉಸ್ತುವಾರಿ ವಹಿಸಿಕೊಂಡು ಸುಮಾರು ಹತ್ತು ವರ್ಷ ನಿರ್ವಹಿಸಿದ್ದೇನೆ. ಕನ್ನಡ ಭಾಷೆಯಲ್ಲಿ ಉತ್ತಮ ಹಿಡಿತ ಸಾಧಿಸಿರುವ ನಾನು, ಇಂಗ್ಲಿಷ್, ಹಿಂದಿ ಹಾಗೂ ತಮಿಳು ಭಾಷೆಯನ್ನು ವ್ಯವಹಾರಕ್ಕೆ ಬಳಸುವಷ್ಟು ಬಲ್ಲವನಾಗಿದ್ದೇನೆ. ಕಂಪ್ಯೂಟರ್ ಬಳಕೆಯ ಜ್ಞಾನವೂ ಉತ್ತಮವಾಗಿದೆ.