ಮನೆ ಕಳೆದುಕೊಂಡ ಸಂಸ್ರಸ್ಥೆಗೆ ಮಾಜಿ ಶಾಸಕ ಅಭಯ

ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಬೆಂಕಿಬಿದ್ದು ಮನೆ ಕಳೆದುಕೊಂಡ ಮಹದೇವಮ್ಮ ಅವರ ನಿವಾಸಕ್ಕೆ ಭಾನುವಾರ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಭೇಟಿ ನೀಡಿ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದರು.
ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಬೆಂಕಿಬಿದ್ದು ಮನೆ ಕಳೆದುಕೊಂಡ ಮಹದೇವಮ್ಮ ಅವರ ನಿವಾಸಕ್ಕೆ ಭಾನುವಾರ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಭೇಟಿ ನೀಡಿ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದರು.
Published on
ಶ್ರೀರಂಗಪಟ್ಟಣ: ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದು ಮನೆ ಕಳೆದುಕೊಂಡ ಸಂತ್ರಸ್ಥೆ ಮನೆಗೆ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯಭೇಟಿ ನೀಡಿ ವೈಯಕ್ತಿಕವಾಗಿ ಆರ್ಥಿಕ ಸಹಾಯ ನೀಡುವ ಜತೆಗೆ ಧೈರ್ಯ ತುಂಬಿದರು.
ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ ಅವರು ಬೆಂಕಿ ಅವಘಡದಿಂದ ಅಕ್ಷರಶಃ ನಿರಾಶ್ರಿತರಾಗಿರುವ ಮಹದೇವಮ್ಮ ಅವರ ಮನೆಯನ್ನು ವೀಕ್ಷಿಸಿದ ಅವರು, ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಎರಡು ದಿನಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕಸ್ಮಿಕ ಕಾಣಿಸಿಕೊಂಡ ಬೆಂಕಿಯಿಂದ ಮನೆಯ ಛಾವಣಿ, ಗೋಡೆ, ಬಾಗಿಲು ಹಾನಿಗೊಂಡು ಒಳಗಿಟ್ಟಿದ್ದ ದಿನನಿತ್ಯ ಬಳಕೆಯ ದಿನಸಿ ಪದಾರ್ಥಗಳು, ಬಟ್ಟೆಗಳು ಹಾಗೂ 50 ಸಾವಿರ ರೂ.ನಗದು ಸೇರಿದಂತೆ ಇತರ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದವು.
ನಿಮ್ಮೊಡನೆ ಸದಾ ಇರುವುದಾಗಿ ಮಹದೇವಮ್ಮ ಅವರಿಗೆ ಧೈರ್ಯ ಧೈರ್ಯ ನೀಡಿದ ರವೀಂದ್ರ ಶ್ರೀಕಂಠಯ್ಯ, ಸರ್ಕಾರದಿಂದ ಲಭ್ಯವಾಗುವ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ರವೀಂದ್ರ ಶ್ರೀಕಂಠಯ್ಯ ಅವರು ಸ್ಥಳದಲ್ಲೇ ತಹಸೀಲ್ದಾರ್ ಚೇತನಾ ಯಾದವ್ ಅವರಿಗೆ ಕರೆಮಾಡಿ, ಅವಘಡ ಉಂಟಾದ ಬಡವರ ಮನೆಗೆ ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಭೇಟಿ ನೀಡದ ಬಗ್ಗೆ ಬೇಸರ ವ್ಯಕ್ತಪಡಿಸಿ, ಜಿಲ್ಲಾಡಳಿತದಿಂದ ಲಭ್ಯವಾಗುವ ಪರಿಹಾರ ನೀಡಲು ತಿಳಿಸಿದರು.
ನಮ್ಮ ನಾಡಿನ ರೈತರಿಗೂ ನೀರು ಕೊಡಿ:ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದ ಯಾವುದೇ ಸರ್ಕಾರವಾಗಲೀ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಲೇಬೇಕು. ಅದರ ಜತೆಗೆ ಸ್ಥಳೀಯ ನಾಲೆಗಳಿಗೂ ನೀರು ಹರಿಸಿ ಕೆರೆ-ಕಟ್ಟೆಗಳನ್ನು ತುಂಬಿಸುವ ಕೆಲಸ ಆಗಬೇಕಿದೆ. ಸ್ಥಳೀಯ ನಾಲೆಗಳಿಗೆ ನೀರು ಹರಿಸದೆ ಕೇವಲ ಅಣೆಕಟ್ಟೆ ಭರ್ತಿ ಮಾಡಿಕೊಂಡರೆ ತಮಿಳುನಾಡಿಗೆ ನೀರು ಹರಿಸುವಂತೆ ಕೇಳುವುದು ಸಹಜ. ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಜಲಸಂಪನ್ಮೂಲ ಸಚಿವರು ನ್ಯಾಯಾಲಯಕ್ಕೆ ರಾಜ್ಯದಲ್ಲಿ ಉಂಟಾಗಿರುವ ಬರ, ಅಣೆಕಟ್ಟೆಯಲ್ಲಿ ಲಭ್ಯವಾಗಿರುವ ನೀರಿನ ಸಂಗ್ರಹಣೆ ಕುರಿತು ಸಮರ್ಪಕ ಮಾಹಿತಿ ನೀಡುವಲ್ಲಿ ವಿಫಲರಾಗಿರುವ ಕಾರಣ ಈ ಸಮಸ್ಯೆ ಉಲ್ಬಣಗೊಳ್ಳುತ್ತಿದೆ.
ಕಾಂಗ್ರೆಸ್ ಸರ್ಕಾರ ಈ ಹಿಂದೆ ಹಲವು ಬಾರಿ ಅಧಿಕಾರ ನಡೆಸಿ, ಸಾಕಷ್ಟು ಅನುಭವವಿದೆ, ಹಾಗಾಗಿ ನ್ಯಾಯಾಲಯದ ಆದೇಶ ಹಾಗೂ ಸ್ಥಳೀಯ ರೈತರ ಹಿತ ಕಾಪಾಡುವಂತೆ ಅವರು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net