ನಾಲೆಗೆ ಬಿದ್ದು ಇಬ್ಬರು ಯುವಕರ ಸಾವು

ನಾಲೆಗೆ ಬಿದ್ದು ಇಬ್ಬರು ಯುವಕರ ಸಾವು
ನಾಲೆಗೆ ಬಿದ್ದು ಇಬ್ಬರು ಯುವಕರ ಸಾವು
Published on
ಹುಣಸೂರು: ಕುಡಿದ ಮತ್ತಿನಲ್ಲಿ ಬೈಕ್ ಚಾಲನೆ ಮಾಡಿ ನಾಲೆಗೆ ಬಿದ್ದು ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ. ತಾಲೂಕಿನ ಗಾವಡಗೆರೆ ಹೋಬಳಿ ಚಿಕ್ಕಾಡಿಗನಹಳ್ಳಿಯ ಹುಚ್ಚಯ್ಯ-ಶೈಲ ದಂಪತಿಯ ಪುತ್ರ ಪ್ರತಾಪ್(22) ಮತ್ತು ಅದೇ ಗ್ರಾಮದ ಬಸವರಾಜು ಅವರ ಪುತ್ರ ಭರತ್(20) ಮೃತಪಟ್ಟವರು.
ಘಟನೆ ವಿವರ: ಡಿ.1ರಂದು ಪ್ರತಾಪ್ ತನ್ನ ಸ್ನೇಹಿತ ಭರತ್‌ರೊಂದಿಗೆ ಮನೆಯಿಂದ ಬೈಕಿನಲ್ಲಿ ಹೋದವರು ಸಂಜೆಯಾದರೂ ಮನೆಗೆ ಹಿಂತಿರುಗಿರಲಿಲ್ಲ. ಗಾಬರಿಗೊಂಡ ತಾಯಿ ಶೈಲ ಹುಣಸೂರು ಗ್ರಾಮಾಂತರ ಠಾಣೆಗೆ ದೂರು ನೀಡಿ ಪುತ್ರ ನಾಪತ್ತೆಯಾಗಿದ್ದಾನೆಂದು ಮಾಹಿತಿ ನೀಡಿದ್ದಾರೆ.
ಮಂಗಳವಾರ ಬೆಳಗ್ಗೆ ಕೆ.ಆರ್.ನಗರ ತಾಲೂಕು ಆರ್‌ಎಂಸಿ ಬಳಿಯ ನಾಲೆಯಲ್ಲಿ ಇಬ್ಬರ ಶವ ಮತ್ತು ಬೈಕ್ ಪತ್ತೆಯಾಗಿದೆ. ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ. ಇಬ್ಬರಿಗೂ ಕುಡಿತದ ಚಟವಿದ್ದು, ಕುಡಿದುಕೊಂಡೇ ವಾಹನ ಚಲಾಯಿಸಿದ ಪರಿಣಾಮ ಕಾಲುವೆಗೆ ಬಿದ್ದು ಮೃತಪಟ್ಟಿದ್ದಾರೆಂದು ಪೊಲೀಸ್ ಮೂಲಗಳು ಅನುಮಾನ ವ್ಯಕ್ತಪಡಿಸಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net