ಅರಣ್ಯ ರಕ್ಷಕನ ಮೇಲೆ ಹುಲಿ ದಾಳಿ

ಅರಣ್ಯ ರಕ್ಷಕ ಕುಮಾರ್
ಅರಣ್ಯ ರಕ್ಷಕ ಕುಮಾರ್
Published on
ಸರಗೂರು: ಕೂಂಬಿಂಗ್‌ಗೆ ತೆರಳಿದ್ದ ಅರಣ್ಯ ರಕ್ಷಕನ ಮೇಲೆ ಹುಲಿ ದಾಳಿ ಮಾಡಿದ್ದು, ಗಾಯಗೊಂಡರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನುಗು ಅರಣ್ಯ ವಲಯದಲ್ಲಿ ಅರಣ್ಯ ರಕ್ಷಕನಾಗಿದ್ದ, ಮೂಲತಃ ಗುಂಡ್ಲುಪೇಟೆ ತಾಲೂಕು ಮುಕ್ತಿ ಕಾಲನಿ ಗ್ರಾಮದ ಕುಮಾರ್ (34) ಗಾಯಗೊಂಡವರು. ತಾಲೂಕಿನ ನುಗು ಅರಣ್ಯ ವಲಯ ವ್ಯಾಪ್ತಿಯ ಮುಳ್ಳೂರು ಮತ್ತು ಬೆಣ್ಣೆಗೆರೆ ಗ್ರಾಮದ ಜಮೀನಿನಲ್ಲಿ ಕೆಲ ದಿನಗಳ ಹಿಂದೆ ರೈತನೊಬ್ಬರ ಮೇಲೆ ಹುಲಿ ದಾಳಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಹುಲಿ ಸೆರೆ ಕಾರ್ಯಾಚರಣೆ ಕೈಗೊಳ್ಳುವ ಸಂಬಂಧ ಬಂಡೀಪುರ ಅರಣ್ಯ ಡಿಸಿಎಫ್ ನಂದೀಶ್, ಹೆಡಿಯಾಲ ಉಪವಲಯದ ಎಸಿಎಫ್ ಪರಮೇಶ್ ಹಾಗೂ ಡಿ.ನುಗು ವಲಯದ ಆರ್‌ಎಫ್‌ಒ ಅನೀತ್ ರಾಜ್ ನೇತೃತ್ವದಲ್ಲಿ ಸಿಬ್ಬಂದಿ ಸ್ಥಳ ಪರಿಶೀಲನೆಗೆ ತೆರಳಿದ್ದರು. ಜಮೀನಿನ ಆಸು-ಪಾಸು ಕ್ಯಾಮರಾ ಅಳವಡಿಸಿದ ನಂತರ ಸಿಬ್ಬಂದಿ ರೈತನ ಮೇಲೆ ಹುಲಿ ದಾಳಿ ಮಾಡಿದ ಸ್ಥಳ ಪರಿಶೀಲಿಸುತ್ತಿದ್ದರು. ಈ ವೇಳೆ ಅರಣ್ಯ ರಕ್ಷಕ ಕುಮಾರ್ ಮೇಲೆ ಹುಲಿ ದಾಳಿ ಮಾಡಿದೆ. ಗಾಬರಿಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೂಗಾಡಿದ್ದರಿಂದ ಹುಲಿ ಸ್ಥಳದಿಂದ ಪರಾರಿಯಾಗಿದೆ.
ಸಣ್ಣಪುಟ್ಟ ಗಾಯಗೊಂಡಿದ್ದ ಕುಮಾರ್‌ಗೆ ಪಟ್ಟಣದ ಸ್ವಾಮಿ ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net