ಅಂಗನವಾಡಿ ಕಾರ್ಯಕರ್ತೆ ಆಶಾ ಮಕ್ಕಳಿಗೆ ಅಕ್ಷರ ಬರೆಯುವ ವಿಧಾನ, ವರ್ಣಮಾಲೆ ಹಾಗೂ ಸಂಖ್ಯೆಗಳ ಪರಿಚಯ ಮಾಡಿಕೊಟ್ಟರು. ಸಹಾಯಕಿ ರಾಧಾ ಮಕ್ಕಳಿಗೆ ಸಹಕರಿಸಿದರು. ಈ ವೇಳೆ ಮಕ್ಕಳ ಪಾಲಕರೂ ಸಹ ಹಾಜರಿದ್ದು, ಕಾರ್ಯಕ್ರಮಕ್ಕೆ ಉತ್ತೇಜನ ನೀಡಿದರು. ಮಕ್ಕಳ ಪ್ರಾಥಮಿಕ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ನಡೆಯುವ ಇಂತಹ ಅಕ್ಷರ ಅಭ್ಯಾಸ ಕಾರ್ಯಕ್ರಮಗಳು ಮಹತ್ವದ ಪಾತ್ರವಹಿಸುತ್ತವೆ ಎಂದು ಅಂಗನವಾಡಿ ಕಾರ್ಯಕರ್ತೆ ಆಶಾ ಅಭಿಪ್ರಾಯಪಟ್ಟರು.