ಗ್ರಾಮಸ್ಥರ ಕಾರ್ಯಕ್ಕೆ ತಹಸೀಲ್ದಾರ್ ಮೆಚ್ಚುಗೆ

ತಿ.ನರಸೀಪುರ ತಾಲೂಕಿನ ಬೊಮ್ಮನಹಳ್ಳಿ ಬಳಿ ಶ್ರೀ ಒಡೆದಕಲ್ಲು ಬಸವೇಶ್ವರ ಸನ್ನಿಧಿಯ ಆವರಣದಲ್ಲಿ ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಅವರು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಚಿದರವಳ್ಳಿ ನಾಗೇಂದ್ರ, ಎಚ್.ಸಿ.ರತೀಶ್, ಪುಟ್ಟಸ್ವಾಮಿ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಒಡೆದಕಲ್ಲು ಬಸವೇಶ್ವರ ಸನ್ನಿಧಿ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ
ತಿ.ನರಸೀಪುರ: ಶ್ರೀ ಒಡೆದಕಲ್ಲು ಬಸವೇಶ್ವರ ಸನ್ನಿಧಿ ಹಾಗೂ ಸುತ್ತಲಿನ ಪರಿಸರವನ್ನು ಹಸಿರೀಕರಣಗೊಳಿಸಲು ಮುಂದಾಗಿರುವ ಕಾರ್ಯ ಉತ್ತಮವಾಗಿದೆ ಎಂದು ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್ ಹೇಳಿದರು.
ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಬಳಿ ಕಲ್ಕುಣಿ-ಕಿರುಗಾವಲು ಮುಖ್ಯ ರಸ್ತೆಯಲ್ಲಿರುವ ಶ್ರೀ ಒಡೆದಕಲ್ಲು ಬಸವೇಶ್ವರ ಗುಡ್ಡದ ಬಳಿ ಇತ್ತೀಚೆಗೆ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒಡೆದ ಕಲ್ಲಿನಲ್ಲಿ ಮೂಡಿದ ಶ್ರೀ ಬಸವೇಶ್ವರರ ಸನ್ನಿಧಿ ಹಸಿರಿನಿಂದ ಕಂಗೊಳಿಸಲು ಸುತ್ತಮುತ್ತಲಿನ ಗ್ರಾಮಸ್ಥರು ಗಿಡ ನೆಟ್ಟು ನೀರುಣಿಸುವ ಕೆಲಸ ನಿಜಕ್ಕೂ ಶ್ಲಾಘನೀಯ ಎಂದರು.
ಚಿದರವಳ್ಳಿ, ಬೊಮ್ಮನಹಳ್ಳಿ, ಮುಡುಕನಪುರ, ಬೂದಹಳ್ಳಿ, ಎಸ್.ದೊಡ್ಡಪುರ ಹಾಗೂ ಕಳ್ಳಿಪುರ ಗ್ರಾಮಸ್ಥರು ಅರಣ್ಯ ಇಲಾಖೆಯ ನೆರವಿನೊಂದಿಗೆ ನೂರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟರು. ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ರೈತ ಸಂಘದ ಜಿಲ್ಲಾ ಮುಖಂಡ ಚಿದರವಳ್ಳಿ ನಾಗೇಂದ್ರ, ಡಿಸಿಎಫ್ ನಿರಂಜನ್, ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಚ್.ಸಿ.ರತೀಶ್, ಗ್ರಾಪಂ ಸದಸ್ಯರಾದ ಮಹೇಶ್, ಪುಟ್ಟಸ್ವಾಮಿ, ಅಭಿವೃದ್ಧಿ ಅಧಿಕಾರಿ ರವಿಕುಮಾರ್, ಗ್ರಾಮ ಲೆಕ್ಕಿಗ ಶ್ರೀನಿವಾಸ್, ನಾಗರಾಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net