_1786105981542.webp?w=480&auto=format%2Ccompress&fit=max)
_1786105981542.webp?w=480&auto=format%2Ccompress&fit=max)
ಹುಣಸೂರು:
ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಮತ್ತು ಆದಿವಾಸಿ ಹರಿಣಶಿಕಾರಿ ಪಾರ‌್ಧಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಆ.9ರಂದು ಹುಬ್ಬಳ್ಳಿಯಲ್ಲಿ ರಾಜ್ಯ ಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆಯನ್ನು ಆಯೋಜಿಸಲಾಗಿದೆ ಎಂದು ಪರಿಷತ್‌ನ ಎಂ.ಕೃಷ್ಣಯ್ಯ ತಿಳಿಸಿದರು.
ವಿಶ್ವಸಂಸ್ಥೆಯು ಆದಿವಾಸಿ ಶುಶ್ರೂಷಕಿ(ದಾದಿ/ಸೂಲಗಿತ್ತಿ ಅವರನ್ನು ಗೌರವಿಸುವುದು, ಜೀವನ ಮತ್ತು ಯೋಗಕ್ಷೇಮ ರಕ್ಷಿಸುವುದು ಎನ್ನುವ ಧ್ಯೇಯವಾಕ್ಯದೊಂದಿಗೆ ಆದಿವಾಸಿ ದಿನಾಚರಣೆ ಆಚರಿಸಲು ಸೂಚಿಸಿದೆ. ಅದರಂತೆ ರಾಜ್ಯಾದ್ಯಂತ 25ಕ್ಕೂ ಹೆಚ್ಚು ಆದಿವಾಸಿ ದಾದಿಯರನ್ನು ಗುರುತಿಸಲಾಗಿದೆ. ಮೈಸೂರು ಮತ್ತು ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಎಚ್.ಡಿ.ಕೋಟೆ ತಾಲೂಕಿನ ಸೋಲಿಗ ಸಮುದಾಯದ ದೇವಮ್ಮ, ಯರವ ಸಮುದಾಯದ ಸಣ್ಣಮ್ಮ, ಪೊನ್ನಂಪೇಟೆ ದೇವರಹಾಡಿಯ ಬೆಟ್ಟಕುರುಬ ಸಮುದಾಯದ ಸೋಮಿ, ಆನೆಮಾಳ ಹಾಡಿಯ ಫಣಿಯ ಸಮುದಾಯದ ತಂಗಮ್ಮಅವರನ್ನು ಸನ್ಮಾನಿಸಲಾಗುತ್ತಿದೆ.