ಬಲಗೈ ಸಮುದಾಯಗಳ ಪ್ರತಿಭಟನೆ

ನಂಜನಗೂಡು ತಾಲೂಕು ಕಚೇರಿ ಮುಂಭಾಗ ಪರಿಶಿಷ್ಟ ಜಾತಿ ಬಲಗೈ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಮಲ್ಲಹಳ್ಳಿ ನಾರಾಯಣ, ವಿಜಯಕುಮಾರ್, ಮಹೇಶ್, ಗಟ್ಟವಾಡಿ ಮಹೇಶ್, ಸುರೇಶ್ ಇದ್ದರು.
ನಂಜನಗೂಡು ತಾಲೂಕು ಕಚೇರಿ ಮುಂಭಾಗ ಪರಿಶಿಷ್ಟ ಜಾತಿ ಬಲಗೈ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಮಲ್ಲಹಳ್ಳಿ ನಾರಾಯಣ, ವಿಜಯಕುಮಾರ್, ಮಹೇಶ್, ಗಟ್ಟವಾಡಿ ಮಹೇಶ್, ಸುರೇಶ್ ಇದ್ದರು.
Published on
ನಂಜನಗೂಡು: ಬಲಗೈ ಸಮುದಾಯಗಳಿಗೆ ಒಳ ಮೀಸಲಾತಿಯಲ್ಲಿ ಅನ್ಯಾಯವಾಗಿದೆ. ಕೂಡಲೇ ನ್ಯಾ.ನಾಗಮೋಹನ್ ದಾಸ್ ವರದಿಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ ಪರಿಶಿಷ್ಟ ಜಾತಿ ಬಲಗೈ ಸಮುದಾಯಗಳ ಸಂಘಟನೆಗಳ ಒಕ್ಕೂಟದಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ಹಾಗೂ ಪಾದಯಾತ್ರೆ ನಡೆಯಿತು.
ನಗರದ ಅಂಬೇಡ್ಕರ್ ವೃತ್ತದ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬಳಿಕ ಆರ್‌ಪಿ ರಸ್ತೆಯ ಮೂಲಕ ತಾಲೂಕು ಕಚೇರಿವರೆಗೆ ಸಂಘಟನೆಗಳ ಒಕ್ಕೂಟದ ಸದಸ್ಯರು ಪಾದಯಾತ್ರೆ ನಡೆಸಿದರು. ಬಳಿಕ ತಾಲೂಕು ಕಚೇರಿ ಮುಂದೆ ಜಮಾಯಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಒಂದು ತಿಂಗಳಿಂದ ಉದ್ಯೋಗ ಆಯ್ಕೆ ಪ್ರಕ್ರಿಯೆಯಲ್ಲಿ ಒಳ ಮೀಸಲಾತಿಯಿಂದ ಬಲಗೈ ಸಮುದಾಯಗಳಿಗೆ ಗೊಂದಲ ಉಂಟಾಗುತ್ತಿದೆ. ಈ ಬಗ್ಗೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಿದ ನಂತರ ಸರ್ಕಾರ ಒಳ ಮೀಸಲಾತಿ ಪರಿಷ್ಕರಣೆ ಆಗುವವರೆಗೆ ಹಳೆಯ ಮೀಸಲಾತಿ ಮುಂದುವರಿಸುವುದಾಗಿ ಸಚಿವ ಸಂಪುಟ ತೆಗೆದುಕೊಂಡಿರುವ ತೀರ್ಮಾನವನ್ನು ಸ್ವಾಗತಿಸುತ್ತೇವೆ. ಆದರೆ, ಇದು ಬಲಗೈ ಸಮುದಾಯದ ಕಣ್ಣೊರೆಸುವ ತಂತ್ರವಾಗದೆ ಸಮುದಾಯಕ್ಕೆ ಅನುಕೂಲವಾಗಬೇಕು. ಅವೈಜ್ಞಾನಿಕವಾದ ಒಳ ಮೀಸಲಾತಿ ರದ್ದು ಮಾಡಬೇಕು. ಈಗಾಗಲೇ ನೀಡುತ್ತಿರುವ ಹೊಸ ಜಾತಿ ಪ್ರಮಾಣ ಪತ್ರವನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ಬಳಿಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಮಲ್ಲಹಳ್ಳಿ ನಾರಾಯಣ, ಅಭಿ ನಾಗಭೂಷಣ, ಶಂಕರಪುರ ಸುರೇಶ್, ನಗರ್ಲೆ ವಿಜಯಕುಮಾರ್, ಬಸವಟ್ಟಿಗೆ ನಾಗೇಂದ್ರ, ಚುಂಚನಹಳ್ಳಿ ಮಲ್ಲೇಶ್, ಕಾರ್ಯ ಬಸವಣ್ಣ, ಗಟ್ಟವಾಡಿ ಮಹೇಶ, ಮುಳ್ಳೂರು ಸ್ವಾಮಿ, ಅರ್ಜುನ, ಹೆಜ್ಜೆಗೆ ಪ್ರಕಾಶ್, ಸಿದ್ದರಾಜು, ಗಟ್ಟವಾಡಿ ಸ್ವಾಮಿ, ಮಂಜು ಶಂಕರಪುರ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net