ಶೋಷಿತ ವರ್ಗಗಳಿಗೆ ನ್ಯಾಯ ಒದಗಿಸಿ

 ಬೆಟ್ಟದಪುರ ಸಮೀಪದ ಸೀಗೆಕೋರೆಕಾವಲು (ಬಿ.ಬ್ಲಾಕ್) ನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸೇವಾ ಸಮಿತಿ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ಸತೀಶ್ ಉಪಾಧ್ಯಕ್ಷ ಪ್ರಕಾಶ್ ಖಜಾಂಚಿ ಸುರೇಶ್, ಕಾರ್ಯದರ್ಶಿ ದಿನೇಶ್, ಭೀಮ್ ಆರ್ಮಿ ಗಿರೀಶ್, ಪಿಡಿಒ ಅವಿನಾಶ್, ಮುಖಂಡರಾದ ಪ್ರದೀಪ್, ಅಣ್ಣಯ್ಯ ಇತರರಿದ್ದರು.
ಬೆಟ್ಟದಪುರ ಸಮೀಪದ ಸೀಗೆಕೋರೆಕಾವಲು (ಬಿ.ಬ್ಲಾಕ್) ನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸೇವಾ ಸಮಿತಿ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ಸತೀಶ್ ಉಪಾಧ್ಯಕ್ಷ ಪ್ರಕಾಶ್ ಖಜಾಂಚಿ ಸುರೇಶ್, ಕಾರ್ಯದರ್ಶಿ ದಿನೇಶ್, ಭೀಮ್ ಆರ್ಮಿ ಗಿರೀಶ್, ಪಿಡಿಒ ಅವಿನಾಶ್, ಮುಖಂಡರಾದ ಪ್ರದೀಪ್, ಅಣ್ಣಯ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಚಿಂತಕ ಚಾಮರಾಯನಕೋಟೆ ಜಗದೀಶ್ ಹೇಳಿಕೆ
  • ಅಂಬೇಡ್ಕರ್ ಸೇವಾ ಸಮಿತಿ ಉದ್ಘಾಟನೆ
ಬೆಟ್ಟದಪುರ: ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದವರು, ದೌರ್ಜನ್ಯಕ್ಕೆ ಒಳಪಟ್ಟವರು ಹಾಗೂ ಶೋಷಿತ ವರ್ಗಗಳಿಗೆ ನ್ಯಾಯ ಒದಗಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಸಾಮಾಜಿಕ ಚಿಂತಕ ಚಾಮರಾಯನಕೋಟೆ ಜಗದೀಶ್ ಅಭಿಪ್ರಾಯಪಟ್ಟರು.
ಬೆಟ್ಟದಪುರ ಸಮೀಪದ ಸೀಗೆಕೋರೆಕಾವಲು (ಬಿ.ಬ್ಲಾಕ್) ನಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿ ಉದ್ಘಾಟನೆ ವೇಳೆ ಮಾತನಾಡಿದರು.
ಸಮಾನತೆ, ಸ್ವಾತಂತ್ರೃ ಮತ್ತು ಸಹೋದರತ್ವದ ತತ್ವಗಳ ಮೂಲಕ ಶೋಷಿತರಿಗೆ ನ್ಯಾಯದ ದಾರಿ ತೋರಿಸಿದ್ದಾರೆ. ಅವರ ಆಲೋಚನೆಗಳು ಇಂದಿನ ಸಮಾಜದಲ್ಲೂ ಅತ್ಯಂತ ಪ್ರಭಾವ ಬೀರಿವೆ. ಸಂವಿಧಾನವೇ ನಮ್ಮ ಶಕ್ತಿ. ಅದನ್ನು ಅರಿತು, ಅನುಸರಿಸಿ, ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ದೊರಕಿಸಿಕೊಡುವ ಕೆಲಸ ನಿರಂತರವಾಗಿರಬೇಕು ಎಂದು ತಿಳಿಸಿದರು.
ಮುಖಂಡ ಕೃಷ್ಣ.ಸಿ ಮಾತನಾಡಿ, ಸೀಗೆಕೋರೆ ಗ್ರಾಮಕ್ಕೆ ರಸ್ತೆಯ ಸಮಸ್ಯೆ ಎದುರಾದಾಗ, ಸಾಕಷ್ಟು ಕಾನೂನು ಹೋರಾಟ ನಡೆಸಿ ರಸ್ತೆಯನ್ನು ಕಲ್ಪಿಸಿಕೊಂಡಿದ್ದೇವೆ. ಕಾನೂನಾತ್ಮಕವಾಗಿ ಮಾಡಿರುವ ರಸ್ತೆಯನ್ನು ಜಮೀನು ಮಾಲೀಕರು ಒತ್ತುವರಿ ಮಾಡಿಕೊಂಡು ಬರುತ್ತಿದ್ದಾರೆ. ಈ ಸಂಘಟನೆಯ ಮೂಲಕ ನಮಗೆ ಬೇಕಾಗುವ ಮೂಲ ಸೌಕರ್ಯಗಳನ್ನು ಒದಗಿಸಿ, ಗ್ರಾಮಕ್ಕೆ ಒಳಿತು ಮಾಡಬೇಕೆಂದು ಮನವಿ ಮಾಡಿದರು.
ಸಂಘದ ಅಧ್ಯಕ್ಷ ಸತೀಶ್ ಉಪಾಧ್ಯಕ್ಷ ಪ್ರಕಾಶ್ ಖಜಾಂಚಿ ಸುರೇಶ್, ಕಾರ್ಯದರ್ಶಿ ದಿನೇಶ್, ಭೀಮ್ ಆರ್ಮಿ ಗಿರೀಶ್, ಪಿಡಿಒ ಅವಿನಾಶ್, ಮುಖಂಡರಾದ ಪ್ರದೀಪ್, ಅಣ್ಣಯ್ಯ, ಕೃಷ್ಣಯ್ಯ, ಸೋಮಯ್ಯ, ಚಮ್ಮಣ್ಣ, ಚೆನ್ನಮ್ಮ, ಚಲುವಯ್ಯ, ರಾಜೇಶ್, ಲಲಿತಮ್ಮ, ಕೃಷ್ಣ, ಶಿವಣ್ಣ, ವೈರಮುಡಿ, ದಿನೇಶ್, ಲಾಳಪ್ರಸಾದ್ ಸಣ್ಣಮ್ಮ ಸೇರಿದಂತೆ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net