ತಿ.ನರಸೀಪುರ ತಾಲೂಕು ಕಲಿಯೂರು ಗ್ರಾಮದಲ್ಲಿ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿ ಬಳಗದಿಂದ ಪ್ರತಿಭಟನೆ ನಡೆಸಿ ಪಿಡಿಒ ಶೈಲಜಾ ಅವರಿಗೆ ಮನವಿ ಸಲ್ಲಿಸಲಾಯಿತು. ಕುಕ್ಕೂರು ರಾಜು, ಶಾಂತ, ಶಶಿಕುಮಾರ್, ರಾಜೀವ್, ರಾಜಣ್ಣ, ಚಿಕ್ಕಮಲ್ಲಯ್ಯ, ರಾಜೇಶ್ ಇದ್ದರು.
ತಿ.ನರಸೀಪುರ: ರಾಜ್ಯ ಸರ್ಕಾರದ ಒಳ ಮೀಸಲಾತಿ ವರ್ಗೀಕರಣದಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ತಾಲೂಕಿನ ಕಲಿಯೂರು ಗ್ರಾಮದಲ್ಲಿ ಗುರುವಾರ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿ ಬಳಗದಿಂದ ಪ್ರತಿಭಟನೆ ನಡೆಯಿತು.
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಿಡಿಒ ಪಿ.ಶೈಲಜಾ ಅವರಿಗೆ ಮನವಿ ಸಲ್ಲಿಸಿದರು. ದಲಿತ ಮುಖಂಡ ಕುಕ್ಕೂರು ರಾಜು ಮಾತನಾಡಿ, ಒಳ ಮೀಸಲಾತಿ ಹಂಚಿಕೆಯಲ್ಲಿ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸದೆ ಬಲಗೈ ಸಮುದಾಯವನ್ನು ಕಡೆಗಣಿಸಲಾಗಿದೆ. ಇದು ಸಮುದಾಯದ ಹಿತಾಸಕ್ತಿಗೆ ವಿರುದ್ಧವಾಗಿದೆ. ಸರ್ಕಾರ ಕೂಡಲೇ ತಾರತಮ್ಯ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಕಲಿಯೂರು ಶಾಂತಾ, ಶಶಿಕುಮಾರ್, ರಾಜೀವ್, ಜೆಡಿಎಸ್ ಮುಖಂಡ ರಾಜಣ್ಣ, ಚಿಕ್ಕಮಲ್ಲಯ್ಯ, ರಾಜೇಶ್, ಬೆಟ್ಟದ ಹೊಸೂರು ತ್ಯಾಗರಾಜು, ನಿಂಗರಾಜು, ಮಹೇಶ, ಸಿದ್ದರಾಜು, ಮಲ್ಲೇಶ, ಮುಖಂಡರು ಇದ್ದರು.