ಗ್ಯಾಸ್ ಏಜೆನ್ಸಿ ಎದುರು ಪ್ರತಿಭಟನೆ

ಬನ್ನೂರಿನ ಎಂಎಂ ರಸ್ತೆಯಲ್ಲಿರುವ ಶ್ರೀ ಮಹದೇಶ್ವರ ಭಾರತ್ ಗ್ಯಾಸ್ ಏಜೆನ್ಸಿಯಲ್ಲಿ ಎದುರು ಗ್ರಾಹಕರು ಪ್ರತಿಭಟನೆ ನಡೆಸಿದರು.
ಬನ್ನೂರಿನ ಎಂಎಂ ರಸ್ತೆಯಲ್ಲಿರುವ ಶ್ರೀ ಮಹದೇಶ್ವರ ಭಾರತ್ ಗ್ಯಾಸ್ ಏಜೆನ್ಸಿಯಲ್ಲಿ ಎದುರು ಗ್ರಾಹಕರು ಪ್ರತಿಭಟನೆ ನಡೆಸಿದರು.
Published on
ಬನ್ನೂರು: ಗ್ರಾಹಕರಿಗೆ ನೀಡಬೇಕಾಗಿರುವ ಗ್ಯಾಸ್ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಗ್ರಾಹಕರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಭಾರತ್ ಗ್ಯಾಸ್ ಏಜೆನ್ಸಿ ಕಚೇರಿ ಎದುರು ಗ್ರಾಹಕರು ಪ್ರತಿಭಟನೆ ನಡೆಸಿದರು.
ಪಟ್ಟಣದ ಎಂಎಂ ರಸ್ತೆಯಲ್ಲಿರುವ ಶ್ರೀ ಮಹದೇಶ್ವರ ಭಾರತ್ ಗ್ಯಾಸ್ ಏಜೆನ್ಸಿ ಎದುರು ಮಂಗಳವಾರ ಜಮಾಯಿಸಿದ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು. ನಮಗೆ ಆರು ತಿಂಗಳಿಂದ ಸಮರ್ಪಕವಾಗಿ ಗ್ಯಾಸ್ ಸಿಲಿಂಡರ್ ವಿತರಣೆ ಆಗಿಲ್ಲ ಎಂದು ಗ್ರಾಹಕರೊಬ್ಬರು ಹೇಳಿದರೆ ಮತ್ತೊಬ್ಬರು ಮೂರು ತಿಂಗಳಿಂದ, ಮಗದೊಬ್ಬರು ಎರಡು ತಿಂಗಳಿಂದ ನೀಡಿಲ್ಲ ಎಂದು ದೂರಿದರು. ಪ್ರತಿ ದಿನ ಕಚೇರಿಗೆ ಹೋದರೆ ಇಲ್ಲಿನ ಮಹಿಳಾ ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ ಹೋಗಿ ಎನ್ನುತ್ತಾರೆ. ಆದರೆ, ಸಿಲಿಂಡರ್ ಮಾತ್ರ ಬರುತ್ತಿಲ್ಲ ಎಂದರು.
ಬೀಡನಹಳ್ಳಿ ತಿಮ್ಮೇಗೌಡ ಎಂಬುವವರು ಮಾತನಾಡಿ, ನಮಗೆ ಮೂರು ತಿಂಗಳಿಂದ ಗ್ಯಾಸ್ ನೀಡಿಲ್ಲ. ಕೇಳಲು ಹೋದರೆ ಆರು ಸಾವಿರ ಲಂಚ ಕೋಡಿ ಎಂದು ಕೇಳುತ್ತಾರೆ. ನಿತ್ಯ ಕಾಯಕವನ್ನು ಬಿಟ್ಟು ಬೆಳಗ್ಗೆ 7 ಗಂಟೆಗೆ ಕಚೇರಿಗೆ ಬಂದರೆ ಇವರು ಇಲ್ಲಿಗೆ ಬರುವುದು 11 ಗಂಟೆಗೆ ಎಂದು ಆರೋಪಿಸಿದರು. ಯುದ್ಧದ ನೆಪ ಹೇಳಿ ಕಾಳಸಂತೆಯಲ್ಲಿ ಬೇಕಾದವರಿಗೆ ಎರಡು ಸಾವಿರಕ್ಕೆ ಮಾರಾಟ ಮಾಡುತ್ತಾರೆ. ರೈತರು, ಬಡವರ್ಗದವರು, ಕೂಲಿ ಕಾರ್ಮಿಕರಿಗೆ ಮೋಸ ಮಾಡುತ್ತಿದ್ದಾರೆ. ಸಂಬಂಧಿಸಿದ ಏಜೆನ್ಸಿ ಮಾಲೀಕರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದರು.
ರವಿಕುಮಾರ್ ಎಂಬುಬವರು ಮಾತನಾಡಿ, ಜಿಲ್ಲಾಧಿಕಾರಿಗೆ ಲಿಖಿತ ರೂಪದಲ್ಲಿ ದೂರು ನೀಡಲಾಗುವುದು ಎಂದರು. ಗ್ರಾಹಕರು ರಸ್ತೆ ತಡೆ ನಡೆಸಲು ಮುಂದಾದಾಗ ಬನ್ನೂರು ಪೊಲೀಸರು ಸಮಸ್ಯೆ ತಿಳಿಗೊಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net