ಮಳೆಗಾಗಿ ಪ್ರಾರ್ಥಿಸಿ ಬಸವೇಶ್ವರಸ್ವಾಮಿಗೆ ಪೂಜೆ

ತಿ.ನರಸೀಪುರ ಕಿರುಗಾವಲು ಮುಖ್ಯ ರಸ್ತೆಯಲ್ಲಿರುವ ತಾಲೂಕಿನ ಬೊಮ್ಮನಹಳ್ಳಿ ಬಳಿ ಒಡೆದ ಕಲ್ಲು ಬಸವೇಶ್ವರ ಸ್ವಾಮಿಗೆ ಹಲವಾರ ಮಠದ ಶ್ರೀ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ಅವರು ಮಳೆಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದರು. ಚಿದರವಳ್ಳಿ, ಬೊಮ್ಮನಹಳ್ಳಿ, ದೊಡ್ಡಲಕ್ಷ್ಮಿಪುರ ಗ್ರಾಮಸ್ಥರು ಇದ್ದರು.

Published on
ತಿ.ನರಸೀಪುರ: ತಾಲೂಕಿನ ದೊಡ್ಡಲಕ್ಷ್ಮಿಪುರ ಎಲ್ಲೆಗೆ ಸೇರಿದ ಚಿದರವಳ್ಳಿ-ಬೊಮ್ಮನಹಳ್ಳಿ ಗ್ರಾಮದ ಶ್ರೀ ಒಡೆದ ಕಲ್ಲು ಬಸವೇಶ್ವರ ಸ್ವಾಮಿಗೆ ಮಳೆಗಾಗಿ ಪ್ರಾರ್ಥಿಸಿ ಸೋಮವಾರ ಪೂಜೆ ಸಲ್ಲಿಸಲಾಯಿತು.
ಮಳೆಯ ದೇವರು ಎಂದೇ ಹೆಸರಾಗಿರುವ ದೇವರಿಗೆ ಗ್ರಾಮಸ್ಥರು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಹಲವಾರ ಮುಡುಕನ ಪುರ ಮಠದ ಶ್ರೀ ಷಡಕ್ಷರ ದೇಶೀಕೇಂದ್ರ ಸ್ವಾಮೀಜಿ ಗ್ರಾಮಸ್ಥರೊಂದಿಗೆ ಪೂಜೆ ಸಲ್ಲಿಸಿ ಮಾತನಾಡಿ, ಗ್ರಾಮದಲ್ಲಿ ಪ್ರತಿವರ್ಷ ಸಮಯಕ್ಕೆ ಸರಿಯಾಗಿ ಮಳೆಯಾಗದಿದ್ದಾಗ ಗ್ರಾಮಸ್ಥರೆಲ್ಲರೂ ಸೇರಿ ಪರ ಮಾಡಿ ಅನ್ನಸಂತರ್ಪಣೆ ಮಾಡುವ ಪದ್ಧತಿ ಇದೆ. ಈ ಪದ್ಧತಿಯನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಮಳೆಯಾಗಿ ರೈತರು ಸಮೃದ್ಧಿಯಾಗಿ ಬೆಳೆ ಬೆಳೆಯಲಿ ಎಂದರು ಆಶಿಸಿದರು.
ದೇವಸ್ಥಾನ ವ್ಯಾಪ್ತಿಯ 14 ಗ್ರಾಮಗಳ ಜನರು ಸೇರಿ ಟ್ರಸ್ಟ್ ರಚಿಸಿಕೊಂಡು ದೇವಾಲಯ ಅಭಿವೃದ್ಧಿಗೆ ಮುಂದಾಗಬೇಕು. ದಾಸೋಹ ಪ್ರಕ್ರಿಯೆ ನಡೆಯಬೇಕು. ಈ ನಿಟ್ಟಿನಲ್ಲಿ ಗ್ರಾಮಸ್ಥರು ಅಭಿವೃದ್ಧಿಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದರು.
ಚಿದರವಳ್ಳಿ, ಬೊಮ್ಮನಹಳ್ಳಿ, ದೊಡ್ಡಲಕ್ಷ್ಮಿಪುರ, ಕಳ್ಳೀಪುರ, ನಾಗಲಗೆರೆ, ಬೂದಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಜನರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net