ಧರಣಿ ಕೈಬಿಟ್ಟ ಖಾತೆದಾರರು

ಸರಗೂರು ಅಂಚೆ ಕಚೇರಿ ಮುಂಭಾಗ ಧರಣಿ ನಡೆಸುತ್ತಿದ್ದ ಖಾತೆದಾರರೊಂದಿಗೆ ಹಿರಿಯ ಅಂಚೆ ಅಧೀಕ್ಷಕ ಹರೀಶ್ ಮಾತನಾಡಿದರು. ಮಹೇಶ್, ನಾಗರಾಜು, ಲೋಕೇಶ್ ಇದ್ದರು.
ಸರಗೂರು ಅಂಚೆ ಕಚೇರಿ ಮುಂಭಾಗ ಧರಣಿ ನಡೆಸುತ್ತಿದ್ದ ಖಾತೆದಾರರೊಂದಿಗೆ ಹಿರಿಯ ಅಂಚೆ ಅಧೀಕ್ಷಕ ಹರೀಶ್ ಮಾತನಾಡಿದರು. ಮಹೇಶ್, ನಾಗರಾಜು, ಲೋಕೇಶ್ ಇದ್ದರು.
Published on
ಸರಗೂರು: ಪಟ್ಟಣದ ಅಂಚೆ ಕಚೇರಿ ಎದುರು ಖಾತೆದಾರರು ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಗುರುವಾರ ಕೊನೆಗೊಂಡಿತು.
ಅಂಚೆ ಇಲಾಖೆ ಸಿಬ್ಬಂದಿಯೊಬ್ಬರು ಗ್ರಾಹಕರು ಖಾತೆಯಲ್ಲಿ ಇಟ್ಟಿದ್ದ ಹಣವನ್ನು ಖಾತೆದಾರರ ನಕಲಿ ಸಹಿ ಬಳಸಿ 3 ಕೋಟಿ ರೂ.ಗೂ ಹೆಚ್ಚು ಹಣ ಲಪಟಾಯಿಸಿದ್ದಾರೆ. ಈ ಸಂಬಂಧ ಖಾತೆದಾರರು ದೂರು ನೀಡಿ ಆರು ತಿಂಗಳಾದರೂ ಠೇವಣಿ ಹಣ ನೀಡಿಲ್ಲ, ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಆರೋಪಿಸಿ ಖಾತೆದಾರರು ಕೆಲ ದಿನಗಳಿಂದ ಧರಣಿ ನಡೆಸುತ್ತಿದ್ದರು.
ಗುರುವಾರ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಹಿರಿಯ ಅಂಚೆ ಅಧೀಕ್ಷಕ ಜಿ.ಹರೀಶ್ ಮಾತನಾಡಿ, ಗ್ರಾಹಕರ ಹಣ ದುರ್ಬಳಕೆಯಾಗಿರುವ ಮಾಹಿತಿಯನ್ನು ಬೆಂಗಳೂರಿನ ಇಲಾಖೆ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಶೀಘ್ರದಲ್ಲೇ ನಿಮ್ಮ ಹಣವನ್ನು ಖಾತೆಗೆ ಜಮೆ ಮಾಡಲಾಗುವುದು. ಉನ್ನತ ಮಟ್ಟದ ಅಧಿಕಾರಿಗಳು ಸಭೆ ನಡೆಸಿ ಗ್ರಾಹಕರ ಖಾತೆಗೆ ನೇರವಾಗಿ ಜಮೆ ಮಾಡಬೇಕು ಎಂದು ತಿಳಿಸಿದ್ದಾರೆ. ಹಾಗಾಗಿ ಪ್ರತಿಭಟನೆ ಕೈಬಿಡಬೇಕು ಎಂದು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಖಾತೆದಾರರು ಪ್ರತಿಭಟನೆ ಕೈಬಿಟ್ಟರು.
ಆರ್ಯ ಈಡಿಗ ಸಮಾಜದ ತಾಲೂಕು ಅಧ್ಯಕ್ಷ ಎಸ್.ಎನ್.ನಾಗರಾಜು, ಮುಳ್ಳೂರು ಲೋಕೇಶ್, ಎಸ್.ಎನ್.ಮೋಹನಕುಮಾರ್, ಎಸ್.ಆರ್.ಮಹೇಶ್, ಶಾಂಭವಮೂರ್ತಿ, ಮಹದೇವಪ್ಪ, ದಾಸೇಗೌಡ, ನಿತಿನ್, ಶಾಂತಣ್ಣ, ಸರಗೂರು ಲೋಕೇಶ್, ಸುಂದರಮ್ಮ, ರಾಜೇಶ್, ಸಿ.ನಾಗರಾಜ್, ಸಿ.ಚೌಡಶೆಟ್ಟಿ, ವೆಂಕಟೇಶ್, ಅನಂತ ಶಯನ, ಸುಧಾ, ಜಯಮ್ಮ, ಸರೋಜಮ್ಮ, ಜಿ.ಬಿ.ಶಶಿಕಲಾ, ಜಗದೀಶ್ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net