ಪ್ಲಾಸ್ಟಿಕ್ ಬಳಕೆ ವಿಶ್ವಕ್ಕೆ ಕಂಟಕಪ್ರಾಯ

ಹುಣಸೂರು ತಾಲೂಕು ಶೆಟ್ಟಿಹಳ್ಳಿಯಲ್ಲಿ ಆಯೋಜಿಸಿದ್ದ ಸಮಾಜ ಕಾರ್ಯ ವಿಭಾಗದ ವಿಶೇಷ ವಾರ್ಷಿಕ ಶಿಬಿರದಲ್ಲಿ ಡಾ.ಮುರ್ಷಿದ್, ಪ್ರೊ.ಕುಮಾರಸ್ವಾಮಿ, ಕೆ.ಗಣಪತಿ, ಜಗದೀಶ್ ಇತರರಿದ್ದರು.
ಹುಣಸೂರು ತಾಲೂಕು ಶೆಟ್ಟಿಹಳ್ಳಿಯಲ್ಲಿ ಆಯೋಜಿಸಿದ್ದ ಸಮಾಜ ಕಾರ್ಯ ವಿಭಾಗದ ವಿಶೇಷ ವಾರ್ಷಿಕ ಶಿಬಿರದಲ್ಲಿ ಡಾ.ಮುರ್ಷಿದ್, ಪ್ರೊ.ಕುಮಾರಸ್ವಾಮಿ, ಕೆ.ಗಣಪತಿ, ಜಗದೀಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಔಟ್‌ರೀಚ್ ಸಂಸ್ಥೆ ತರಬೇತಿ ಸಂಯೋಜಕ ಜಿ.ಎಸ್.ಜಗದೀಶ್ ಹೇಳಿಕೆ
ಹುಣಸೂರು: ಪ್ಲಾಸ್ಟಿಕ್ ಬಳಕೆಯ ಅನಾಹುತಗಳ ಕುರಿತು ಯುವ ಸಮುದಾಯ ಸಮಾಜದಲ್ಲಿ ಅರಿವು ಮೂಡಿಸುವ ಕಾರ್ ನಡೆಸಬೇಕು ಎಂದು ಔಟ್‌ರೀಚ್ ಸಂಸ್ಥೆ ತರಬೇತಿ ಸಂಯೋಜಕ ಜಿ.ಎಸ್.ಜಗದೀಶ್ ತಿಳಿಸಿದರು.
ತಾಲೂಕಿನ ಶೆಟ್ಟಿಹಳ್ಳಿ ಹಾಡಿಯ ಗಿರಿಜನ ಆಶ್ರಮ ಶಾಲೆಯಲ್ಲಿ ಬೆಂಗಳೂರಿನ ಆಚಾರ್ಯ ಪದವಿ ಅಧ್ಯಯನ ಸಂಸ್ಥೆಯ ಸಮಾಜಕಾರ್ಯ ವಿಭಾಗದ ವತಿಯಿಂದ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ತ್ಯಾಜ್ಯನಿರ್ವಹಣೆ ಕುರಿತು ಮಾತನಾಡಿದರು. ಪ್ಲಾಸ್ಟಿಕ್ ಬಳಕೆ ವಿಶ್ವಕ್ಕೆ ಕಂಟಕಪ್ರಾಯವಾಗಿದೆ. ವಿದ್ಯಾರ್ಥಿಗಳು ಮತ್ತು ಯುವಸಮೂಹ ಈ ಕುರಿತು ಸಮಾಜದಲ್ಲಿ ಅರಿವು ಮೂಡಿಸುವುದಲ್ಲದೆ ತ್ಯಾಜ್ಯಗಳ ನಿರ್ವಹಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸೇವಾ ಕಾರ್ಯ ಆರಂಭಿಸಬೇಕು ಎಂದು ಹೇಳಿದರು.
ತ್ಯಾಜ್ಯಗಳಲ್ಲಿ ಘನ, ದ್ರವ, ವೈದ್ಯಕೀಯ ಮತ್ತು ಇ-ವೇಸ್ಟ್‌ಗಳು ಪ್ರಮುಖವಾಗಿದ್ದು ಇವುಗಳ ವಿಲೇವಾರಿ ನಿರ್ವಹಣೆ ಅತ್ಯಂತ ಪ್ರಮುಖದ್ದಾಗಿದೆ. ಇವುಗಳನ್ನು ಸಾಧ್ಯವಾದ ಮಟ್ಟಿಗೆ ಶುದ್ಧೀಕರಿಸಿ ಮರುಬಳಕೆ ಮಾಡಲಾಗುತ್ತಿದೆ. ಏಕ ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆ ಮಾಡಲು ರಸ್ತೆ, ಸಿಮೆಂಟ್ ತಯಾರಿಕೆಗೆ ಹಾಗೂ ಹಲವು ಬಗೆಯ ಬ್ಯಾಗ್, ಜರ್ಕಿನ್ ಹಾಗೂ ಶಾಲೆಗಳಲ್ಲಿ ಡೆಸ್ಕ್‌ಗಳ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ಸಾಧ್ಯವಾದಷ್ಟು ಪ್ಲಾಸ್ಟಿಕ್ ವಸ್ತುಗಳಿಂದ ದೂರವಿರಬೇಕು. ಹೆಚ್ಚಾಗಿ ಮರುಬಳಕೆಯಾಗುವ ವಸ್ತುಗಳನ್ನು ಬಳಸಿಕೊಳ್ಳುವುದರ ಜತೆಗೆ ಇವುಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ ಎಂದರು.
ಆಚಾರ್ಯ ಪದವಿ ಅಧ್ಯಯನ ಸಂಸ್ಥೆಯ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ಮರ್ಷಿದ್, ಪ್ರೊ.ಕುಮಾರಸ್ವಾಮಿ, ಔಟ್ ರೀಚ್ ಸಂಸ್ಥೆಯ ಯೋಜನ ಸಮನ್ವಯಾಧಿಕಾರಿ ಸಿ.ಪ್ರಶಾಂತ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಗಣಪತಿ, ಶಿಬಿರಾರ್ಥಿಗಳಾದ ಆಕ್ವೇತಾ, ಮೇಘಾಲಯದ ತಾಬಾ, ಕೇರಳದ ಹ್ಯಾಪಿ ಸೇರಿದಂತೆ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net