ಚನ್ನಸೋಗೆಯಲ್ಲಿ ಹುಲಿ ದಾಳಿಗೆ ಎತ್ತು ಬಲಿ

ಹನಗೋಡು ಹೋಬಳಿಯ ಚನ್ನಸೋಗೆ ಗ್ರಾಮದಲ್ಲಿ ಹುಲಿ ದಾಳಿ ನಡೆಸಿ ಎತ್ತನ್ನು ಕೊಂದು ಹಾಕಿದೆ.
ಹನಗೋಡು ಹೋಬಳಿಯ ಚನ್ನಸೋಗೆ ಗ್ರಾಮದಲ್ಲಿ ಹುಲಿ ದಾಳಿ ನಡೆಸಿ ಎತ್ತನ್ನು ಕೊಂದು ಹಾಕಿದೆ.
Published on
ಹನಗೋಡು: ಹನಗೋಡು ಹೋಬಳಿಯ ಚನ್ನಸೋಗೆಯ ಜಮೀನಿನಲ್ಲಿ ಸೋಮವಾರ ಮೇಯಲು ಬಿಟ್ಟಿದ್ದ ಎತ್ತಿನ ಮೇಲೆ ಹಗಲು ವೇಳೆಯೇ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.
ಹನಗೋಡು ಹೋಬಳಿಯ ಚನ್ನಸೋಗೆ ಗ್ರಾಮದ ಶಿವರಾಮು ಅವರ ಒಂದು ಲಕ್ಷ ರೂ. ಬೆಲೆ ಬಾಳುವ ಎತ್ತು ಹುಲಿಗೆ ಬಲಿಯಾಗಿದೆ. ಚನ್ನಸೋಗೆಯ ಶಿವರಾಮು ತಮ್ಮ ಹೊಲದಲ್ಲಿ ಎತ್ತುಗಳನ್ನು ಕಟ್ಟಿ ಹಾಕಿ, ಕಾರ್ಮಿಕರೊಂದಿಗೆ ತಂಬಾಕು ಸಸಿಯ ಕುಡಿ ಮುರಿಯುವ ಕೆಲಸ ಮಾಡುತ್ತಿದ್ದರು. ಈ ವೇಳೆ ಹುಲಿ ದಾಳಿಗೆ ಸಿಲುಕಿದ ಎತ್ತು ಅರಚಿಕೊಳ್ಳಲಾರಂಭಿಸಿದ್ದನ್ನು ಕಂಡ ಕಾರ್ಮಿಕರು ಕಿರುಚಾಟ ನಡೆಸಿ, ಪಟಾಕಿ ಸಿಡಿಸಿದ ವೇಳೆ ಮೊದಲೇ ಸಾಯಿಸಿದ ಎತ್ತನ್ನು ಎಳೆದೊಯ್ಯುತ್ತಿದ್ದ ಹುಲಿಯು ಬೆದರಿ ಕಳೇಬರವನ್ನು ಬಿಟ್ಟು ಪರಾರಿಯಾಗಿದೆ.
ಸ್ಥಳಕ್ಕೆ ಪ್ರಾದೇಶಿಕ ಅರಣ್ಯ ವಿಭಾಗದ ಡಿಆರ್‌ಎಫ್‌ಒ ದಿವಾಕರ್, ಬೀಟ್‌ಗಾರ್ಡ್ ಉದಯಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಟ್ರ್ಯಾಪಿಂಗ್ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಬೋನು ಸಹ ಇಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net