ಪುಟ್ಟಣ್ಣ ಕಣಗಾಲ್ ನಿವಾಸಕ್ಕೆ ಅಧಿಕಾರಿಗಳ ಭೇಟಿ

ಕಣಗಾಲ್ ಗ್ರಾಮದಲ್ಲಿರುವ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿವಾಸಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ವಿನೋದ್‌ಚಂದ್ರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಕೆ.ಗಣೇಶ್, ಕುಮಾರಶೆಟ್ಟಿ, ಮಂಜುನಾಥ್, ಚಂದ್ರಶೇಖರ, ದತ್ತಾತ್ರೇಯ ಇದ್ದರು.
ಕಣಗಾಲ್ ಗ್ರಾಮದಲ್ಲಿರುವ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿವಾಸಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ವಿನೋದ್‌ಚಂದ್ರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಕೆ.ಗಣೇಶ್, ಕುಮಾರಶೆಟ್ಟಿ, ಮಂಜುನಾಥ್, ಚಂದ್ರಶೇಖರ, ದತ್ತಾತ್ರೇಯ ಇದ್ದರು.
Published on
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಸಮೀಪದ ಕಣಗಾಲ್ ಗ್ರಾಮದಲ್ಲಿರುವ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿವಾಸಕ್ಕೆ ಗುರುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಹಾಗೂ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ವಿನೋದ್‌ಚಂದ್ರ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ಪುಟ್ಟಣ್ಣ ಕಣಗಾಲ್ ಅವರ ನಿವಾಸವನ್ನು ವಸ್ತುಸಂಗ್ರಹಾಲಯವನ್ನಾಗಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಇಲಾಖೆ ಸೂಚನೆಯಂತೆ ಅಧಿಕಾರಿಗಳು ಭೇಟಿ ನೀಡಿದ್ದರು.
ಸರ್ಕಾರದ ಕಾರ್ಯದರ್ಶಿಗಳು, ಇಲಾಖೆಯ ಆಯುಕ್ತರ ಸೂಚನೆಯಂತೆ ಪುಟ್ಟಣ್ಣ ಅವರ ಮನೆಗೆ ಭೇಟಿ ನೀಡಲಾಗಿದೆ. ಮನೆಯ ಸ್ಥಿತಿಗತಿ ಹಾಗೂ ಸ್ಥಳೀಯರ ಮಾಹಿತಿಗಳನ್ನು ಪಟ್ಟಿ ಮಾಡಿ ಇಲಾಖೆಗೆ ವರದಿ ಸಲ್ಲಿಸಲಾಗುವುದು. ಸ್ಮಾರಕ ನಿರ್ಮಾಣ ಹಾಗೂ ಕೆಲಸ ಕಾರ್ಯಗಳ ಬಗ್ಗೆ ಇಲಾಖೆಯು ಯೋಜನೆ ಸಿದ್ಧಪಡಿಸಿ ಮುಂದಿನ ಸಿದ್ಧತೆಯೊಂದಿಗೆ ಕ್ರಮಕ್ಕೆ ಸೂಚಿಸುತ್ತದೆ. ಇದೊಂದು ಪೂರ್ವಭಾವಿ ಭೇಟಿಯಾಗಿದೆ ಎಂದು ವಿನೋದ್‌ಚಂದ್ರ ಮಾಹಿತಿ ನೀಡಿದರು.
ಕಣಗಾಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಗಣೇಶ್, ಮುಖಂಡರಾದ ಮಂಜುನಾಥ್ ಶಾಸ್ತ್ರಿ, ಕೆ.ಎಸ್.ಚಂದ್ರಶೇಖರ್, ದತ್ತಾತ್ರೇಯ, ಬಿಲ್ ಕಲೆಕ್ಟರ್ ಪಾಂಡು ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net