_1787847183309.webp?w=480&auto=format%2Ccompress&fit=max)
_1787847183309.webp?w=480&auto=format%2Ccompress&fit=max)
ಹುಣಸೂರು:
ತಂಬಾಕು ಮಂಡಳಿ, ರಾಷ್ಟ್ರೀಯ ವಾಣಿಜ್ಯ ಕೃಷಿ ಸಂಶೋಧನಾ ಕೇಂದ್ರ(ಎನ್‌ಐಆರ್‌ಸಿಎ)ಮತ್ತು ಖರೀದಿದಾರರನ್ನು ಒಳಗೊಂಡ ಫೀಲ್ಡ್ ಫ್ರೆಂಡ್ ಟೀಮ್ ತಂಡದ ಅಧಿಕಾರಿಗಳು ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು ಬೆಳೆದಿರುವ ತಂಬಾಕು ಬೆಳೆಗಳ ಪರಿಶೀಲನೆ ನಡೆಸಿದರು.
ತಂಡ ರಚನೆ ಮತ್ತು ಭೇಟಿಯ ಮೂಲ ಉದ್ದೇಶ ಪ್ರಸ್ತುತದಲ್ಲಿ ತಂಬಾಕು ಸಸಿಗಳ ಬೆಳವಣಿಗೆ ಗಮನಿಸಲಿದ್ದೇವೆ. ಬರಗಾಲದ ಸ್ಥಿತಿಯಲ್ಲಿ ಎಲೆಗಳ ಕ್ಯೂರಿಂಗ್(ಹದಗೊಳಿಸುವ ಕಾರ್ಯ) ಹೇಗೆ ನಡೆದಿದೆ? ಗುಣಮಟ್ಟದ ಎಲೆಗಳು ಸಿಗುತ್ತಿವೆಯೇ? ಮೀಡಿಯಂ ಅಥವಾ ಉತ್ತಮ ಗುಣಮಟ್ಟದ ಎಲೆಗಳು ಸಿಗುತ್ತಿವೆಯೇ? ತಂಬಾಕು ಬೆಳೆದ ಭೂಮಿಯ ಅಕ್ಕಪಕ್ಕದಲ್ಲಿ ಜಮೀನುಗಳು ಬೀಳು ಬಿದ್ದಿವೆಯೇ ಮುಂತಾದ ಸಮಸ್ಯೆಗಳ ಕುರಿತು ಪರಿಶೀಲಿಸಿ ರೈತರಿಂದಲೂ ಮಾಹಿತಿ ಕಲೆಹಾಕುತ್ತೇವೆ ಎಂದು ಹೇಳಿದರು.