ಎಂದಿಗೂ ಜಾತಿ ರಾಜಕಾರಣ ಮಾಡಲಿಲ್ಲ

ಸಾಲಿಗ್ರಾಮ ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್, ಅಮಿತ್ ದೇವರಹಟ್ಟಿ ಸಮ್ಮುಖದಲ್ಲಿ ಗ್ರಾಮದ ಮುಖಂಡರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದರು. ನಾಗಣ್ಣ, ಮೇಲೂರು ಗೌತಮ್, ಬಿ.ಎಚ್.ಮಹದೇವ್, ಗುರುಪ್ರಸಾದ್, ಮಧು ಇದ್ದರು.
ಸಾಲಿಗ್ರಾಮ ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್, ಅಮಿತ್ ದೇವರಹಟ್ಟಿ ಸಮ್ಮುಖದಲ್ಲಿ ಗ್ರಾಮದ ಮುಖಂಡರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದರು. ನಾಗಣ್ಣ, ಮೇಲೂರು ಗೌತಮ್, ಬಿ.ಎಚ್.ಮಹದೇವ್, ಗುರುಪ್ರಸಾದ್, ಮಧು ಇದ್ದರು.
Published on
ಸಾಲಿಗ್ರಾಮ: ತಾಲೂಕಿನಲ್ಲಿ 15 ವರ್ಷ ಶಾಸಕನಾಗಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಎಂದಿಗೂ ಜಾತಿ ರಾಜಕಾರಣ ಮಾಡಲಿಲ್ಲ. ಎಲ್ಲರನ್ನೂ ಸಮಾನತೆಯಿಂದ ಕಂಡಿದ್ದೇನೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.
ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಕ್ತಿ ಮೀರಿ ತಾಲೂಕು ಅಭಿವೃದ್ಧಿ ಮಾಡಿದ್ದೇನೆ. ತಾಲೂಕಿನಲ್ಲಿ ರಾಜಕೀಯವಾಗಿ ಆಯಾ ಪಕ್ಷದ ಮುಖಂಡರಾದ ಮಾಜಿ ಸಚಿವ ಎಸ್.ನಂಜಪ್ಪ, ಎಚ್.ವಿಶ್ವನಾಥ್ ಅವರು ಮರೆತಿಲ್ಲ. ಆದರೆ, ರಾಜಕೀಯವಾಗಿ ಮರುಜನ್ಮ ನೀಡಿದ ಎಚ್.ವಿಶ್ವನಾಥ್ ಅವರಿಗೆ ಮೋಸ ಮಾಡಿದವರು ಎಂದಿಗೂ ಉದ್ದಾರವಾಗಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಶಾಸಕ ಡಿ.ರವಿಶಂಕರ್ ಮತ್ತು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಅವರನ್ನು ಟೀಕಿಸಿದರು.
ಸಾಲಿಗ್ರಾಮವನ್ನು ತಾಲೂಕು ಮಾಡಿಸುವುದರ ಜತೆಗೆ ಬಡ ವಿದ್ಯಾರ್ಥಿಗಳು, ಅಂಗವಿಕಲರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರ ಸಂಕಷ್ಟಗಳಿಗೆ ಸ್ಪಂದಿಸಿದ ತೃಪ್ತಿ ನನಗಿದೆ. ಗ್ರಾಮದ ಕೆಲವು ಕುರುಬ ಸಮಾಜದ ಹಿರಿಯರು, ಕಿರಿಯರು ಮತ್ತು ಯುವ ನಾಯಕರು ಕಾಂಗ್ರೆಸ್ ತೊರೆದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮಿತ್ ದೇವರಹಟ್ಟಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಎಲ್ಲರನ್ನು ರಾಜಕೀಯವಾಗಿ ಸಮಾನತೆಯಿಂದ ಕಾಣುವ ಮೂಲಕ ಪಕ್ಷದಲ್ಲಿ ಉನ್ನತ ಸ್ಥಾನಮಾನ ಒದಗಿಸಿಕೊಡಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮಿತ್ ವಿ.ದೇವರಹಟ್ಟಿ ಮಾತನಾಡಿ, ಶಾಸಕ ಡಿ.ರವಿಶಂಕರ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಮೂರು ವರ್ಷಗಳಿಂದ ಸ್ವ ಜಾತಿಯವರನ್ನೇ ವಂಚಿಸುತ್ತಿದ್ದಾರೆ. ನಮ್ಮ ತಂದೆ ತಾಲೂಕಿನಲ್ಲಿ ಸುದೀರ್ಘ ಅವಧಿಯಿಂದ ರಾಜಕಾರಣ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಸಮಾಜದ ಎಲ್ಲ ಮುಖಂಡರನ್ನು ರಾಜಕೀಯವಾಗಿ ಬೆಳೆಸುವುದರ ಜೊತೆಗೆ ಸಮಾನತೆಯಿಂದ ಕಂಡಿದ್ದರು. ಈ ದಿನ ಶಾಸಕರು ರಾಜಕೀಯವಾಗಿ ನನ್ನನ್ನೇ ಮುಗಿಸಲು ಹೊರಟಿದ್ದಾರೆ. ಶಾಸಕ ರವಿಶಂಕರ್ ಅವರಿಗೆ ನಾನು ಯಾರೆಂದು ತೋರಿಸುತ್ತೇನೆ. ನಾವು ತಾಲೂಕಿನಲ್ಲಿ ಕೈಕಟ್ಟಿ ಕುಳಿತಿಲ್ಲ. ಮುಂದಿನ ಸ್ಥಳೀಯ ಚುನಾವಣೆಯಲ್ಲಿ ನೀವು ಮಾಡಿರುವ ಮೋಸಗಳನ್ನು ನಿಮಗೆ ತೋರಿಸುವ ಮೂಲಕ ಎಚ್.ವಿಶ್ವನಾಥ್ ಬೆಂಬಲಿಗರ ಶಕ್ತಿ ಏನೆಂದು ನೋಡುತ್ತೀರಿ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದ್ವಾರಕೀಶ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಮಂಜೇಗೌಡ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.
ಕೆಂಚನಹಳ್ಳಿ ಗ್ರಾಮದ ಮುಖಂಡರಾದ ಜೆ.ಸತೀಶ್, ಕೆ.ಮಹದೇವ, ಕೆ.ಸಿ.ಶಿವಕುಮಾರ್, ರೇವಣ್ಣ, ಅಶೋಕ, ಕೆ.ಪಿ.ಮಹದೇವ್, ನಿಂಗರಾಜೇಗೌಡ, ಜವರೇಗೌಡ, ರಮೇಶ, ಸುರೇಶ, ಚಂದ್ರು ಯೋಗೇಶ, ರಂಗೇಗೌಡ, ಮುತ್ತು, ದೇವರಾಜು, ತಮ್ಮೇಗೌಡ, ಯೋಗೀಶ, ಕೆ.ಎಚ್.ರಘು, ಲೋಕೇಶ್, ದಿವಾಕರ್, ಮಹದೇವ್, ದೊಡ್ಡಯ್ಯ, ಶೇಖರ, ಮಹದೇವ, ವಿನಯಕುಮಾರ್, ಕರಿಗೌಡ, ಪ್ರಸನ್ನ, ಕಿರಣ, ದರ್ಶನ್ ಜೆಡಿಎಸ್ ಸೇರ್ಪಡೆಯಾದರು. ತಾಪಂ ಮಾಜಿ ಅಧ್ಯಕ್ಷ ನಾಗಣ್ಣ, ಮೇಲೂರು ಗೌತಮ್, ಬಿ.ಎಚ್.ಮಹದೇವ್, ಗುರುಪ್ರಸಾದ್, ಮಧು, ಸಿ.ಬಿ.ಲೋಕೇಶ್, ರವಿ, ಮಾಲೇಗೌಡ, ಬಿ.ರಾಜು, ಅನೀಫ್ ಗೌಡ, ಅನಿಲ್ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net