ಕರುಗಳ ಸಾಕಣೆ ಆರ್ಥಿಕ ಲಾಭ

ನಂಜನಗೂಡು ತಾಲೂಕು ಕೂಗಲೂರು ಗ್ರಾಮದಲ್ಲಿ ಆಯೋಜಿಸಿದ್ದ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಡಾ.ಮೋಹನ್ ಕುಮಾರ್, ಗಣೇಶ್ ಪ್ರಸಾದ್, ಡಾ.ರಾಘವೇಂದ್ರ, ಡಾ.ಅಭಿಲಾಷ್ ಇದ್ದರು.
ನಂಜನಗೂಡು ತಾಲೂಕು ಕೂಗಲೂರು ಗ್ರಾಮದಲ್ಲಿ ಆಯೋಜಿಸಿದ್ದ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಡಾ.ಮೋಹನ್ ಕುಮಾರ್, ಗಣೇಶ್ ಪ್ರಸಾದ್, ಡಾ.ರಾಘವೇಂದ್ರ, ಡಾ.ಅಭಿಲಾಷ್ ಇದ್ದರು.
Published on
ನಂಜನಗೂಡು: ಕರಗಳು ಜನಿಸಿದ ತಕ್ಷಣ ತಾಂತ್ರಿಕವಾಗಿ ಪಾಲನೆ ಮಾಡಿದರೆ ಮುಂದಿನ ದಿನಗಳಲ್ಲಿ ಹೈನುಗಾರಿಕೆಯಿಂದ ಲಾಭ ಗಳಿಸಬಹುದು ಎಂದು ಪಶು ಸಂಗೋಪನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಮೋಹನ್ ಕುಮಾರ್ ತಿಳಿಸಿದರು.
ತಾಲೂಕಿನ ಕೂಗಲೂರು ಗ್ರಾಮದಲ್ಲಿ ಬುಧವಾರ ಪಶುಪಾಲನಾ ಇಲಾಖೆ ಹಾಗೂ ನ್ಯಾಷನಲ್ ಆಗ್ರೋ ಫೌಂಡೇಷನ್ ವತಿಯಿಂದ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಿಮ್ಮ ಮನೆಯಲ್ಲಿ ಹುಟ್ಟಿದ ಕರುಗಳನ್ನು ಉತ್ತಮವಾಗಿ ಪಾಲನೆ ಮಾಡಿ. ಹಸುಗಳನ್ನು ಕೊಂಡುಕೊಳ್ಳಲು 60ರಿಂದ 70 ಸಾವಿರ ರೂ. ಹಣ ಬೇಕಾಗುತ್ತದೆ. ಕರುಗಳಿಗೆ ಕಾಲಕಾಲಕ್ಕೆ ತಕ್ಕಂತೆ ಜಂತುಹುಳು, ಖನಿಜ ಮಿಶ್ರಣ ಸೇರಿದಂತೆ ಬೇಕಾದ ಔಷಧಗಳನ್ನು ನೀಡಿ ಉತ್ತಮವಾಗಿ ಬೆಳೆಸಿ ಎಂದು ಸಲಹೆ ನೀಡಿದರು.
ನ್ಯಾಷನಲ್ ಆಗ್ರೋ ಫೌಂಡೇಷನ್‌ನ ಕೃಷಿ ಅಧಿಕಾರಿ ಗಣೇಶ್ ಪ್ರಸಾದ್ ಮಾತನಾಡಿ, ರೈತರು ಕೃಷಿಯ ಜತೆಗೆ ಹೈನುಗಾರಿಕೆಯನ್ನು ಒಟ್ಟಿಗೆ ಮಾಡುವುದರಿಂದ ಹೆಚ್ಚಿನ ಆದಾಯ ಗಳಿಸಬಹುದಾಗಿದೆ. ತಾಲೂಕಿನ ಪ್ರತಿ ಗ್ರಾಮಗಳಲ್ಲೂ ಹೈನುಗಾರಿಕೆಗೆ ಬೇಕಾದ ತರಬೇತಿ ಶಿಬಿರಗಳನ್ನು ಆಯೋಜನೆ ಮಾಡುತ್ತಿದ್ದೇವೆ ಎಂದರು.
ಡೇರಿ ಅಧ್ಯಕ್ಷ ಮಹದೇವ ನಾಯಕ, ಚಿಕ್ಕನಾಯಕ, ಡಾ.ರಾಘವೇಂದ್ರ, ಡಾ.ವಿವೇಕ್, ಡಾ.ಅಭಿಲಾಷ್, ಡಾ.ಮಧು, ಪ್ರಭಾವತಿ, ರೇವಣ್ಣ, ನಂಜುಂಡಸ್ವಾಮಿ, ಗುರುಸ್ವಾಮಿ, ರಮೇಶ್, ಅನಿಲ್, ಕೀರ್ತಿ, ಕುಮಾರ್ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net