11 ಪ್ರಾಥಮಿಕ ಶಾಲೆಗಳ ಮಕ್ಕಳು ಭಾಗವಹಿಸಿದ್ದರು. ಜಾನಪದ ನೃತ್ಯ, ಚಿತ್ರಕಲೆ, ಧಾರ್ಮಿಕ ಪಠಣ, ಮಿಮಿಕ್ರಿ, ಚರ್ಚಾಸ್ಪರ್ಧೆ, ಕವನ ವಾಚನ, ಆಶುಭಾಷಣ, ವೇಷ ಭೂಷಣ ಸ್ಪರ್ಧೆಗಳು ನಡೆದವು. ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷೆ ರಶ್ಮಿ ರಾಜು, ಬಾಲಚಂದ್ರ, ಇಸಿಒ ಬಸವರಾಜು, ಸಿಆರ್‌ಪಿ ಶಿವರಾಜು, ಮುಖ್ಯ ಶಿಕ್ಷಕಿ ಮಂಜುಳಾ ಬಾಯಿ, ರುಕ್ಮಿಣಮ್ಮ, ಶಲೀನಾ, ಕೃಷ್ಣೇಗೌಡ, ಸುಮಾ, ಹೊಸಹಳ್ಳಿ ರವಿ, ವಿವಿಧ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.