ಬೆಕ್ಕರೆ ಶಾಲೆಯಲ್ಲಿ ಅಮ್ಮಂದಿರ ಕೈ ತುತ್ತು ದಿನ

ಬೆಕ್ಕರೆ ಶಾಲೆಯಲ್ಲಿ ಆಯೋಜಿಸಿದ್ದ ಅಮ್ಮಂದಿರ ಕೈತುತ್ತು ದಿನ ಕಾರ್ಯಕ್ರಮದಲ್ಲಿ ಬಿಇಒ ರವಿಪ್ರಸನ್ನ ಮಕ್ಕಳಿಗೆ ಊಟ ಬಡಿಸಿದರು.
ಬೆಕ್ಕರೆ ಶಾಲೆಯಲ್ಲಿ ಆಯೋಜಿಸಿದ್ದ ಅಮ್ಮಂದಿರ ಕೈತುತ್ತು ದಿನ ಕಾರ್ಯಕ್ರಮದಲ್ಲಿ ಬಿಇಒ ರವಿಪ್ರಸನ್ನ ಮಕ್ಕಳಿಗೆ ಊಟ ಬಡಿಸಿದರು.
Published on
ಬೆಟ್ಟದಪುರ: ಬೆಟ್ಟದಪುರ ಸಮೀಪದ ಬೆಕ್ಕರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಅಮ್ಮಂದಿರ ಕೈ ತುತ್ತಿನ ದಿನ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಬಿಇಒ ರವಿಪ್ರಸನ್ನ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣ ಪ್ರೋತ್ಸಾಹಿಸಲು ಸರ್ಕಾರ ಹಲವು ಉಚಿತ ಸವಲತ್ತುಗಳನ್ನು ನೀಡುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಿ. ಅಮ್ಮಂದಿರ ಕೈ ತುತ್ತಿನ ದಿನ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿರುವ ಬೆಕ್ಕರೆ ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಹಿರಿಯ ವಿದ್ಯಾರ್ಥಿನಿ ಕಾವ್ಯ ಸೋಮರಾಧ್ಯ ಮಾತನಾಡಿ, ಶಾಲೆಯಲ್ಲಿ ಆರು ವರ್ಷಗಳಿಂದ ಅಮ್ಮಂದಿರ ಕೈ ತುತ್ತಿನ ದಿನ ಕಾರ್ಯಕ್ರಮ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಪ್ರತಿವರ್ಷದಂತೆ ಈ ಬಾರಿಯೂ ಶಾಲಾ ಆವರಣದಲ್ಲಿ ಸಂಭ್ರಮ ಕಳೆಗಟ್ಟಿ ತಾಯಂದಿರು ಎಲ್ಲ ಒಟ್ಟಾಗಿ ನೆಲದ ಮೇಲೆ ಕುಳಿತು ತಮ್ಮ ಮಕ್ಕಳಿಗೆ ಮಧ್ಯಾಹ್ನದ ಉಪಾಹಾರ ಕೈ ತುತ್ತು ತಿನಿಸುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು. ಈ ವೇಳೆ ಅಮ್ಮಂದಿರು ಹಾಗೂ ವಿದ್ಯಾರ್ಥಿಗಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಕುಮಾರ್, ಉಪಾಧ್ಯಕ್ಷೆ ಲೀಲಾವತಿ, ಮುಖ್ಯಶಿಕ್ಷಕ ಬಿ.ಪಿ.ಚನ್ನೇಗೌಡ, ಶಿಕ್ಷಕರಾದ ವಿಶುಕುಮಾರ್, ಯೋಗೇಶ್, ಆಶಾ, ರಕ್ಷಿತ್, ಕವನಾ, ಅಂಗನವಾಡಿ ಕಾರ್ಯಕರ್ತೆ ರೂಪಾ, ಸಹಾಯಕಿ ಶಾರದಾ, ಅಡುಗೆ ಸಿಬ್ಬಂದಿ ಪ್ರತಿಮಾ, ಸೌಮ್ಯಾ, ಸತೀಶ್ ಆರಾಧ್ಯ, ಗ್ರಾಮದ ಮುಖಂಡರು, ಪಾಲಕರು, ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net