ಉನ್ನತ ಪದವಿ ಪಡೆದು ಪಾಲಕರ ಕನಸು ನನಸಾಗಿಸಿ

ಹನಸೋಗೆ ಪಿಯುಸಿ ಕಾಲೇಜಿನಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಿಡಿಸಿ ಉಪಾಧ್ಯಕ್ಷ ಕರಿಗೌಡ ವಿ ಎಸ್‌ಎಸ್ ಅಧ್ಯಕ್ಷ ಕೆ.ವಿ.ಮಹದೇವಪ್ಪ, ಪ್ರಾಂಶುಪಾಲ ವಿಶ್ವನಾಥ್ ಇದ್ದರು.
ಹನಸೋಗೆ ಪಿಯುಸಿ ಕಾಲೇಜಿನಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಿಡಿಸಿ ಉಪಾಧ್ಯಕ್ಷ ಕರಿಗೌಡ ವಿ ಎಸ್‌ಎಸ್ ಅಧ್ಯಕ್ಷ ಕೆ.ವಿ.ಮಹದೇವಪ್ಪ, ಪ್ರಾಂಶುಪಾಲ ವಿಶ್ವನಾಥ್ ಇದ್ದರು.
Published on
ಸಾಲಿಗ್ರಾಮ: ಕಾಲೇಜು ವಿದ್ಯಾಭ್ಯಾಸ ಮಾಡುವಾಗ ವಿದ್ಯಾರ್ಥಿಗಳು ತಂದೆ, ತಾಯಿಯ ಕಷ್ಟ ಅರ್ಥ ಮಾಡಿಕೊಂಡು ಓದುವುದರ ಕಡೆ ಹೆಚ್ಚು ಗಮನ ಹರಿಸಿದರೆ ಮಾತ್ರ ಉನ್ನತ ಪದವಿ ಪಡೆಯಲು ಸಾಧ್ಯ ಎಂದು ಕಾಲೇಜು ಸಿಡಿಸಿ ಉಪಾಧ್ಯಕ್ಷ ಹನಸೋಗೆ ಕರಿಗೌಡ ತಿಳಿಸಿದರು.
ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಂದೆ, ತಾಯಿಗಳು ಮತ್ತು ಉಪನ್ಯಾಸಕರು ತಮ್ಮ ಮಕ್ಕಳ ಬಗ್ಗೆ ಅಪಾರ ನಂಬಿಕೆಯನ್ನು ಇಟ್ಟು ಕಾಲೇಜಿಗೆ ಕಳುಹಿಸುತ್ತಾರೆ. ಅವರು ಕೇಳಿದ್ದೆಲ್ಲ ಕಷ್ಟಪಟ್ಟು ತಂದು ಕೊಡಿಸುತ್ತಾರೆ. ನನ್ನ ಮಗ ನನಗಿಂತ ಹೆಚ್ಚು ಶಿಕ್ಷಣ ಪಡೆದು ಉನ್ನತ ಅಧಿಕಾರಿ ಆಗುತ್ತಾನೆ ಎಂಬ ಕನಸು ಕಟ್ಟಿಕೊಂಡು ನಿಮ್ಮ ಸಾಧನೆಗಾಗಿ ಕಾಯುತ್ತಿರುವ ಪಾಲಕರಿಗೆ ಮತ್ತು ಉಪನ್ಯಾಸಕರಿಗೆ ನೀವು ಉತ್ತಮ ಅಂಕ ಪಡೆವ ಮೂಲಕ ಉನ್ನತ ಕೀರ್ತಿ ಕೊಡುವ ಜವಾಬ್ದಾರಿ ನಿಮ್ಮದಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ನಿಜಗುನಹಳ್ಳಿ ಮಂಜುನಾಥ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಕಾಲೇಜು ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾಗಿರುತ್ತದೆ. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆದು ಉನ್ನತ ಅಧಿಕಾರಿಗಳಾಗಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
2025ನೇ ಸಾಲಿನ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ತೇರ್ಗಡೆಯಾದ 3 ವಿದ್ಯಾರ್ಥಿಗಳಿಗೆ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಾಂಶುಪಾಲ ವಿಶ್ವನಾಥ್, ಸಿಡಿಸಿ ಸದಸ್ಯ ಎಚ್.ಎಸ್.ಕೃಷ್ಣ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ವಿ. ಮಾದೇವಪ್ಪ, ನಿರ್ದೇಶಕರಾದ ತಿಮ್ಮೇಗೌಡ, ರಾಮೇಗೌಡ, ನವೀನ್, ಜಯಬಸವಣ್ಣ, ಪರಮೇಶ್, ಪಟೇಲ್ ಕುಮಾರ್, ಮನೋಹರ್, ಅಮ್ಜತ್, ಉಪನ್ಯಾಸಕರ ಸುರೇಶ್, ಬೋರೇಗೌಡ, ಮಹದೇವ್, ಶ್ರುತಿ, ಹರ್ಷಿತಾ, ಶಶಿಕುಮಾರ್, ಪಿಡಿಒ ಸರಳಾ ಸೇರಿದಂತೆ ಸಿಡಿಸಿ ಸದಸ್ಯರು ಮತ್ತು ಪಾಲಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net