ಸಂಸ್ಥೆಯ ಸಂಸ್ಥಾಪಕ ಸಿದ್ದರಾಮಯ್ಯ ಮಾತನಾಡಿ, ವಿದ್ಯೆ ಎಂಬುದು ಅದ್ಭುತ ಚಿನ್ನದ ಗಣಿ ಇದ್ದಂತೆ, ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ದೇಶದ ಆಸ್ತಿಯಾಗಿಸಿ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಪಾಲಕರು ಮತ್ತು ಮಕ್ಕಳ ಕನಸನ್ನು ನನಸಾಗಿಸಲು ಶ್ರಮಿಸುತ್ತಿದೆ. ಇಲ್ಲಿ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿರುವುದು ಹೆಮ್ಮೆ ಎಂದು ಹೇಳಿ, ಕ್ಷೇತ್ರದ ಶಾಸಕ ಜಿ.ಡಿ.ಹರೀಶ್‌ಗೌಡ ಒಬ್ಬ ಕ್ರಿಯಾಶೀಲ, ಭವಿಷ್ಯದ ನಾಯಕರೆಂದು ಬಣ್ಣಿಸಿದರು.