ಶ್ರಮಿಕ ವರ್ಗಕ್ಕೆ ಕಾರ್ಮಿಕ ಕಾಯ್ದೆಗಳು ಮಾರಕ

ತಿ.ನರಸೀಪುರ ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿರುವ ಅಂಬೇಡ್ಕರ್ ಪುತ್ಥಳಿ ಬಳಿ ಕಾರ್ಮಿಕ ವಿರೋಧಿ ಕಾಯ್ದೆಯ ಪ್ರತಿಯನ್ನು ಸುಡುವ ಮೂಲಕ ಸಿಐಟಿಯು ಪ್ರತಿಭಟನೆ ನಡೆಸಿತು. ಆಲಗೂಡು ಸಿ.ಪುಟ್ಟಮಲ್ಲಯ್ಯ, ಶಾಂತಮೂರ್ತಿ,  ಮಹದೇವಮ್ಮ, ನೀಲಸೋಗೆ ಸಿದ್ದರಾಜು ಇತರರು ಇದ್ದರು.
ತಿ.ನರಸೀಪುರ ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿರುವ ಅಂಬೇಡ್ಕರ್ ಪುತ್ಥಳಿ ಬಳಿ ಕಾರ್ಮಿಕ ವಿರೋಧಿ ಕಾಯ್ದೆಯ ಪ್ರತಿಯನ್ನು ಸುಡುವ ಮೂಲಕ ಸಿಐಟಿಯು ಪ್ರತಿಭಟನೆ ನಡೆಸಿತು. ಆಲಗೂಡು ಸಿ.ಪುಟ್ಟಮಲ್ಲಯ್ಯ, ಶಾಂತಮೂರ್ತಿ, ಮಹದೇವಮ್ಮ, ನೀಲಸೋಗೆ ಸಿದ್ದರಾಜು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಐಟಿಯು ಸಂಘಟನೆ ತಾಲೂಕು ಅಧ್ಯಕ್ಷ ಆಲಗೂಡು ಸಿ.ಪುಟ್ಟಮಲ್ಲಯ್ಯ ಕಿಡಿ
  • ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ
ತಿ.ನರಸೀಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ 4 ಕಾರ್ಮಿಕ ವಿರೋಧಿ ಕಾಯ್ದೆಗಳು ಶ್ರಮಿಕ ವರ್ಗಕ್ಕೆ ಅತ್ಯಂತ ಮಾರಕವಾಗಿದೆ. ಹಾಗಾಗಿ, ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸಬೇಕು ಎಂದು ಸಿಐಟಿಯು ಸಂಘಟನೆ ತಾಲೂಕು ಅಧ್ಯಕ್ಷ ಆಲಗೂಡು ಸಿ.ಪುಟ್ಟಮಲ್ಲಯ್ಯ ಒತ್ತಾಯಿಸಿದರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿರುವ ಅಂಬೇಡ್ಕರ್ ಪುತ್ಥಳಿ ಬಳಿ ಇತ್ತೀಚೆಗೆ ಕಾರ್ಮಿಕ ವಿರೋಧಿ ಕಾಯ್ದೆಯ ಪ್ರತಿಯನ್ನು ಸುಡುವ ಮೂಲಕ ಪ್ರತಿಭಟನೆ ನಡೆಸಿ ಮಾತನಾಡಿದರು.
ದೇಶದ ಹಲವು ಸಂಘಟನೆಗಳ ವಿರೋಧವನ್ನು ಲೆಕ್ಕಿಸದೆ ಕೇಂದ್ರ ಸರ್ಕಾರ ಹೊಸದಾಗಿ ಕಾರ್ಮಿಕ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿದೆ. ಇದರಿಂದ ಕಾರ್ಮಿಕರ ಆಸ್ತಿತ್ವಕ್ಕೆ ಧಕ್ಕೆ ಆಗಲಿದೆ. ಈ ಸಂಹಿತೆಗಳಲ್ಲಿ ಕಾರ್ಮಿಕರ ವೇತನ, ಕೆಲಸದ ಅವಧಿ, ಕಾರ್ಮಿಕರ ಶ್ರೇಯೋಭಿವೃದ್ಧಿ ಸೇರಿದಂತೆ ಕಾರ್ಮಿಕರ ಹಿತರಕ್ಷಣೆ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಹಾಗಾಗಿ ಸಂಹಿತೆಗಳನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ರೈತ ಸಂಘದ ಸಂಘಟನಾ ಕಾರ್ಯದರ್ಶಿ ಶಾಂತಮೂರ್ತಿ ಮಾತನಾಡಿ, ದೇಶಾದ್ಯಂತ ಹೊಸ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸುವಂತೆ ಪ್ರತಿಭಟನೆ ಮಾಡುತ್ತಿದ್ದು, ಕಾರ್ಮಿಕ ವಿರೋಧಿ ಸಂಹಿತೆ ರದ್ದು ಪಡಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಮಹದೇವಮ್ಮ, ನೀಲಸೋಗೆ ಸಿದ್ದರಾಜು, ಆಲಗೂಡು ಮುತ್ತುತಾಜ್, ನಾಗಮ್ಮ, ಗಾಯತ್ರಮ್ಮ, ಬಸವರಾಜು, ಪುಟ್ಟಸ್ವಾಮಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net