ಬೆಂಗ್ಳೂರಲ್ಲಿ ಸರ್ವರಿಗೂ ನೆಲೆ ಕಲ್ಪಿಸಿದ ಕೆಂಪೇಗೌಡರು

ತಿ.ನರಸೀಪುರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಜೆ.ಸುನೀತಾ ವೀರಪ್ಪಗೌಡ, ವೈ.ಎನ್.ಶಂಕರೇಗೌಡ, ಆರ್.ಚೆಲುವರಾಜು, ಟಿ.ಜಿ.ಸುರೇಶಾಚಾರ್, ಎಂ.ಬಿ.ಮಂಜೇಗೌಡ, ಆರ್.ಇಂದ್ರೇಶ್ ಇದ್ದರು.
ತಿ.ನರಸೀಪುರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಜೆ.ಸುನೀತಾ ವೀರಪ್ಪಗೌಡ, ವೈ.ಎನ್.ಶಂಕರೇಗೌಡ, ಆರ್.ಚೆಲುವರಾಜು, ಟಿ.ಜಿ.ಸುರೇಶಾಚಾರ್, ಎಂ.ಬಿ.ಮಂಜೇಗೌಡ, ಆರ್.ಇಂದ್ರೇಶ್ ಇದ್ದರು.
Published on
ತಿ.ನರಸೀಪುರ: ಪರೋಪಕಾರಿ ಜೀವನ ನಡೆಸಿ ಪ್ರತಿಯೊಬ್ಬರಿಗೂ ಸಮಾನತೆಯಿಂದ ಬದುಕಲು ನೆಲೆ ಕಲ್ಪಿಸಿದ ನಾಡಪ್ರಭು ಕೆಂಪೇಗೌಡ ಅವರು ಮಹಾನ್ ಮಾನವತಾವಾದಿ ಎಂದು ಬಿ.ಎಂ.ಶ್ರೀ ಪ್ರತಿಷ್ಠಾನದ ಕಾರ್ಯದರ್ಶಿ ಶಾಂತರಾಜು ಬಣ್ಣಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಒಕ್ಕಲಿಗರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ಮಹನೀಯರನ್ನು ಜನರು ಒಂದೊಂದು ಕುಲಕ್ಕೆ, ಆಯಾಯ ಸಮುದಾಯಗಳಿಗೆ ಸೀಮಿತಗೊಳಿಸಿ ಅವರ ವ್ಯಕ್ತಿತ್ವವನ್ನು ಸಂಕುಚಿತಗೊಳಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ನಗರದಲ್ಲಿ ಸಕಲ ಜನಾಂಗವನ್ನು ಮಿಳಿತಗೊಳಿಸುವುದೇ ಕೆಂಪೇಗೌಡರ ಕನಸಾಗಿತ್ತು. ಬೆಂಗಳೂರು ನಿರ್ಮಾಣ ಮಾಡಿ ಸಾಮಾಜಿಕ ಸ್ಥಿರತೆ, ಆರ್ಥಿಕ ದಿಗ್ಧರ್ಶನ, ನೀರಾವರಿಗಾಗಿ ಕೆರೆ ಕಟ್ಟೆಗಳ ನಿರ್ಮಾಣ, ನಗರೀಕರಣ, ಜನಜೀವನ, ವ್ಯಾಪಾರ ಮತ್ತು ಜನರ ಜೀವನ ನಿರ್ವಹಣೆಗಾಗಿ ಪೇಟೆಗಳ ನಿರ್ಮಾಣ ಸೇರಿದಂತೆ ಹಲವು ಜನೋಪಯೋಗಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ ಮಾತನಾಡಿ, ಶತಮಾನಗಳು ಕಳೆದರೂ ನಾವು ಹಲವು ಸಾಧಕರನ್ನು ಸ್ಮರಿಸಿಕೊಳ್ಳುತ್ತೇವೆ. ಅವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುವ ಸುಕ್ಷಣ. ಅಲ್ಲದೆ, ಅವರಿಗೆ ನಾವು ಸಲ್ಲಿಸುವ ಗೌರವವೂ ಹೌದು. ಹಾಗಾಗಿ ಸಾಧಕರ ತತ್ತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮೈಮುಲ್ ಮಾಜಿ ಅಧ್ಯಕ್ಷ ಆರ್.ಚೆಲುವರಾಜು ಮಾತನಾಡಿ, ಸಾಧಕರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೆಂಪೇಗೌಡರು ಎಂದಾಕ್ಷಣ ನಮಗೆ ಬೆಂಗಳೂರು ನೆನಪಿಗೆ ಬರುತ್ತದೆ. ಕೆಂಪೇಗೌಡರು ಬೆಂಗಳೂರನ್ನು ಸರ್ವ ಜನಾಂಗದ ಶಾಂತಿ ತೋಟವಾಗಿ ಪರಿವರ್ತಿಸಿದರು ಎಂದರು.
ನಿವೃತ್ತ ವೈದ್ಯ ಡಾ.ರಂಗಸ್ವಾಮಿ, ನಿವೃತ್ತ ಶಿಕ್ಷಕಿ ಭಟ್ಟಮ್ಮ, ಯೋಧ ರಂಗನಾಥ್ ಹಾಗೂ ಶಿಕ್ಷಕಿ ಟಿ.ಎನ್.ಮೈಥೀಲಿ ಅವರನ್ನು ಸನ್ಮಾನಿಸಲಾಯಿತು. ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದಿಂದ ಕೆಂಪೇಗೌಡರ ಪ್ರತಿಮೆಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಹಿರಿಯ ಸಹಕಾರಿ ವೈ.ಎನ್.ಶಂಕರೇಗೌಡ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ, ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್, ತಾ.ಪಂ. ಇಒ ಡಾ.ಕೆ.ರಂಗಸ್ವಾಮಿ, ಬನ್ನೂರು ಮುಖ್ಯಾಧಿಕಾರಿ ಕೆ.ಸತೀಶ್, ತಲಕಾಡು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಯಶೀಲಾ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೈ.ಎನ್.ರಾಮಸ್ವಾಮಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಬಿ.ಮಂಜೇಗೌಡ, ಜಿಲ್ಲಾ ಉಪಾಧ್ಯಕ್ಷ ಮಹೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಕಗ್ಗಲಿಪುರ ಎಂ.ರಾಜು, ಆರ್.ಇಂದ್ರೇಶ್, ಯುವ ಮುಖಂಡ ಎನ್.ಎಂ. ರಾಮಚಂದ್ರ, ಮುಖಂಡರಾದ ಸ್ವಾಮಿನಾಥ್ ಗೌಡ, ಡಾ.ಟಿ.ಎಸ್.ಮಲ್ಲಿಕಾರ್ಜುನಸ್ವಾಮಿ, ವಿನೂತನ್, ಸಿ.ಎಂ.ಪ್ರಕಾಶ್, ಕೆ.ಎನ್.ಪ್ರಭುಸ್ವಾಮಿ, ಕಿರಗಸೂರು ಶಂಕರ್, ಆಲಗೂಡು ಪುಟ್ಟಯ್ಯ, ರಂಗನಾಥ್ ತಲಕಾಡು, ಸೋಸಲೆ ರಾಜಶೇಖರ್, ಹುಣಸೂರು ಪುಟ್ಟಯ್ಯ, ಅತ್ತಳ್ಳಿ ಸತೀಶ್, ಮಣಿಕಂಠ ರಾಜ್‌ಗೌಡ, ತಲಕಾಡು ರಾಜೇಶ್, ನರೇಂದ್ರ, ವಿವಿಧ ಇಲಾಖೆ ಅಧಿಕಾರಿಗಳಾದ ಶಾಂತಾ, ಕೆ.ವಿ.ವೀರೇಶ್, ಎನ್.ಕೆ.ಕೆಂಪರಾಜು, ನಾಗೇಶ್ ಗಂಗವಾಡಿ, ಡಾ.ಮಲ್ಲಿಕಾರ್ಜುನ ಸ್ವಾಮಿ, ವಿನೂತನ್, ಕಂದಾಯ ನಿರೀಕ್ಷಕ ಮಹೇಂದ್ರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net