ಭಾಷೆ ಅಧ್ಯಯನಕ್ಕೆ ಪ್ರಯೋಗಾಲಯಗಳು ಸಹಕಾರಿ

ಸರಗೂರು ತಾಲೂಕು ಹಳಿಯೂರು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಭಾಷಾ ಪ್ರಯೋಗಾಲಯ ಉದ್ಘಾಟನಾ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಅವರನ್ನು ಸನ್ಮಾನಿಸಲಾಯಿತು.
ಸರಗೂರು ತಾಲೂಕು ಹಳಿಯೂರು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಭಾಷಾ ಪ್ರಯೋಗಾಲಯ ಉದ್ಘಾಟನಾ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಅವರನ್ನು ಸನ್ಮಾನಿಸಲಾಯಿತು.
Published on
ಸರಗೂರು: ವಿದ್ಯಾರ್ಥಿಗಳು ಕನ್ನಡ ಭಾಷೆಯ ಮೇಲೆ ಪ್ರಭುತ್ವ ಸಾಧಿಸಲು, ಉತ್ತಮ ಅಧ್ಯಯನಕ್ಕೆ ಕನ್ನಡ ಭಾಷಾ ಪ್ರಯೋಗಾಲಯಗಳು ಸಹಕಾರಿ ಎಂದು ಸರಗೂರು ಮತ್ತು ಎಚ್.ಡಿ ಕೋಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಅಭಿಪ್ರಾಯಪಟ್ಟರು.
ತಾಲೂಕಿನ ಹಳೆಯೂರಿನ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಲ್ಲಿ ಶುಕ್ರವಾರ ಕನ್ನಡ ಭಾಷಾ ಪ್ರಯೋಗಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನಾದ್ಯಂತ ಕನ್ನಡ ಭಾಷಾ ಪ್ರಯೋಗಾಲಯಗಳ ನಿರ್ಮಾಣ, ನಿರ್ವಹಣೆಗೆ ಒತ್ತು ನೀಡಿದ್ದು, ಎಸ್‌ಎಸ್‌ಎಲ್‌ಸಿ ವೇಳೆಗೆ ವಿದ್ಯಾರ್ಥಿಗಳು ಉತ್ತಮ ಭಾಷಾ ಸಂವಹನ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಶಾಲೆಯ ಭಾಷಾ ಪ್ರಯೋಗಾಲಯ ಸಾಹಿತ್ಯ-ವ್ಯಾಕರಣದ ಎಲ್ಲ ಅಂಶಗಳನ್ನು ಒಳಗೊಂಡಿದ್ದು ಶಿಕ್ಷಕರ ಪರಿಶ್ರಮ ಶ್ಲಾಘನೀಯ ಎಂದರು.
ಶಾಲೆಯ ಕನ್ನಡ ಶಿಕ್ಷಕ ರಂಗನಾಥ್ ಮಾತನಾಡಿ, ಶಾಲೆಗಳಲ್ಲಿ ಭಾಷಾ ಪ್ರಯೋಗಾಲಯ ಸ್ಥಾಪನೆಯಾದರೆ ಸಾಲದು. ವಿದ್ಯಾರ್ಥಿಗಳು ಪಠ್ಯ ಪೂರಕವಾಗಿ ಭಾಷಾ ಪ್ರಯೋಗಾಲಯದಲ್ಲಿನ ವಿಷಯಗಳ ಕಲಿಕೆಗೆ ಒತ್ತು ನೀಡಬೇಕು ಎಂದು ಹೇಳಿದರು.
ಮೈರಾಡ-ಮೈಕ್ಯಾಪ್ಸ್ ಸಂಸ್ಥೆಯ ಅಧಿಕಾರಿ ರವೀಶ್ ಅವರನ್ನು ಸನ್ಮಾನಿಸಲಾಯಿತು. ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕ ಅನಿಲ್ ಕುಮಾರ್, ಸಿಆರ್‌ಪಿ ಮಂಜುನಾಥ್, ಎಸ್‌ಡಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ, ಉಪಾಧ್ಯಕ್ಷ ಸ್ವಾಮೇಗೌಡ, ಮುಖಂಡರಾದ ಕೃಷ್ಣಯ್ಯ, ವೆಂಕಟಯ್ಯ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಿನ್ನಯ್ಯಮ ದಾನಿಗಳಾದ ಕೆಂಡಗಣ್ಣ ಸ್ವಾಮಿ, ಎಸ್‌ಡಿಎಂಸಿ ಸದಸ್ಯ ಮೂರ್ತಿ, ಚಿನ್ನಣ್ಣ, ಪ್ರಕಾಶ್, ಮಹದೇವಸ್ವಾಮಿ, ಮಲ್ಲು, ರಾಜಣ್ಣ, ಶಿಕ್ಷಕರಾದ ರವಿಕುಮಾರ್, ಸಹನಾ, ಹೇಮಾವತಿ, ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net