ಜು.3ಕ್ಕೆ ಬೆಂಗಳೂರಲ್ಲಿ ಜನಾಗ್ರಹ ಸಮಾವೇಶ

ಸರಗೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜನಾಗ್ರಹ ಸಮಾವೇಶದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸರಗೂರು ಶಿವಣ್ಣ, ಕೂಡಗಿ ಗೋವಿಂದರಾಜು, ಚಂದ್ರ, ಕುರ್ಣೇಗಾಲ ಕೃಷ್ಣ, ಚಂಗೌಡನಹುಂಡಿ ಶಿವರಾಜು, ಕೂಲ್ಯ ಮಹದೇವಸ್ವಾಮಿ ಇತರರಿದ್ದರು.
ಸರಗೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜನಾಗ್ರಹ ಸಮಾವೇಶದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸರಗೂರು ಶಿವಣ್ಣ, ಕೂಡಗಿ ಗೋವಿಂದರಾಜು, ಚಂದ್ರ, ಕುರ್ಣೇಗಾಲ ಕೃಷ್ಣ, ಚಂಗೌಡನಹುಂಡಿ ಶಿವರಾಜು, ಕೂಲ್ಯ ಮಹದೇವಸ್ವಾಮಿ ಇತರರಿದ್ದರು.
Published on
ಸರಗೂರು: ಬೆಂಗಳೂರಿನ ಸ್ವಾತಂತ್ರೃ ಉದ್ಯಾನದಲ್ಲಿ ಜುಲೈ 3ರಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಹಮ್ಮಿಕೊಂಡಿರುವ ಜನಾಗ್ರಹ ಸಮಾವೇಶದ ಪೋಸ್ಟರ್ ಅನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆದಿಕರ್ನಾಟಕ ಮಹಾಸಭಾ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ಬಿಡುಗಡೆ ಮಾಡಿದರು.
ಆದಿ ಕರ್ನಾಟಕ ಮಹಾಸಭಾ ಮಾಜಿ ಅಧ್ಯಕ್ಷ ಸರಗೂರು ಶಿವಣ್ಣ ಮಾತನಾಡಿ, ದಲಿತ ಸಮುದಾಯಕ್ಕೆ ಸಿಗಬೇಕಾಗಿರುವ ಭೂಮಿ, ವಸತಿ ಸೌಲಭ್ಯ, ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಮಿತಿ ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು ಮಾತನಾಡಿ, ಉದ್ಯೋಗ ನೇಮಕಾತಿ ಹಾಗೂ ವಿಶೇಷ ಘಟಕ ಯೋಜನೆ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಸಮಾವೇಶದ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು. ಆದ್ದರಿಂದ ತಾಲೂಕಿನ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದರು.
ಸಂಚಾಲಕರಾದ ಚಂದ್ರ, ಕುರ್ಣೇಗಾಲ ಕೃಷ್ಣ, ಚಂಗೌಡನಹುಂಡಿ ಶಿವರಾಜು, ಕೂಲ್ಯ ಮಹದೇವಸ್ವಾಮಿ, ಮುಖಂಡರಾದ ಜಿ. ಗೋಪಾಲ ಸ್ವಾಮಿ, ಚನ್ನೀಪುರ ಮಲ್ಲೇಶ್, ಎಸ್.ಡಿ.ಸಣ್ಣಸ್ವಾಮಿ, ಮುಳ್ಳೂರು ಮಂಜು, ಹುನಗಹಳ್ಳಿ ಗೋವಿಂದ, ಅಣ್ಣಯ್ಯ ಸ್ವಾಮಿ, ರಾಜೇಶ್, ರವಿಕುಮಾರ್, ಪುಟ್ಟು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net