ಸೈಬರ್ ಕ್ರೈಮ್‌ಗೆ ಕಡಿವಾಣ ಹಾಕದಿದ್ದರೆ ಸಂಕಷ್ಟ

ನಂಜನಗೂಡು ತಾಲೂಕಿನ ತಾಂಡವಪುರ ಹೊರವಲಯದಲ್ಲಿರುವ ಎಂಐಟಿ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಸೈಬರ್ ಸೆಕ್ಯೂರಿಟಿ ಕಾರ್ಯಾಗಾರದಲ್ಲಿ ಸೈಬಿ ಗ್ಲೋಬ್ ಕಂಪನಿಯ ಜತೆಗಿನ ಒಡಂಬಡಿಕೆ ಪತ್ರವನ್ನು ಪ್ರದರ್ಶಿಸಲಾಯಿತು. ಡಾ. ವೈ.ಟಿ.ಕೃಷ್ಣೇಗೌಡ, ಸತ್ಯಾವತಿ ದೇವಧಾರಿ, ಕೆ.ಎಸ್.ಸುಧೀರ್, ಡಾ. ಎಚ್.ಟಿ.ಚೇತನ್ ಇತರರು ಇದ್ದರು.
ನಂಜನಗೂಡು ತಾಲೂಕಿನ ತಾಂಡವಪುರ ಹೊರವಲಯದಲ್ಲಿರುವ ಎಂಐಟಿ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಸೈಬರ್ ಸೆಕ್ಯೂರಿಟಿ ಕಾರ್ಯಾಗಾರದಲ್ಲಿ ಸೈಬಿ ಗ್ಲೋಬ್ ಕಂಪನಿಯ ಜತೆಗಿನ ಒಡಂಬಡಿಕೆ ಪತ್ರವನ್ನು ಪ್ರದರ್ಶಿಸಲಾಯಿತು. ಡಾ. ವೈ.ಟಿ.ಕೃಷ್ಣೇಗೌಡ, ಸತ್ಯಾವತಿ ದೇವಧಾರಿ, ಕೆ.ಎಸ್.ಸುಧೀರ್, ಡಾ. ಎಚ್.ಟಿ.ಚೇತನ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಂಐಟಿ ಕಾಲೇಜು ಪ್ರಾಂಶುಪಾಲ ಕೃಷ್ಣೇಗೌಡ ಅಭಿಮತ
  • ಮೂರು ದಿನಗಳ ಕಾರ್ಯಾಗಾರಕ್ಕೆ ಚಾಲನೆ
ನಂಜನಗೂಡು: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸೈಬರ್ ಕ್ರೈಂ ಹೆಚ್ಚಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ನಮ್ಮ ಮುಂದಿನ ಪೀಳಿಗೆ ಬಹಳ ಸಂಕಷ್ಟದಲ್ಲಿ ಸಿಲುಕುತ್ತದೆ ಎಂದು ಎಂಐಟಿ ಕಾಲೇಜು ಪ್ರಾಂಶುಪಾಲ ವೈ.ಟಿ.ಕೃಷ್ಣೇಗೌಡ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ತಾಂಡವಪುರ ಹೊರವಲಯದಲ್ಲಿರುವ ಎಂಐಟಿ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಸೈಬಿ ಗ್ಲೋಬ್ ಕಂಪನಿಯ ಜಂಟಿ ಸಹಯೋಗದೊಂದಿಗೆ ಆಯೋಜಿಸಿದ್ದ ಮೂರು ದಿನಗಳ ಸೈಬರ್ ಸೆಕ್ಯೂರಿಟಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮಾಂತರ ಪ್ರದೇಶಗಳಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಮೊಬೈಲ್ ಬಳಸುವ ಪರಿ, ಮೊಬೈಲ್‌ನಲ್ಲಿ ಡೇಟಾಗಳು ಸೋರಿಕೆಯಾಗದಂತೆ ಕಾಪಾಡಿಕೊಳ್ಳುವ ವಿಷಯದ ಬಗ್ಗೆ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಕೆಲವು ದಿನಗಳ ಹಿಂದೆ ಸೈಬರ್ ಬ್ಲ್ಯಾಕ್‌ಮೇಲ್‌ನಿಂದ ಒಂದು ಕುಟುಂಬವೇ ಸಾವಿಗೆ ಶರಣಾಗಿತ್ತು. ಇಂತಹ ಹಲವು ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಹೀಗಾಗಿ ಮಹಿಳೆಯರು, ವಿದ್ಯಾರ್ಥಿನಿಯರು ಮೊಬೈಲ್ ಬಳಕೆ ಮಾಡುವಾಗ ಬಹಳ ಜಾಗರೂಕರಾಗಿರಬೇಕು ಎಂದರು.
ಸೈಬರ್ ಹೆಡ್ ಕೆ.ಎಸ್.ಸುಧೀರ್ ಮಾತನಾಡಿ, ಸೈಬರ್ ಹ್ಯಾಕ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿದೆ. ವಿದ್ಯಾರ್ಥಿನಿಯರ ಮೊಬೈಲ್‌ನಲ್ಲಿರುವ ದತ್ತಾಂಶ, ಫೋಟೋ, ವಿಡಿಯೋ ಹಾಗೂ ಅವರ ಖಾಸಗಿ ಮಾಹಿತಿಗಳನ್ನು ಪಡೆದು, ಅದರಿಂದ ಅವರನ್ನು ಬ್ಲ್ಯಾಕ್‌ಮೇಲ್ ಮಾಡುವ ಹಂತಕ್ಕೆ ಕಿಡಿಗೇಡಿಗಳು ತಲುಪಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರದ ಅಧೀನದಲ್ಲಿ ಸೈಬಿ ಗ್ಲೋಬಲ್ ಮತ್ತು ಎಂಐಟಿ ತಾಂತ್ರಿಕ ವಿಶ್ವವಿದ್ಯಾಲಯ ಮೂರು ದಿನಗಳ ಸೈಬರ್ ಕ್ರೈಂ ಬಗ್ಗೆ ಕಾರ್ಯಾಗಾರ ಹಮ್ಮಿಕೊಂಡಿದೆ. ಇದರಲ್ಲಿ ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು, ಜಿಲ್ಲೆಗಳ ಆಯ್ದು ಕಾಲೇಜುಗಳ 74 ಅಧ್ಯಾಪಕರಿಗೆ ತರಬೇತಿ ನೀಡಲಾಗುತ್ತಿದೆ.
ಕಾಲೇಜು ವಿದ್ಯಾರ್ಥಿನಿಯರು ಫೇಸ್ಬುಕ್, ಇನ್‌ಸ್ಟಾಗ್ರಾಮ್, ಟೆಲಿಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಖಾಸಗಿ ಫೋಟೋ, ವಿಡಿಯೋ ಹಂಚಿಕೊಳ್ಳುವ ಮೊದಲು ಅನುಸರಿಸಬೇಕಾದ ಸುರಕ್ಷಿತ ಕ್ರಮ ಮತ್ತು ಸೆಟ್ಟಿಂಗ್ಸ್‌ಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
ಕಾರ್ಯಾಗಾರದಲ್ಲಿ ಕಾಲೇಜಿನ ಜಂಟಿ ನಿರ್ದೇಶಕ ಡಾ. ಎಚ್.ಟಿ.ಚೇತನ್, ಸೈಬಿ ಗ್ಲೋಬಲ್ ಸಿಇಒ ಸತ್ಯಾವತಿ ದೇವಧಾರಿ, ಸಲಹೆಗಾರರಾದ ವಿ.ಎಸ್. ಬಾಬ್ಜಿ, ನಿರ್ದೇಶಕ ಮಂಜುನಾಥ್, ಪ್ರಾಧ್ಯಾಪಕರಾದ ರವಿಕುಮಾರ್, ಮಹಮ್ಮದ್ ಸಲಾಮತ್ ಹಾಗೂ ಕಾಲೇಜಿನ ಪ್ರಾಧ್ಯಾಪಕರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net