ಹಸಿರು ಕ್ರಾಂತಿಕಾರ ಬಾಬು ಜಗಜೀವನರಾಮ್

ಎಚ್.ಡಿ.ಕೋಟೆ ಪಟ್ಟಣದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ ಅವರ 40ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬಾಬೂಜಿ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು.  ಪಿ.ನಾಗರಾಜು.  ರವಿಚಂದ್ರ, ಎಂ.ಜಿ ರಮೇಶ್,  ಚಿಕ್ಕನಾಯಕ, ಪಿ.ಸುರೇಶ್, ಶಶಿಕಲಾ ಇತರರು ಇದ್ದರು.
ಎಚ್.ಡಿ.ಕೋಟೆ ಪಟ್ಟಣದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ ಅವರ 40ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬಾಬೂಜಿ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಪಿ.ನಾಗರಾಜು. ರವಿಚಂದ್ರ, ಎಂ.ಜಿ ರಮೇಶ್, ಚಿಕ್ಕನಾಯಕ, ಪಿ.ಸುರೇಶ್, ಶಶಿಕಲಾ ಇತರರು ಇದ್ದರು.
Published on
ಎಚ್.ಡಿ.ಕೋಟೆ: ಡಾ.ಬಾಬು ಜಗಜೀವನ ರಾಮ್ ಅವರು ಉಪ ಪ್ರಧಾನಿ ಸೇರಿದಂತೆ ವಿವಿಧ ಖಾತೆಗಳನ್ನು ನಿಭಾಯಿಸಿ ಮೌಲ್ಯಯುತವಾದ ರಾಜಕಾರಣ ಜತೆಗೆ ದೇಶದಲ್ಲಿ ಹಸಿರು ಕ್ರಾಂತಿಯನ್ನು ಮಾಡಿದರು ಎಂದು ತಾಲ್ಲೂಕು ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆ ಮಾಜಿ ಅಧ್ಯಕ್ಷ ಪಿ.ನಾಗರಾಜು ತಿಳಿಸಿದರು.
ಪಟ್ಟಣದ ಬಾಬು ಜಗಜೀವನರಾಮ್ ಸಮುದಾಯ ಭವನದಲ್ಲಿ ಸೋಮವಾರ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನ ರಾಮ್ ಅವರ 40ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತೀಯ ರಾಜಕೀಯ ಇತಿಹಾಸದಲ್ಲಿ ಸಂವಿಧಾನದ ಅಡಿಯಲ್ಲಿ ಆಡಳಿತ ನಡೆಸಿದ ಬಾಬೂಜಿ ಅವರು ಕೇಂದ್ರ
ಕೃಷಿ ಸಚಿವರಾಗಿ ದೇಶದಲ್ಲಿ ಆಹಾರ ಭದ್ರತೆ ಒದಗಿಸಿ ಸಾಕಷ್ಟು ಬದಲಾವಣೆ ತಂದರು ಎಂದರು.
ಬಾಬೂಜಿ ಆಡಳಿತದ ಅವಧಿಯಲ್ಲಿ ಅವರ ಯೋಜನೆಗಳು ದೇಶದಲ್ಲಿ ಸ್ವಾಭಿಮಾನಿ ಜೀವನ ನಡೆಸಲು ಸಹಕಾರಿ ಆಗಿದೆ. ರಕ್ಷಣಾ ಸಚಿವರಾಗಿ ಉತ್ತಮ ಆಡಳಿತ ನಡೆಸಿ ಸಂವಿಧಾನದ ಪುಟಗಳಲ್ಲಿ ಅವರ ಸಾಧನೆಗಳು ದಾಖಲಾಗುವಂತೆ ಮಾಡಿದ್ದಾರೆ ಎಂದರು.
ದೇಶಕ್ಕೆ ಬರ ಬಂದ ಸಂದರ್ಭದಲ್ಲಿ ಹಸಿವು ನೀಗಿಸಲು ಬೇರೆ ದೇಶದ ತಳಿಯನ್ನು ನಮ್ಮ ದೇಶಕ್ಕೆ ತಂದು ಆಹಾರ ಸಮಸ್ಯೆಯನ್ನು ನೀಗಿಸಿದರು ಎಂದರು.
ಕಾರ್ಯಕ್ರಮದಲ್ಲಿ ತಾಪಂ ಇಒ ರವಿಚಂದ್ರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಜಿ ರಮೇಶ್, ಚಿಕ್ಕನಾಯಕ, ಪುರಸಭಾ ಮುಖ್ಯಾಧಿಕಾರಿ ಪಿ.ಸುರೇಶ್, ಬಿಸಿಎಂ ಇಲಾಖೆ ಅಧಿಕಾರಿ ಶಶಿಕಲಾ, ಕಾರ್ಮಿಕ ಇಲಾಖೆ ಅಧಿಕಾರಿ ಹರ್ಷಿತಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ್, ನಾಗರಾಜು, ಪರಿಶಿವಮೂರ್ತಿ, ಪಿ.ನಾಗರಾಜು, ಉಡ ನಾಗರಾಜು, ಶಿವಯ್ಯ, ರವೀಶ, ಚಲುವರಾಜು, ಕಾಳಪ್ಪಾಜಿ, ಪ್ರಸಾದ್, ಜೀವಿಕ ಬಸವರಾಜು, ವೆಂಕಟೇಶ್, ಮಹೇಶ್, ಕುಮಾರ್ ಹೈರಿಗೆ, ಚೆನ್ನಕೋಟೆ, ಸಿಂಗಯ್ಯ, ಚಿಕ್ಕಸ್ವಾಮಿ, ಮಹಾಲಿಂಗಯ್ಯ, ಆನಗಟ್ಟಿ ದೇವರಾಜು, ಪುಟ್ಟಮಾದು, ಪಟೇಲ್ ಸೋಮು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net