ಹಾಡಿಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ

ಎಚ್.ಡಿ.ಕೋಟೆ ತಾಲೂಕಿನ ಮಚ್ಚೂರು ಗ್ರಾಮದಲ್ಲಿ 3.5 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಅನಿಲ್ ಚಿಕ್ಕಮಾದು ಭೂಮಿಪೂಜೆ ನೆರವೇರಿಸಿದರು. ಹಸೀಲ್ದಾರ್ ಶ್ರೀನಿವಾಸ್, ಎಸಿಎಫ್ ಮಧು, ಮೈಮುಲ್ ನಿರ್ದೇಶಕ ಈರೇಗೌಡ, ಮುಖಂಡರಾದ ವಡ್ಡರಗುಡಿ ಚಿಕ್ಕಣ್ಣ, ಮಂಜುನಾಥ್, ಪರಶಿವಮೂರ್ತಿ, ಸೋಮೇಶ್, ಬಾಲಯ್ಯ, ಲೋಹಿತ್ ಇತರರು ಇದ್ದರು.
ಎಚ್.ಡಿ.ಕೋಟೆ ತಾಲೂಕಿನ ಮಚ್ಚೂರು ಗ್ರಾಮದಲ್ಲಿ 3.5 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಅನಿಲ್ ಚಿಕ್ಕಮಾದು ಭೂಮಿಪೂಜೆ ನೆರವೇರಿಸಿದರು. ಹಸೀಲ್ದಾರ್ ಶ್ರೀನಿವಾಸ್, ಎಸಿಎಫ್ ಮಧು, ಮೈಮುಲ್ ನಿರ್ದೇಶಕ ಈರೇಗೌಡ, ಮುಖಂಡರಾದ ವಡ್ಡರಗುಡಿ ಚಿಕ್ಕಣ್ಣ, ಮಂಜುನಾಥ್, ಪರಶಿವಮೂರ್ತಿ, ಸೋಮೇಶ್, ಬಾಲಯ್ಯ, ಲೋಹಿತ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅನಿಲ್ ಚಿಕ್ಕಮಾದು ಭರವಸೆ
  • ರಸ್ತೆ ಕಾಮಗಾರಿಗೆ ಭೂಮಿಪೂಜೆ
ಎಚ್.ಡಿ.ಕೋಟೆ: ಆದಿವಾಸಿಗಳು ವಾಸ ಮಾಡುತ್ತಿರುವ ಹಾಡಿಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲೂಕಿನ ನಾಗರಹೊಳೆ ಅಭಯಾರಣ್ಯದ ಬಳ್ಳೆ ಮತ್ತು ಗೋಳೂರು ಹಾಡಿಗಳಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಸಂಪರ್ಕ ರಸ್ತೆ ಕಾಮಗಾರಿ ಹಾಗೂ ಮಚ್ಚೂರು ಹಾಡಿಯಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಕಾಂಕ್ರೀಟ್ ರಸ್ತೆ ಕಾಮಗಾರಿಗಳಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕು ಜಿಲ್ಲೆಯಲ್ಲಿ ಹೆಚ್ಚು ಆದಿವಾಸಿ ಜನರನ್ನು ಹೊಂದಿರುವ ತಾಲೂಕಾಗಿದ್ದು, 129 ಹಾಡಿಗಳನ್ನು ಹೊಂದಿದೆ. ಇಲ್ಲಿ ವಾಸಿಸುವ ಆದಿವಾಸಿಗಳಿಗಾಗಿ ನಮ್ಮ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸಿಸಿಡಿ ಯೋಜನೆ ಅಡಿಯಲ್ಲಿ ಹಾಡಿಗಳ ಸಮಗ್ರ ಅಭಿವೃದ್ಧಿ ಮಾಡುತ್ತಿದೆ ಎಂದರು.
ತಾಲೂಕಿನ ಬಳ್ಳೆ ಸಂಪರ್ಕ ರಸ್ತೆ ಅಭಿವೃದ್ಧಿಗೆ 70 ಲಕ್ಷ ರೂ., ಮಚ್ಚೂರಿನಲ್ಲಿ ಕಾಂಕ್ರೀಟ್ ರಸ್ತೆಗೆ 3.5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳು ಆರಂಭವಾಗಲಿದ್ದು, ಗಿರಿಜನರ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಆದಿವಾಸಿಗಳ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಯಿತು. ಆರು ತಿಂಗಳು ನೀಡುತ್ತಿದ್ದ ಪೌಷ್ಟಿಕ ಆಹಾರವನ್ನು 12 ತಿಂಗಳಿಗೆ ವಿಸ್ತರಿಸಲಾಯಿತು. ಜತೆಗೆ ಸಾವಿರಾರು ಹಕ್ಕು ಪತ್ರಗಳನ್ನು ಆದಿವಾಸಿಗಳಿಗೆ ನಮ್ಮ ಸರ್ಕಾರದ ವತಿಯಿಂದ ವಿತರಿಸಲಾಯಿತು. ಒಟ್ಟಾರೆ ಗಿರಿಜನರನ್ನು ಮುಖ್ಯ ವಾಹಿನಿಗೆ ಕರೆತರಲು ನಮ್ಮ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿ ಅದರಂತೆ ನಡೆದುಕೊಳ್ಳುತ್ತಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಶ್ರೀನಿವಾಸ್, ಎಸಿಎಫ್ ಮಧು, ಮೈಮುಲ್ ನಿರ್ದೇಶಕ ಈರೇಗೌಡ, ಮುಖಂಡರಾದ ವಡ್ಡರಗುಡಿ ಚಿಕ್ಕಣ್ಣ, ಮಂಜುನಾಥ್, ಪರಶಿವಮೂರ್ತಿ, ಸೋಮೇಶ್, ಬಾಲಯ್ಯ, ಲೋಹಿತ್, ಕಲೀಂ, ಮಹದೇವೇಗೌಡ, ರವಿ, ಟಿಎಚ್‌ಒ ರವಿಕುಮಾರ್, ಸಿಡಿಪಿಒ ದೀಪಾ, ಉಪ ತಹಸೀಲ್ದಾರ್ ಸಂಜೀವಕುಮಾರ್, ಧರಣೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಸಾದ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಶಿಕಲಾ, ಕಾರ್ಮಿಕ ಇಲಾಖೆಯ ಪರಮೇಶ್, ಆರ್‌ಎಫ್‌ಒ ಸಿದ್ದರಾಜು, ನಾಗರಾಜು, ಚಲುವೇಗೌಡ, ಮಹೇಶ್, ಮಲ್ಲೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net