ಬಸವ ಜಯಂತ್ಯುತ್ಸವಕ್ಕೆ ಎಲ್ಲರೂ ಸಹಕರಿಸಿ

ಸರಗೂರು ತಾಲೂಕಿನ ಹಂಚೀಪುರ ಗುರುಮಲ್ಲೇಶ್ವರಪಟ್ಟದ ಮಠದ ಆವರಣದಲ್ಲಿ ಬುಧವಾರ ಕಾಯಕಯೋಗಿ ಬಸವಣ್ಣ ಜಯಂತ್ಯುತ್ಸವ ಕಾರ್ಯಕ್ರಮದ ಪ್ರಚಾರ ರಥಕ್ಕೆ ಚನ್ನಬಸವಸ್ವಾಮೀಜಿ  ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ತೋಂಟದಾರ್ಯ ಸ್ವಾಮೀಜಿ, ವೀರಭದ್ರಪ್ಪ, ಗಣಪತಿ, ಗುರುಸ್ವಾಮಿ, ನಂದೀಶ್ ಇತ್ತರರು ಇದ್ದರು.
ಸರಗೂರು ತಾಲೂಕಿನ ಹಂಚೀಪುರ ಗುರುಮಲ್ಲೇಶ್ವರಪಟ್ಟದ ಮಠದ ಆವರಣದಲ್ಲಿ ಬುಧವಾರ ಕಾಯಕಯೋಗಿ ಬಸವಣ್ಣ ಜಯಂತ್ಯುತ್ಸವ ಕಾರ್ಯಕ್ರಮದ ಪ್ರಚಾರ ರಥಕ್ಕೆ ಚನ್ನಬಸವಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ತೋಂಟದಾರ್ಯ ಸ್ವಾಮೀಜಿ, ವೀರಭದ್ರಪ್ಪ, ಗಣಪತಿ, ಗುರುಸ್ವಾಮಿ, ನಂದೀಶ್ ಇತ್ತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾಟವಾಳು ವೀರಭದ್ರಪ್ಪ ಮನವಿ
  • ಪ್ರಚಾರ ರಥಕ್ಕೆ ಚಾಲನೆ
ಸರಗೂರು: ತಾಲೂಕು ಮಟ್ಟದ ಬಸವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಎಲ್ಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಹಾಗೂ ಬಸವಣ್ಣನ ಅನುಯಾಯಿಗಳು ಭಾಗವಹಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಕಾಟವಾಳು ವೀರಭದ್ರಪ್ಪ ಮನವಿ ಮಾಡಿದರು.
ತಾಲೂಕಿನ ಹಂಚೀಪುರ ಗ್ರಾಮದ ಗುರುಮಲ್ಲೇಶ್ವರಪಟ್ಟದ ಮಠದ ಮುಂಭಾಗದಲ್ಲಿ ಬುಧವಾರ ಮೇ19 ರಂದು ನಡೆಯಲಿರುವ ಕಾಯಕಯೋಗಿ ಬಸವಣ್ಣ ಜಯಂತ್ಯುತ್ಸವ ಕಾರ್ಯಕ್ರಮದ ಪ್ರಚಾರ ರಥಕ್ಕೆ ಪೂಜೆ ಸಲ್ಲಿಸಿದ ಮಾತನಾಡಿದರು.
ಸರಗೂರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಬಸವ ಬಳಗ ಯುವ ಘಟಕ ಬಳಗಗಳ ಒಕ್ಕೂಟದ ವತಿಯಿಂದ ಮೇ 19ರಂದು ವಿಶ್ವಗುರು ಬಸವೇಶ್ವರ ಜಯಂತ್ಯುತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಇದಕ್ಕಾಗಿಒಂದು ವಾರದಿಂದ ತಾಲೂಕಿನಲ್ಲಿ ಪ್ರಚಾರ ನಡೆಸಲಾಗುತ್ತದೆ ಎಂದರು.
ಪ್ರಚಾರ ರಥಕ್ಕೆ ಚಾಲನೆ ನೀಡಿದ ಹಂಚೀಪುರ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, ಸಮಾಜದ ಏಳಿಗೆಗಾಗಿ ಬಸವಣ್ಣ ಶಕ್ತಿಮೀರಿ ದುಡಿದಿದ್ದಾರೆ. ಸಮ ಸಮಾಜದ ಕನಸು ಕಂಡರು. ಮೂಢನಂಬಿಕೆಗಳನ್ನು ತೊಲಗಿಸಲು ಹೋರಾಟ ನಡೆಸಿದರು. ಕಾಯಕದಿಂದಲೇ ಕೈಲಾಸ ಕಂಡವರು. ಸಮಾಜದಲ್ಲಿ ಲಿಂಗ ಅಸಮಾನತೆ, ಜಾತಿ-ಧರ್ಮದ ವಿರುದ್ಧ ಹೋರಾಡಿದ ಬಸವಣ್ಣ ಅವರು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಹಂಚೀಪುರ ಮಠದ ಕಿರಿಯ ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಬಸವಣ್ಣ ಅವರು ಮಾದಾರ ಚನ್ನಯ್ಯ ಆರಂಭಿಸಿದ ಭಕ್ತಿ ಆಂದೋಲನವನ್ನು ಮುಂದುವರಿಸಿದರು. ವಚನಗಳ ಮೂಲಕ ಸಮಾಜಕ್ಕೆ ಸಂದೇಶ ಸಾರಿದರು. ಆದರೆ, ಇತ್ತೀಚೆಗೆ ಬಸವಣ್ಣ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಿರುವುದು ನೋವಿನ ಸಂಗತಿಯಾಗಿದೆ. ಹೀಗಾಗಿ ಬಸವಣ್ಣ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಬಸವ ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ಅಧ್ಯಕ್ಷ ಪಿ.ನಂದೀಶ ಮಾತನಾಡಿ, ಮೇ 19ರಂದು ಸರಗೂರು ಪಟ್ಟಣದ ವೀರಶೈವ ಲಿಂಗಾಯತ ಸಮಾಜದ ನಿವೇಶನದಲ್ಲಿ ಬಸವ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದ್ದು, ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.
ಬಸವ ಬಳಗ ಅಧ್ಯಕ್ಷ ಹಂಚೀಪುರ ಗಣಪತಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಗುರುಸ್ವಾಮಿ ಮನುಗನಹಳ್ಳಿ, ಕಾರ್ಯದರ್ಶಿ ತೆಲುಗು ಮಸಹಳ್ಳಿ ಬಸವರಾಜು, ಮಹಾಸಭಾ ಉಪಾಧ್ಯಕ್ಷ ಡಿ.ಸಿ.ಸಿದ್ದಪ್ಪ, ಕೋಶಾಧ್ಯಕ್ಷ ಶಿವಪ್ರಕಾಶ್, ಮಹಾಸಭಾ ಟೌನ್ ಅಧ್ಯಕ್ಷ ಮೋಹನ್ ಕುಮಾರ್, ಯೂತ್ ಉಪಾಧ್ಯಕ್ಷ ಶಿವಕುಮಾರ್, ಕೆ.ಎಸ್.ರಾಜಪ್ಪ, ಪರಶಿವಮೂರ್ತಿ, ಬಸವಣ್ಣ, ಬಾಡಗ ಮಾದಪ್ಪ, ಸಿದ್ದಪ್ಪ, ಇಂದ್ರಪ್ಪ ಡಿ ಎಸ್, ಮಹದೇವಸ್ವಾಮಿ, ಗುರುಸ್ವಾಮಿ, ನಿಜಗುಣ, ಎಸ್.ಎನ್.ಮಹದೇವಪ್ಪ, ಶಿವಪ್ಪ, ವಿಕೇಶ್, ಗಿರೀಶ್, ಸುರೇಶ್, ಉಮೇಶ್,ಬೊಗಮಲ್ಲಪ್ಪ, ನಿಂಗರಾಜು, ಶಿವಕುಮಾರ್, ಡಿ ಸಿ ಮಹೇಶ್, ಬಸವಣ್ಣ, ರಾಜೇಂದ್ರ, ಪ್ರದೀಪ್, ಸೋಮಶೇಖರ್, ಹೇಮಚಂದ್ರ, ಕುಮಾರಸ್ವಾಮಿ, ಶಾಂತಮಲ್ಲಪ್ಪ ಸೇರಿದಂತೆ ಲಿಂಗಾಯತ ಸಮಾಜದ ಮುಖಂಡರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net