ಬಡವರು ನೆಲೆ ಕಟ್ಟಿಕೊಳ್ಳಲು ಶಿಕ್ಷಣವೇ ಪ್ರಮುಖ ಅಸ್ತ್ರ

 ಬೆಟ್ಟದಪುರದ ಎಸ್‌ಎಂಎಸ್  ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ ಶಾಲಾ ವಾರ್ಷಿಕೋತ್ಸವದಲ್ಲಿ ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಡಾ.ಕೆ.ಆರ್ ಗೌತಮ್, ಬಿ.ವಿ ಮಂಜುನಾಥ್, ಕಾರ್ಯದರ್ಶಿ ಎ.ವಿ ಛಾಯಾ, ಪ್ರಾಂಶುಪಾಲ ರಾಜು, ಮುಖ್ಯಶಿಕ್ಷಕರಾದ ಎಸ್.ಆರ್ ವೆಂಕಟೇಶ್, ಸಿ.ಆರ್ ಕುಮಾರ್
ಬೆಟ್ಟದಪುರದ ಎಸ್‌ಎಂಎಸ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ ಶಾಲಾ ವಾರ್ಷಿಕೋತ್ಸವದಲ್ಲಿ ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಡಾ.ಕೆ.ಆರ್ ಗೌತಮ್, ಬಿ.ವಿ ಮಂಜುನಾಥ್, ಕಾರ್ಯದರ್ಶಿ ಎ.ವಿ ಛಾಯಾ, ಪ್ರಾಂಶುಪಾಲ ರಾಜು, ಮುಖ್ಯಶಿಕ್ಷಕರಾದ ಎಸ್.ಆರ್ ವೆಂಕಟೇಶ್, ಸಿ.ಆರ್ ಕುಮಾರ್
Published on

ಪ್ರಮುಖ ಮುಖ್ಯಾಂಶಗಳು

  • ಕೀಲು ಮತ್ತು ಮೂಳೆ ತಜ್ಞ ಡಾ.ಕೆ.ಆರ್ ಗೌತಮ್ ಅಭಿಪ್ರಾಯ
  • ಎಸ್‌ಎಂಎಸ್ ಶಾಲೆಯಲ್ಲಿ ಸಾಂಸ್ಕೃತಿಕ ಕಲರವ
ಬೆಟ್ಟದಪುರ: ಆಧುನಿಕತೆ ಬೆಳೆದಂತೆ ಇತಿಹಾಸದ ಆದರ್ಶ ಪುರುಷರು, ಸಾಧಕರ ಯಶಸ್ಸಿನ ಹಾದಿಯನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೀಲು ಮತ್ತು ಮೂಳೆ ತಜ್ಞ ಡಾ.ಕೆ.ಆರ್ ಗೌತಮ್ ಸಲಹೆ ನೀಡಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಎಸ್‌ಎಂಎಸ್ ವಿದ್ಯಾಸಂಸ್ಥೆಯಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಪಠ್ಯ ಚಟುವಟಿಕೆಗಳ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿದಾಗ ಅವರಲ್ಲಿ ಏಕಾಗ್ರತೆ, ಅಭಿನಯ ಮತ್ತು ಲವಲವಿಕೆಯಿಂದ ಕೂಡಿ ಶೈಕ್ಷಣಿಕ ಪ್ರಗತಿಗೆ ಪೂರಕವಾಗಲಿದೆ. ಬಡ ವರ್ಗದವರಿಗೆ ಶಿಕ್ಷಣ ಮಾತ್ರ ನೆಲೆ ಕಟ್ಟಿಕೊಡುವ ಪ್ರಮುಖ ಅಸ್ತ್ರವಾಗಿದೆ. ಹಾಗಾಗಿ ಸಿಗುವ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಪಾಲಕರ ಆಸೆಯನ್ನು ಈಡೇರಿಸಬೇಕು ಎಂದರು.
ಪಿರಿಯಾಪಟ್ಟಣ ಲಕ್ಷ್ಮೀ ಹೆಲ್ತ್ ಕೇರ್ ಮುಖ್ಯಸ್ಥ ಡಾ.ಪ್ರಕಾಶ್ ಬಾಬು ಮಾತನಾಡಿ, ತಾಲೂಕಿನಲ್ಲಿ ಎಸ್‌ಎಂಎಸ್ ವಿದ್ಯಾಸಂಸ್ಥೆ ಉತ್ತಮ ಫಲಿತಾಂಶ ನೀಡುವ ಮೂಲಕ ಗ್ರಾಮೀಣ ಜನರಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ. ವಿದ್ಯಾರ್ಥಿಗಳು ಒಳ್ಳೆಯ ವಿಚಾರಗಳ ಜತೆ ಸಂಸ್ಕಾರ ಕಲಿತು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ, ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಡಿಜಿಟಲ್ ರೂಪದಲ್ಲಿ ವಿಜ್ಞಾನ ಪ್ರಯೋಗಶಾಲೆಯನ್ನು ಉದ್ಘಾಟಿಸಲಾಯಿತು. ಕಳೆದ ಬಾರಿಯ ದ್ವಿತೀಯ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಮತ್ತು ಶಾಲೆಯ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಸೇರಿದಂತೆ ವಿದ್ಯಾರ್ಥಿಗಳು ನೃತ್ಯಗಳ ಝಲಕ್ ಮೂಲಕ ಗಮನಸೆಳೆದರು. ವಿಶೇಷವಾಗಿ ಅಯ್ಯಪ್ಪ ಸ್ವಾಮಿಯ ಭಕ್ತಿಯ ನೃತ್ಯ ಎಲ್ಲರ ಮನಸೆಳೆಯಿತು.
ಸಂಸ್ಥೆಯ ಕಾರ್ಯಾಧ್ಯಕ್ಷ ಬಿ.ವಿ ಮಂಜುನಾಥ್, ಕಾರ್ಯದರ್ಶಿ ಎ.ವಿ ಛಾಯಾ, ಪ್ರಾಂಶುಪಾಲ ರಾಜು, ಮುಖ್ಯಶಿಕ್ಷಕರಾದ ಎಸ್.ಆರ್ ವೆಂಕಟೇಶ್, ಸಿ.ಆರ್ ಕುಮಾರ್ ಸೇರಿದಂತೆ ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net