ಮಿತ ಆಹಾರವೇ ದೀರ್ಘಾಯುಷ್ಯದ ಗುಟ್ಟು

 ಹುಣಸೂರು ನಗರದ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾಯಕ್ರಮದಲ್ಲಿ ನಗರಠಾಣೆ ಬರಹಗಾರ ಎಸ್.ಎ.ಮನೋಹರ್ ಅವರನ್ನು ಸನ್ಮಾನಿಸಲಾಯಿತು. ಬೆಹನ್ ನಾಗಶ್ರೀ, ವಿ.ಎನ್.ದಾಸ್, ಡಾ.ಅನಂತಶಯನ, ಎಸ್.ಎನ್.ಮೂರ್ತಿ, ಕೃಷ್ಣ ಇದ್ದರು.
ಹುಣಸೂರು ನಗರದ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾಯಕ್ರಮದಲ್ಲಿ ನಗರಠಾಣೆ ಬರಹಗಾರ ಎಸ್.ಎ.ಮನೋಹರ್ ಅವರನ್ನು ಸನ್ಮಾನಿಸಲಾಯಿತು. ಬೆಹನ್ ನಾಗಶ್ರೀ, ವಿ.ಎನ್.ದಾಸ್, ಡಾ.ಅನಂತಶಯನ, ಎಸ್.ಎನ್.ಮೂರ್ತಿ, ಕೃಷ್ಣ ಇದ್ದರು.
Published on
ಹುಣಸೂರು: ಮಿತ ಆಹಾರ ಸೇವೆನೆಯಿಂದ ದೀರ್ಘಾಯುಷ್ಯ ಮತ್ತು ನಿರೋಗಿಗಳಾಗಿ ಬದುಕಬಹುದು ಎಂದು ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅನಂತಶಯನ ಅಭಿಪ್ರಾಯಪಟ್ಟರು.
ನಗರದ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ಅಯೋಜಿಸಿದ್ದ ಮಾತೇಶ್ವರಿ ಜಗದಂಬ ಸರಸ್ವತಿ ಅವರ 90ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿತ-ಮಿತ ಆಹಾರದಿಂದಲೂ ಮನಸಿಗೆ ಶಾಂತಿ, ಸಮಾಧಾನ ಸಿಗುತ್ತದೆ. ಧ್ಯಾನ ಮನಸ್ಸಿನ ಕ್ಲೇಶಗಳನ್ನು ದೂರ ಮಾಡಿದರೆ, ಆಹಾರ ದೇಹದ ಕ್ಲೇಶಗಳನ್ನು ದೂರಗೊಳಿಸುತ್ತದೆ. ಆಹಾರದಲ್ಲಿ ಆಯ್ಕೆ ಇರಲಿ. ವ್ಯಾಯಾಮ, ಸೂರ್ಯೋದಯಕ್ಕಿಂತ ಮುಂಚೆ ಏಳುವ ಅಭ್ಯಾಸಗಳು ನಮ್ಮ ಆರೋಗ್ಯವನ್ನು ವೃದ್ಧಿಸಬಲ್ಲವು. ಅವಸರದ ಜೀವನ ಔಷಧಗಳನ್ನು ಆಹಾರದಂತೆ ಸೇವಿಸುವ ಮಟ್ಟಕ್ಕೆ ಹೋಗುತ್ತಿದೆ. ಆಹಾರವೇ ಔಷಧವಾದಲ್ಲಿ ಮಾತ್ರೆಗಳ ಅವಶ್ಯಕತೆಯೇ ಇರುವುದಿಲ್ಲ ಎಂದರು.
ವಿಶ್ವವಿದ್ಯಾಲಯದ ಮುಖ್ಯ ಸಚೇತಕ ಎಸ್.ಎನ್.ಮೂರ್ತಿಜೀ ಮಾತನಾಡಿ, ಅಶಾಂತಿ ತವರೂರಾಗಿ ವಿಶ್ವ ಕಾಣಿಸುತ್ತಿದೆ. ಆಶಾಂತಿ ದೂರಾಗಲು ಧ್ಯಾನದ ಮೊರೆ ಹೋಗುವುದು ಅನಿವಾರ್. ಅಹಿಂಸೆ ಪಾಲನೆ, ಮೋಸ ಮಾಡದಿರುವ ಮೂಲಕ ನಮ್ಮಮಟ್ಟಿಗೆ ನಾವು ಸಮಾಧಾನ ಚಿತ್ತದಿಂದ ಇರಲು ಸಾಧ್ಯ ಎಂದರು.
ಇತ್ತೀಚೆಗೆ ಐಜಿಪಿ ಕಮಾಂಡಂಟೇಷನ್ ಡಿಸ್ಕ್ ಪ್ರಶಸ್ತಿಗೆ ಭಾಜನರಾದ ನಗರಠಾಣೆಯ ಬರಹಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಸ್.ಎ.ಮನೋಹರ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಬೆಹನ್ ನಾಗಶ್ರೀ, ತಾಲೂಕು ಹನುಮಂತೋತ್ಸವ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, ಕೃಷ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net