ಬೆಟ್ಟದಪುರ ಸಮೀಪದ ಅಡಗೂರು ಗ್ರಾಮದ ಇಬ್ಬನಿ ಜ್ಞಾನ ವಿಕಾಸ ಕೇಂದ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಲಕ್ಷ್ಮೀ ಪೂಜೆ ಹಾಗೂ ಸೃಜನಶೀಲ ವಿವಿಧ ತರಬೇತಿ ಕಾರ್ಯಾಗಾರ ನಡೆಯಿತು. ಆರೋಗ್ಯ ಇಲಾಖೆಯ ದಿವ್ಯಾರಾಣಿ, ಮುಖಂಡ ಶಿವಣ್ಣ, ಅಂಗನವಾಡಿ ಶಿಕ್ಷಕಿ ನಾಗಮಣಿ, ವಲಯ ಮೇಲ್ವಿಚಾರಕ ಶಿವರಾಜ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸವಿತಾ, ಸೇವಾಪ್ರತಿನಿಧಿ ಸಣ್ಣೇಗೌಡ, ಒಕ್ಕೂಟ ಅಧ್ಯಕ್ಷೆ ಕಾಂತಮಣಿ, ಡೇರಿ ಕಾರ್ಯದರ್ಶಿ ಆಶಾ ಹಾಗೂ ಕೇಂದ್ರದ ಸದಸ್ಯರು ಇದ್ದರು.
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಅಡಗೂರು ಗ್ರಾಮದ ಇಬ್ಬನಿ ಜ್ಞಾನ ವಿಕಾಸ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಇತ್ತೀಚೆಗೆ ಲಕ್ಷ್ಮೀ ಪೂಜೆ ಹಾಗೂ ಸೃಜನಶೀಲ ವಿವಿಧ ತರಬೇತಿ ಕಾರ್ಯಾಗಾರ ನಡೆಯಿತು.
ವಲಯ ಯೋಜನಾಧಿಕಾರಿ ಶೇಖರ್ ಗೌಡ ಮಾತನಾಡಿ, ಜ್ಞಾನ ವಿಕಾಸ ಕೇಂದ್ರಗಳ ಮೂಲಕ ಮಹಿಳೆಯರಲ್ಲಿ ಸ್ವಾವಲಂಬನೆ, ಕೌಶಲಾಭಿವೃದ್ಧಿ ಹಾಗೂ ಸೃಜನಶೀಲತೆ ಬೆಳೆಸುವ ನಿಟ್ಟಿನಲ್ಲಿ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಹಿಳೆಯರು ತರಬೇತಿಯ ಪ್ರಯೋಜನ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ದಿವ್ಯಾರಾಣಿ, ಮುಖಂಡ ಶಿವಣ್ಣ, ಅಂಗನವಾಡಿ ಶಿಕ್ಷಕಿ ನಾಗಮಣಿ, ವಲಯ ಮೇಲ್ವಿಚಾರಕ ಶಿವರಾಜ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸವಿತಾ, ಸೇವಾಪ್ರತಿನಿಧಿ ಸಣ್ಣೇಗೌಡ, ಒಕ್ಕೂಟ ಅಧ್ಯಕ್ಷೆ ಕಾಂತಮಣಿ, ಡೇರಿ ಕಾರ್ಯದರ್ಶಿ ಆಶಾ ಹಾಗೂ ಕೇಂದ್ರದ ಸದಸ್ಯರು ಇದ್ದರು.