ಶೌಚಗೃಹ ಸಮಸ್ಯೆ ಬಗೆಹರಿಸಲು ಆಗ್ರಹ

ಸರಗೂರು ತಾಲೂಕಿನ ಪಟ್ಟಣದ ಒಂದನೇ ಮುಖ್ಯ ರಸ್ತೆಯಲ್ಲಿರುವ ಶೌಚಗೃಹ ತೆರೆಯುವಂತೆ ಒತ್ತಾಯಿಸಿ ಕರ್ನಾಟಕ ಯುವರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿತು. ಎಂ.ಅಭಿಲಾಷ, ಉಸ್ತುವಾರಿ ನಾಗರಾಜು, ಸದಸ್ಯರಾದ ಲೋಕೇಶ್, ರಾಜೇಶ್, ಶ್ರೀಕಾಂತ್, ಜೈಕುಮಾರ, ಮಹೇಶ್, ಸತೀಶ್, ರವಿ, ನವೀನ, ದಿಲೀಪ, ನಿಂಗಪ್ಪ, ರಮೇಶ್, ಕುಮಾರ, ನಾಗರಾಜು, ಶೇಖರ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಯುವರಕ್ಷಣಾ ವೇದಿಕೆ ಪ್ರತಿಭಟನೆ
ಸರಗೂರು: ಪಟ್ಟಣದ ಒಂದನೇ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಿರುವ ಶೌಚಗೃಹ ಕಾಮಗಾರಿ ಪೂರ್ಣಗೊಂಡು ಒಂದು ವರ್ಷ ಕಳೆದರೂ ಇದುವರೆಗೆ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿಲ್ಲ ಎಂದು ಆರೋಪಿಸಿ ಕರ್ನಾಟಕ ಯುವರಕ್ಷಣಾ ವೇದಿಕೆಯ ತಾಲೂಕು ಘಟಕದಿಂದ ಗುರುವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ಯುವರಕ್ಷಣಾ ವೇದಿಕೆ ಅಧ್ಯಕ್ಷ ಜಯೇಂದ್ರ ಮಾತನಾಡಿ, ಸಾರ್ವಜನಿಕರ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕೂಡಲೇ ಶೌಚಗೃಹವನ್ನು ಜನರ ಬಳಕೆಗೆ ಮುಕ್ತಗೊಳಿಸಬೇಕು. ಸಾರ್ವಜನಿಕರಿಗೆ ಅನುಕೂಲವಾಗಬೇಕಿದ್ದ ಶೌಚಗೃಹವು ವರ್ಷ ಕಳೆದರೂ ಬಳಕೆಗೆ ಬಾರದಿರುವ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು. ಅಧಿಕಾರಿಗಳು ಮತ್ತೆ ನಿರ್ಲಕ್ಷ್ಯ ತೋರಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ಸ್ಥಳೀಯ ಮುಖಂಡ ರಮೇಶ್ ಮಾತನಾಡಿ, ಎಸ್‌ಬಿಐ ಬ್ಯಾಂಕ್‌ಗೆ ಪ್ರತಿನಿತ್ಯ ನೂರಾರು ಜನರು ಆಗಮಿಸುತ್ತಾರೆ. ಆದರೆ ಶೌಚಗೃಹ ತೆರೆಯದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ಯುವರಕ್ಷಣಾ ವೇದಿಕೆಯ ಉಪಾಧ್ಯಕ್ಷ ಎಂ.ಅಭಿಲಾಷ, ಉಸ್ತುವಾರಿ ನಾಗರಾಜು, ಸದಸ್ಯರಾದ ಲೋಕೇಶ್, ರಾಜೇಶ್, ಶ್ರೀಕಾಂತ್, ಜೈಕುಮಾರ, ಮಹೇಶ್, ಸತೀಶ್, ರವಿ, ನವೀನ, ದಿಲೀಪ, ನಿಂಗಪ್ಪ, ರಮೇಶ್, ಕುಮಾರ, ನಾಗರಾಜು, ಶೇಖರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net