ದಂಪತಿ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯ

ಸುಧಾ
ಸುಧಾ
Published on
ನಂಜನಗೂಡು: ದಂಪತಿ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಪತಿಯೇ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಕಳಲೆ ಗ್ರಾಮದ ದೊಡ್ಡ ಬೀದಿ ನಿವಾಸಿ ಸುಧಾ (30) ಕೊಲೆಯಾದ ಮಹಿಳೆ. 13 ವರ್ಷಗಳ ಹಿಂದೆ ಕಳಲೆ ಗ್ರಾಮದಿಂದ ಮಲ್ಲಹಳ್ಳಿ ಗ್ರಾಮದ ಮಹೇಶ್‌ನೊಂದಿಗೆ ಸುಧಾ ವಿವಾಹವಾಗಿತ್ತು. ದಾಂಪತ್ಯ ಕಲಹದಿಂದಾಗಿ ಎರಡು ವರ್ಷಗಳಿಂದ ಮಹೇಶ್ ಪತ್ನಿಯಿಂದ ದೂರವಾಗಿದ್ದ. ಹಾಗಾಗಿ ಸುಧಾ ಕಳಲೆ ಗ್ರಾಮದ ದೊಡ್ಡ ಬೀದಿಯಲ್ಲಿ ತಾಯಿ ಮತ್ತು ಮಕ್ಕಳ ಜತೆ ವಾಸವಿದ್ದಳು. ಗುರುವಾರ ರಾತ್ರಿ 10 ಗಂಟೆ ಸಮಯದಲ್ಲಿ ದಿಢೀರ್ ಮನೆಗೆ ಬಂದ ಮಹೇಶ್ ಪತ್ನಿಯೊಂದಿಗೆ ಜಗಳ ಶುರು ಮಾಡಿದ್ದಾನೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಮನೆಯಲ್ಲಿದ್ದ ಮರದ ಪಟ್ಟಿಯಿಂದ ಪತ್ನಿಯ ತಲೆಯ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಸ್ಥಳದಲ್ಲಿಯೇ ಸುಧಾ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಮೈಸೂರು ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ, ಡಿವೈಎಸ್ಪಿ ರಘು, ವೃತ್ತ ನಿರೀಕ್ಷಕ ಆನಂದ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ಮಹೇಶ್ ಪರಾರಿಯಾಗಿದ್ದಾನೆ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net